ಮೈನಸ್ 30 ಡಿಗ್ರಿ ತಾಪಮಾನದಲ್ಲೂ 18 ಸಾವಿರ ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಭಾರತೀಯ ಯೋಧರು!
ದೇಶಾದ್ಯಂತ 69ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ಮುಗಿಲು ಮಟ್ಟಿರುವಂತೆಯೇ ಇತ್ತ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ ಸಿಬ್ಬಂದಿ ಮೈನಸ್ 30 ಡಿಗ್ರಿ ತಾಪಮಾನದಲ್ಲೂ 18 ಸಾವಿರ ಅಡಿ ಎತ್ತರದ ಗಡಿ ಪ್ರದೇಶದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ.

Published On :
ಶಿಮ್ಲಾ: ದೇಶಾದ್ಯಂತ 69ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ಮುಗಿಲು ಮಟ್ಟಿರುವಂತೆಯೇ ಇತ್ತ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ ಸಿಬ್ಬಂದಿ ಮೈನಸ್ 30 ಡಿಗ್ರಿ ತಾಪಮಾನದಲ್ಲೂ 18 ಸಾವಿರ ಅಡಿ ಎತ್ತರದ ಗಡಿ ಪ್ರದೇಶದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ.
ಈ ಬಗ್ಗೆ ಸ್ವತಃ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ ಪಡೆ ತನ್ನ ಟ್ವಿಟರ್ ಖಾತೆಯಲ್ಲಿ ವಿಡಿಯೋ ಮತ್ತು ಫೋಟೋ ಅಪ್ಲೋಡ್ ಮಾಡಿದ್ದು, ಐಟಿಬಿಪಿಯ ಒಂದು ತುಕಡಿ ಇಂಡೋ-ಟಿಬೆಟ್ ಗಡಿಯ ಗುಡ್ಡ ಪ್ರದೇಶಕ್ಕೆ ತೆರಳಿ ಅಲ್ಲಿ ತ್ರಿವರ್ಣ ಧ್ವಜ ಹಾರಿಸಿದೆ. ಸಂಪೂರ್ಣ ಹಿಮದಿಂದ ಕೂಡ ಪ್ರದೇಶದಲ್ಲಿ ಹರಸಾಹಸ ಪಟ್ಟು ತ್ರಿವರ್ಣ ಧ್ವಜದೊಂದಿಗೆ ತೆರಳಿದ ಸೈನಿಕರು, ಹರಸಾಹಸ ಪಟ್ಟು ತ್ರಿವರ್ಣ ಧ್ವಜ ಹಾರಿಸಿದ್ದಾರೆ.
ಯೋಧರು ತ್ರಿವರ್ಣ ಧ್ವಜದೊಂದಿಗೆ ತೆರಳುತ್ತಿರುವ ಮತ್ತು ಗುಡ್ಡ ಪ್ರದೇಶದಲ್ಲಿ ತ್ರಿವರ್ಣ ಧ್ವಜ ಹಾರಿಸಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಚೀನಾಕ್ಕೆ ಹೊಂದಿಕೊಂಡಿರುವ ಭಾರತೀಯ ಗಡಿ ರಕ್ಷಣೆ ಮಾಡುತ್ತಿರುವ ಐಟಿಬಿಪಿ ಪಡೆಗೆ ಟ್ವಿಟರ್ ಬಳಕೆದಾರರು ಶುಭಕೋರಿರುವುದು ಸೈನಿಕರ ದೇಶಭಕ್ತಿಯನ್ನು ಉತ್ತೇಜಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Indian Armyಭಾರತೀಯ ಸೇನೆಹಿಮಾಲಯHimalayaShimlaಶಿಮ್ಲಾತ್ರಿವರ್ಣ ಧ್ವಜ69th Republic Day69ನೇ ಗಣರಾಜ್ಯೋತ್ಸವ ದಿನಾಚರಣೆTri Colour Flag
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


