ದೇಶ

ಮಹಾರಾಷ್ಟ್ರ: ಮಕ್ಕಳ ಕಳ್ಳರ ವದಂತಿ, ಐವರನ್ನು ಹತ್ಯೆ ಮಾಡಿದ ಗ್ರಾಮಸ್ಥರು

ದುಲೆ ಜಿಲ್ಲೆಯ ಗ್ರಾಮವೊಂದರಲ್ಲಿ ಮಕ್ಕಳ ಕಳ್ಳರೆಂದು ಭಾವಿಸಿ ಐವರು ಅಮಾಯಕರನ್ನು ಗ್ರಾಮಸ್ಥರು ಸೇರಿ ಮನಬಂದಂತೆ ಥಳಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.

ಮಹಾರಾಷ್ಟ್ರ: ಮಕ್ಕಳ ಕಳ್ಳರ ವದಂತಿ,  ಐವರನ್ನು ಹತ್ಯೆ ಮಾಡಿದ  ಗ್ರಾಮಸ್ಥರು
ಹಲ್ಲೆಯ ಚಿತ್ರ
Published On :
ದುಲೆ: ಕೆಲ ದಿನಗಳ ಹಿಂದೆ ಕರ್ನಾಟಕದಲ್ಲಿ ಆತಂಕಕ್ಕೆ ಕಾರಣವಾಗಿದ್ದ ಮಕ್ಕಳ ಕಳ್ಳರ ವದಂತಿ  ಮಹಾರಾಷ್ಟ್ರದಲ್ಲಿ ವ್ಯಾಪಿಸಿದ್ದು, ಐವರು ಅಮಾಯಕರು ಬಲಿಯಾಗಿದ್ದಾರೆ. ದುಲೆ ಜಿಲ್ಲೆಯ ಗ್ರಾಮವೊಂದರಲ್ಲಿ ಮಕ್ಕಳ ಕಳ್ಳರೆಂದು ಭಾವಿಸಿ ಐವರು ಅಮಾಯಕರನ್ನು ಗ್ರಾಮಸ್ಥರು ಸೇರಿ ಮನಬಂದಂತೆ ಥಳಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ರೈನಪಾಡದ ಬುಡುಕಟ್ಟು ಜನಾಂಗದವರು ಇನ್ನಿತರರೊಂದಿಗೆ ಐವರು ರಾಜ್ಯ ಸಾರಿಗೆ ಬಸ್ಸಿನಲ್ಲಿ ಇಳಿಯುವುದನ್ನು ನೋಡಿದ್ದಾರೆ. ಅವರಲ್ಲಿ ಒಬ್ಬ ಆಗಾಗ್ಗೆ  ಬಾಲಕಿಯನ್ನು  ಮಾತನಾಡಿಸಲು ಪ್ರಯತ್ನಿಸುವುದನ್ನು ಗ್ರಾಮಸ್ಥರು ನೋಡಿದ್ದಾರೆ.  ವಾರಾಂತ್ಯ ದಿನವಾದ ಇಂದು ಗ್ರಾಮಸ್ಥರೆಲ್ಲರು ಹಿಂಡು ಹಿಂಡಾಗಿ ಬಂದಿ ಐವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆ ಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲ ದಿನಗಳಿಂದ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಈ ಪ್ರದೇಶದಲ್ಲಿ ಹರಡಿತ್ತು. ಗ್ರಾಮಕ್ಕೆ ಯಾರೇ ಹೊಸಬರು ಬಂದರೂ ಅನುಮಾನದಿಂದ ನೋಡಲಾಗುತಿತ್ತು. ಇದರಿಂದಾಗಿ ಐವರು ಕೊಲೆಯಾಬೇಕಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.