ಬಾನಂಗಳದಲ್ಲಿ ಅಪರೂಪದ ಗ್ರಹಣ, ಕೆಂಪು ಬಣ್ಣಕ್ಕೆ ತಿರುಗಿದ ಚಂದ್ರನ ವರ್ಣ
ಬಾನಂಗಳದಲ್ಲಿ ಅಪರೂಪದ ಗ್ರಹಣ ಸಂಭವಿಸಿದ್ದು, ಹುಣ್ಣಿಮೆಯ ದಿನದಂದು ಶ್ವೇತ ವರ್ಣದಲ್ಲಿ ಕಂಗೊಳಿಸುವ ಚಂದ್ರ ಈ ದಿನ ಕೆಂಪು ಬಣ್ಣಕ್ಕೆ ತಿರುಗಿದ್ದ.

Published On :
ನವದೆಹಲಿ: ಬಾನಂಗಳದಲ್ಲಿ ಅಪರೂಪದ ಗ್ರಹಣ ಸಂಭವಿಸಿದ್ದು, ಹುಣ್ಣಿಮೆಯ ದಿನದಂದು ಶ್ವೇತ ವರ್ಣದಲ್ಲಿ ಕಂಗೊಳಿಸುವ ಚಂದ್ರ ಈ ದಿನ ಕೆಂಪು ಬಣ್ಣಕ್ಕೆ ತಿರುಗಿದ್ದ.
35 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೂಪರ್ ಬ್ಲೂ ಬ್ಲಡ್ ಮೂನ್ ಕಾಣಿಸಿಕೊಂಡಿದ್ದು, ಭಾರತದಲ್ಲಷ್ಟೇ ಅಲ್ಲದೇ ಪಶ್ಚಿಮ ಅಮೆರಿಕ, ಈಸ್ಟ್ ಕೋಸ್ಟ್, ರಷ್ಯಾ, ಯುರೋಪ್, ದಕ್ಷಿಣ ಅಮೆರಿಕದ ಬಹುತೇಕ ಪ್ರದೇಶ, ಆಫ್ರಿಕಗಳಲ್ಲಿಯೂ ಸೂಪರ್ ಬ್ಲೂ ಬ್ಲಡ್ ಮೂನ್ ಕಾಣಿಸಿಕೊಂಡಿದೆ.
35 ವರ್ಷಗಳ ಬಳಿಕ ಮೊದಲ ಬಾರಿಗೆ ಸಂಪೂರ್ಣ ಚಂದ್ರಗ್ರಹಣ ಗೋಚರಿಸುತ್ತಿದ್ದು, ವಿಶೇಷ ಚಂದ್ರ ಗ್ರಹಣವನ್ನು ನಾಸಾ ಸಾಮಾಜಿಕ ಜಾಲತಾಣಗಳಲ್ಲಿ ನೇರ ಪ್ರಸಾರ ಮಾಡಿತ್ತು. ಇಂತಹ ಚಂದ್ರಗ್ರಹಣ ಕೊನೆಯ ಬಾರಿಗೆ 1866ರ ಮಾರ್ಚ್ 31 ರಂದು ಘಟಿಸಿತ್ತು. ಇದಾದ ಬಳಿಕ 150 ವರ್ಷಗಳ ಬಳಿಕ ಘಟಿಸಿದೆ. ಇಂತಹ ಮತ್ತೊಂದು ಚಂದ್ರಗ್ರಹಣ 2037ಕ್ಕೆ ಸಂಭವಿಸುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


