ಶೋಪಿಯಾನ್ ದಾಳಿ ಪ್ರಕರಣ: ಪೊಲೀಸರ ಎಫ್ಐಆರ್‌ಗೆ ಪ್ರತಿಯಾಗಿ ಸೇನೆಯಿಂದಲೂ ಎಫ್ಐಆರ್
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಫೈರಿಂಗ್ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸೇನೆಯ ಮೇಜರ್ ವಿರುದ್ಧ ಎಫ್ಐಆರ್ ದಾಖಲಿಸಿದ ಬೆನ್ನಲ್ಲೇ ಇದಕ್ಕೆ...

Published On :
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಫೈರಿಂಗ್ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸೇನೆಯ ಮೇಜರ್ ವಿರುದ್ಧ ಎಫ್ಐಆರ್ ದಾಖಲಿಸಿದ ಬೆನ್ನಲ್ಲೇ ಇದಕ್ಕೆ ಪ್ರತಿಯಾಗಿ ಸೇನೆಯೂ ಕೂಡ ಎಫ್ಐಆರ್ ದಾಖಲಿಸಿದೆ.
ಜನವರಿ 27ರಂದು ಜಮ್ಮು ಕಾಶ್ಮೀರದ ಶೋಪಿಯಾನದಲ್ಲಿ ಉದ್ರಿಕ್ತರು ಮತ್ತು ಭದ್ರತಾ ಪಡೆ ಯೋಧರ ನಡುವೆ ಘರ್ಷಣೆ ನಡೆದಿತ್ತು. ಈ ವೇಳೆ ಉದ್ರಿಕ್ತರ ನಮ್ಮ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಇದರಲ್ಲಿ 7 ಯೋಧರು ಗಾಯಗೊಂಡಿದ್ದರು. ಇದರಿಂದಾಗಿ ತಾವು ಆತ್ಮರಕ್ಷಣೆಗಾಗಿ ಫೈರಿಂಗ್ ನಡೆಸಬೇಕಾಯಿತು ಎಂದು ಸೇನೆ ಹೇಳಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿನ ಪಿಡಿಪಿ ಸರ್ಕಾರ ಈ ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.
ಕಾಶ್ಮೀರದ ದಂಡ ಸಂಹಿತೆಯಾದ ರಣಬೀರ್ ದಂಡ ಸಂಹಿತೆಯ 302ನೇ ವಿಧಿ(ಕೊಲೆ) ಹಾಗೂ 307(ಕೊಲೆ ಯತ್ನ)ದ ಆರೋಪದ ಮೇಲೆ ಸೇನೆಯ ಘಟಕದ ಮೇಲೆ ಎಫ್ಐಆರ್ ದಾಖಲಿಸಲಾಗಿತ್ತು. ಗಲಭೆ ಸಂದರ್ಭದಲ್ಲಿ ಘಟಕದ ಉಸ್ತುವಾರಿ ವಹಿಸಿದ್ದ ಮೇಜರ್ ಹೆಸರನ್ನೂ ಆರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ.
ಗನ್ವೊಪೊರಾ ಬಳಿ ಸೇನೆಯ ತುಕಡಿಯೊಂದು ಹೋಗುತ್ತಿದ್ದ ಸಂದರ್ಭ 100 ರಿಂದ 200 ಮಂದಿ ದಂಗೆಕೋರರು ಹಠಾತ್ತನೇ ಕಲ್ಲು ತೂರಾಟ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indian Armyಜಮ್ಮು ಮತ್ತು ಕಾಶ್ಮೀರJammu and KashmirFIRಭಾರತೀಯ ಸೇನೆಎಫ್ಐಆರ್Shopian firing caseಶೋಪಿಯಾನ್ ಫೈರಿಂಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


