ದೇಶ

ಹರಿಯಾಣ: ದೀಪಿಕಾ ತಲೆಗೆ ಬೆಲೆ ಕಟ್ಟಿದ್ದ ಸೂರಜ್‌ಪಾಲ್‌ ಅಮು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ

ಹರಿಯಾಣದ ಬಿಜೆಪಿ ನಾಯಕ ಸೂರಜ್‌ಪಾಲ್‌ ಅಮು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಹರಿಯಾಣ: ದೀಪಿಕಾ ತಲೆಗೆ ಬೆಲೆ ಕಟ್ಟಿದ್ದ ಸೂರಜ್‌ಪಾಲ್‌ ಅಮು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ
ಸೂರಜ್‌ಪಾಲ್‌ ಅಮು
Published On :
ನವದೆಹಲಿ: ಹರಿಯಾಣದ ಬಿಜೆಪಿ ನಾಯಕ ಸೂರಜ್‌ಪಾಲ್‌ ಅಮು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಬಾಂದಿ ಜೈಲಿನಿಂದ ಬಿಡುಗಡೆಯಾದ ಬಳಿಕ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಗುರುಗ್ರಾಮದಲ್ಲಿ ನಡೆದ ಪದ್ಮಾವತ್ ವಿರೋಧಿ ಹಿಂಸಾಚಾರದಲ್ಲಿ ಭಾಗವಹಿಸಿದ್ದಾರೆ ಎಂಬ ಆರೋಪದಲ್ಲಿ ಜ.25ರಂದು ಹರಿಯಾಣ ಪೋಲೀಸರು ಸೂರಜ್‌ಪಾಲ್‌ ಅಮು ಅವರನ್ನು ಬಂಧಿಸಿದ್ದರು. ನ್ಯಾಯಾಲಯವು ಅಮು ಅವರಿಗೆ ನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿತ್ತು. ಗುರುಗ್ರಾಮ ಶಾಲಾ ಬಸ್ ಮೇಲೆ ದಾಳಿ ನಡೆದ ಘಟನೆಯಲ್ಲಿ ಸಹ ಅಮು ಅವರ ಪಾತ್ರವಿರುವ ಬಗ್ಗೆ ಪೋಲೀಸರು ಶಂಕೆ ವ್ಯಕ್ತಪಡಿಸಿದ್ದರು.
"ವಿವಾದಾತ್ಮಕ ಚಿತ್ರ ಪದ್ಮಾವತ್ ನ್ನು ರಾಷ್ಟ್ರಾದ್ಯಂತ ಬಿಡುಗಡೆಗೊಳಿಸಲು ಕಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಅವಕಾಶ ನೀಡಿರುವುದು ನನಗೆ ದುಃಖವನ್ನುಂಟು ಮಾಡಿದೆ. ಇದು ರಜಪೂತ ಸಮುದಾಯದ ಸುಮಾರು 12 ಕೋಟಿ ಜನರ ಭಾವನೆಗೆ ಘಾಸಿ ಮಾಡುತ್ತದೆ ಹರಿಯಾಣ ಹಾಗೂ ಕೇಂದ್ರ ಸರ್ಕಾರ ಸಂಪೂರ್ಣ ಪ್ರತಿಭಟನೆಯನ್ನು ಭಯೋತ್ಪಾದಕ ಹಾಗು ಸಮಾಜ ವಿರೋಧಿ ಎಂದು ಹೇಳಿರುವುದು ನನಗೆ ನನಗೆ ಅಚ್ಚರಿ ತಂದಿದೆ. ನಾನು ಹರಿಯಾಣ ಬಿಜೆಪಿಯ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದೇನೆ ಎಸ್.ಎಂ.ಎಸ್, ಇ-ಮೇಲ್, ಟ್ವೀಟ್ ಮತ್ತು ಫೇಸ್ ಬುಕ್ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಸುಭಾಷ್ ಬರಾಲಾ ಅವರಿಗೆ ಈ ಕುರಿತು ಮಾಹಿತಿ ನೀಡಿದ್ದೇನೆ." ಸೂರಜ್‌ಪಾಲ್‌ ಅಮು ಹೇಳಿದರು.
ಸಂಜಯ್ ಲೀಲಾ ಭನ್ಸಾಲಿ ಅವರ ಪದ್ಮಾವತ್ "ಐತಿಹಾಸಿಕ ಸತ್ಯಗಳನ್ನು ವಿರೂಪಗೊಳಿಸಿದೆ" ಮತ್ತು ರಾಣಿ ಪದ್ಮಾವತಿಯ ವ್ಯಕ್ತಿತ್ವಕ್ಕೆ ಮಸಿ ಬಳಿದಿದೆ ಎಂದು ಹೇಳಕಾಗಿದ್ದು ಹಲವು ರಜಪೂತ್ ಸಮುದಾಯಗಳು ಇದರ ವಿರುದ್ಧ ಸತತ ಪ್ರತಿಭಟನೆಯಲ್ಲಿ ತೊಡಗಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.