ದೇಶ

ಮಂಡ್ಸಾರ್ ಅತ್ಯಾಚಾರ ಪ್ರಕರಣ: ಅತ್ಯಾಚಾರಿಯ ಶಿರಚ್ಛೇಧ ಮಾಡಿದರೆ 5 ಲಕ್ಷ ಬಹುಮಾನ ಘೋಷಿಸಿದ ಬಿಜೆಪಿ

ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಮಂಡ್ಸಾರ್ ಅತ್ಯಾಚಾರ ಪ್ರಕರಣದ ಅತ್ಯಾಚಾರಿಯ ಶಿರಚ್ಛೇಧ ಮಾಡಿದರೆ 5 ಲಕ್ಷ ಬಹುಮಾನ ನೀಡುವುದಾಗಿ ಬಿಜೆಪಿ ನಾಯಕ ಸಂಜೀವ್ ಮಿಶ್ರಾ ಹೇಳಿದ್ದಾರೆ.

ಮಂಡ್ಸಾರ್ ಅತ್ಯಾಚಾರ ಪ್ರಕರಣ: ಅತ್ಯಾಚಾರಿಯ ಶಿರಚ್ಛೇಧ ಮಾಡಿದರೆ 5 ಲಕ್ಷ ಬಹುಮಾನ ಘೋಷಿಸಿದ ಬಿಜೆಪಿ
ಬಿಜೆಪಿ ನಾಯಕ ಸಂಜೀವ್ ಮಿಶ್ರಾ
Published On :
ನವದೆಹಲಿ: ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಮಂಡ್ಸಾರ್ ಅತ್ಯಾಚಾರ ಪ್ರಕರಣದ ಅತ್ಯಾಚಾರಿಯ ಶಿರಚ್ಛೇಧ ಮಾಡಿದರೆ 5 ಲಕ್ಷ ಬಹುಮಾನ ನೀಡುವುದಾಗಿ ಬಿಜೆಪಿ ನಾಯಕ ಸಂಜೀವ್ ಮಿಶ್ರಾ ಹೇಳಿದ್ದಾರೆ. 
ಮಧ್ಯಪ್ರದೆಶದ ಮಂಡ್ಸಾರ್ ನಲ್ಲಿ 7 ವರ್ಷದ ಬಾಲಕಿಯ ಮೇಲೆ ಇರ್ಫಾನ್ ಖಾನ್ (20) ಆಸೀಫ್ (24) ಭೀಕರವಾಗಿ ಅತ್ಯಾಚಾರ ನಡೆಸಿದ್ದರು.  ನಿರ್ಭಯಾ ಪ್ರಕರಣದ ಮಾದರಿಯಲ್ಲೆ 7 ವರ್ಷದ ಬಾಲಕಿಯ ಮರ್ಮಾಂಗವನ್ನು ಘಾಸಿಗೊಳಿಸಿದ್ದ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗಬೇಕೆಂಬ ಒತ್ತಾಯ ದೇಶಾದ್ಯಂತ ಕೇಳಿಬರುತ್ತಿದ್ದರೆ, ಬಿಜೆಪಿ ನಾಯಕ ಸಂಜೀವ್ ಮಿಶ್ರಾ ಗ್ಯಾಂಗ್ ರೇಪ್ ಆರೋಪಿಗಳ ಶಿರಚ್ಛೇಧ ಮಾಡಿದವರಿಗೆ 5 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. 
ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸುವುದಕ್ಕೆ ಕಾನೂನು ಅಥವಾ ಆಡಳಿತ ವಿಫಲವಾದರೆ ಅತ್ಯಾಚಾರಿಗಳ ಶಿರಚ್ಛೇಧ ಮಾಡುವವರಿಗೆ 5 ಲಕ್ಷ ಬಹುಮಾನ ನೀಡುವುದಾಗಿ ಸಂಜೀವ್ ಮಿಶ್ರಾ ಹೇಳಿದ್ದಾರೆ. ಶಾಲೆ ಮುಗಿಸಿಕೊಂಡು ವಾಪಸ್ಸಾಗಬೇಕಿದ್ದ ಬಾಲಕಿಯನ್ನು ಮನೆಗೆ ಕರೆದೊಯ್ಯಲು ಪೋಷಕರು ಬರುವ ವೇಳೆಗೆ ತಡವಾಗಿತ್ತು. ಇದೇ ಪರಿಸ್ಥಿತಿಯ ಲಾಭ ಪಡೆದಿದ್ದ ಇರ್ಫಾನ್ ಖಾನ್ (20) ಆಸೀಫ್ (24) ಬಾಲಕಿಗೆ ಸಿಹಿ ತಿನಿಸುಗಳ ಆಮಿಷವೊಡ್ಡಿ ಕರೆದೊಯ್ದು ಭೀಕರವಾಗಿ ಅತ್ಯಾಚಾರವೆಸಗಿ, ಗುದದ್ವಾರದ ಚರ್ಮವನ್ನು ಛಿದ್ರಗೊಳಿಸಿ ಜನನಾಂಗದಲ್ಲಿ ವಸ್ತುಗಳನ್ನು ತುರುಕಿದ್ದರು.  ಅತ್ಯಾಚಾರಕ್ಕೊಳಗಾದ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.