ದೇಶ

ಗಣರಾಜ್ಯೋತ್ಸವ ದಿನದಂದು ವಿಧ್ವಂಸಕ ಕೃತ್ಯವೆಸಗಲು ಬಂಧಿತ ಮಹಿಳಾ ಬಾಂಬರ್ ಸಂಚು!

ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದ ಮಹಿಳಾ ಆತ್ಮಾಹುತಿ ದಾಳಿಕೋರಳು ಗಣರಾಜ್ಯೋತ್ಸವ ದಿನದಂದು ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದಳೆಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ...

ಗಣರಾಜ್ಯೋತ್ಸವ ದಿನದಂದು ವಿಧ್ವಂಸಕ ಕೃತ್ಯವೆಸಗಲು ಬಂಧಿತ ಮಹಿಳಾ ಬಾಂಬರ್ ಸಂಚು!
ಜಮ್ಮು ಮತ್ತು ಕಾಶ್ಮೀರ ಪೊಲೀಸರು (ಸಂಗ್ರಹ ಚಿತ್ರ)
Published On :
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದ ಮಹಿಳಾ ಆತ್ಮಾಹುತಿ ದಾಳಿಕೋರಳು ಗಣರಾಜ್ಯೋತ್ಸವ ದಿನದಂದು ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ್ದಳೆಂಬ ಮಾಹಿತಿ ಇದೀಗ ಬಹಿರಂಗಗೊಂಡಿದೆ. 
ಆತ್ಮಹತ್ಯಾ ದಾಳಿಕೋರಳು ಎನ್ನಲಾದ ಪುಣೆ ಮೂಲದ ಯುವತಿಯನ್ನು ನಿನ್ನೆಯಷ್ಟೇ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧನಕ್ಕೊಳಪಡಿಸಿದ್ದರು. 
ಬಂಧಿತ ಬಾಂಬರ್'ಳನ್ನು ಸಾದಿಯಾ ಅನ್ವರ್ ಶೇಖ್ ಎಂದು ಹೇಳಲಾಗುತ್ತಿದ್ದು, ಈಕೆ ಇಸ್ಲಾಮಿಕ್ ಸ್ಟೇಟ್ (ಇಸಿಸ್) ಇಗ್ರರ ಸಂಪರ್ಕದಲ್ಲಿದ್ದಳು ಎಂದು ತಿಳಿದುಬಂದಿದೆ. 
ನಮಗೆ ಈ ಬಗ್ಗೆ ಸುಳಿವುಗಳಿದ್ದವು. ಈ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೆವು. ಇದರ ಜಾಡು ಬೆನ್ನಟ್ಟಿ ಹೋದಾಗ ಪುಣೆ ಮೂಲದ ಯುವತಿ ಸಿಕ್ಕಿಬಿದ್ದಳು ಎಂದು ಎಡಿಜಿಪಿ ಮುನೀರ್ ಖಾನ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. 
ಬಂಧಿತಳ ವಿಚಾರಣೆ ನಡೆದಿದೆ. ವಿವಿಧ ರಾಜ್ಯಗಳ ಪೊಲೀಸ್ ಇಲಾಖೆಗಳೊಂದಿಗೂ ನಾವು ಸಂಪರ್ಕದಲ್ಲಿದ್ದೇವೆ. ಇನ್ನೂ ಕೆಲ ಮಾಹಿತಿಗಳು ಸಿಗಬೇಕಿದ್ದು, ನಂತರ ಈ ವಿಷಯದಲ್ಲಿ ಒಂದು ತಾರ್ಕಿಕ ಅಂತ್ಯ ಕಾಣಲು ಸಾಧ್ಯವಿದೆ ಎಂದು ಹೇಳಿದ್ದಾರೆ. 
ಪುಣೆ ಕಾಲೇಜೊಂದರಲ್ಲಿ ಕೇವಲ 11ನೇ ತರಗತಿ (ಪ್ರಥಮ ಪಿಯುಸಿ) ಬಾಲಕಿಯಾದ ಸಾದಿಯಾ ಶೇಖ್, 2015ರಲ್ಲಿ ಕೂಡ ಒಮ್ಮೆ ಪುಣೆ ಪೊಲೀಸರಿಂದ ವಿಚಾರಣೆಗೊಳಪಟ್ಟಿದ್ದಳು. ಇಸಿಸ್ ತತ್ವಗಳ ಸೆಳೆತಕ್ಕೆ ಒಳಗಾಗಿ ಈಕೆ ಸಿರಿಯಾ ಹಾಗೂ ಇರಾಕ್'ಗೆ ತೆರಳಲು ಯೋಚನೆ ಮಾಡುತ್ತಿದ್ದಳು ಎಂಬ ಶಂಕೆಯ ಮೇರೆಗೆ ಪುಣೆ ಭಯೋತ್ಪಾದಕ ನಿಗ್ರದ ದಳದವರು ಈಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಳು. ಈಕೆಯನ್ನು ವಿಚಾರಣೆ ನಡೆಸಿ ಮನಃಪರಿವರ್ತನೆ ಕೇಂದ್ರಕ್ಕೂ ಕಳುಹಿಸಿಕೊಟ್ಟಿದ್ದರು. ಆದರೆ, ಹಳೆಯ ಚಾಳಿ ಬಿಡದ ಈಕೆ ಕಾಶ್ಮೀರಕ್ಕೆ ತೆರಳಿ ಉಗ್ರ ಚಟುವಟಿಕೆಗಳಲ್ಲಿ ನಿರತಳಾಗಿದ್ದಳು ಎಂದು ಮೂಲಗಳು ತಿಳಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.