ದೇಶ

ಇಂಡೋನೇಷಿಯಾ ಮಾಸ್ಟರ್ಸ್ ಅಂತಿಮ ಸುತ್ತು ಪ್ರವೇಶಿಸಿದ ಸೈನಾ ನೆಹ್ಫ್ವಾಲ್

ರಿಯೋ ಒಲಂಪಿಕ್ಸ್ ಕಂಚಿನ ಪದಕ ವಿಜೇತೆ ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಇಂಡೋನೇಷಿಯಾ ಓಪನ್ ಬ್ಯಾಡ್ಮಿಂಟನ್ ಸರಣಿ ಫೈನಲ್ ಸುತ್ತು ಪ್ರವೇಶಿಸಿದ್ದಾರೆ.

ಇಂಡೋನೇಷಿಯಾ ಮಾಸ್ಟರ್ಸ್ ಅಂತಿಮ ಸುತ್ತು ಪ್ರವೇಶಿಸಿದ ಸೈನಾ ನೆಹ್ಫ್ವಾಲ್
ಸೈನಾ ನೆಹ್ವಾಲ್
Published On :
ಜಕಾರ್ತಾ: ರಿಯೋ ಒಲಂಪಿಕ್ಸ್ ಕಂಚಿನ ಪದಕ ವಿಜೇತೆ ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಇಂಡೋನೇಷಿಯಾ ಓಪನ್ ಬ್ಯಾಡ್ಮಿಂಟನ್ ಸರಣಿ ಫೈನಲ್ ಸುತ್ತು ಪ್ರವೇಶಿಸಿದ್ದಾರೆ.
ಒಟ್ಟು 49 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸೈನಾ ತನ್ನ ಎದುರಾಳಿಯಾಗಿದ್ದ ಥಾಯ್ ಲ್ಯಾಂಡಿನ ರತ್ನೋಕ್ ಇಂಟಾನಾನ್ ಅವರನ್ನು 21-19, 21-19 ಸೆಟ್ ಗಳಿಂದ ಪರಾಭವಗೊಳಿಸಿದರು.
ಇದಕ್ಕೂ ಮುನ್ನ ನಡೆದ    ಕ್ವಾರ್ಟರ್  ಸುತ್ತಿನ ಪಂದ್ಯದಲ್ಲಿ ಭಾರತದ ಇನ್ನೋರ್ವ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು 21-13, 21-19 ನೇರ ಸೆಟ್ ಗಳಿಂದ ಸೈನಾ ನೆಹ್ವಾಲ್ ಅವರಿಂದ ಪರಾಜಿತರಾಗಿದ್ದರು.
ಸೈನಾ ನೆಹ್ವಾಲ್ ಕಳೆದ ವರ್ಷ ಮಲೇಷಿಯಾ ಮಾಸ್ಟರ್ಸ್ ಸರಣಿ ಜಯಿಸಿದ ಬಳಿಕ ಇದೀಗ ಮತ್ತೆ ಅಂತರಾಷ್ಟ್ರೀಯ ಪಂದ್ಯದ ಅಂತಿಮ ಸುತ್ತು ಪ್ರವೇಶಿಸಿದ್ದಾರೆ. ಒಂದೊಮ್ಮೆ ಈ ಪ್ರಶಸ್ತಿ ಸೈನಾಗೆ ಒಲಿದರೆ ಅವರ ವೃತ್ತಿ ಜೀವನದಲ್ಲಿ ಇಂಡೋನೇಷಿಯಾ ಓಪನ್ ಕಿರೀಟವನ್ನು ನಾಲ್ಕನೇ ಬಾರಿಗೆ ಮುಡಿಗೇರಿಸಿಕೊಳ್ಳಲಿದ್ದಾರೆ. ಈ ಭಾನುವಾರ ಅಂತಿಮ ಸುತ್ತಿನ ಪಂದ್ಯಗಳು ನಡೆಯಲಿದ್ದು ಚೀನಾದ ತೈ ತೈ ಝಿಂಗ್ ಅಥವಾ ಚೀನಾದ ಬಿಂಗ್ಜಿಯಾ ಅವರನ್ನು ಎದುರಿಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.