ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ: ರಾಜ್ ಪಥ್ ನಲ್ಲಿ 100 ಅಡಿ ಅಗಲದ ವಿಶಾಲ ವೇದಿಕೆ ನಿರ್ಮಾಣ!
ಇದೇ ಮೊದಲ ಬಾರಿಗೆ ಅಸಿಯಾನ್ ನಾಯಕರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿರುವ 69ನೇ ಗಣ ರಾಜ್ಯೋತ್ಸವ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ವಿದ್ಯುಕ್ತ ಕಾರ್ಯಕ್ರಮಕ್ಕೆ ಬರೊಬ್ಬರಿ 100 ಅಡಿ ಅಗಲದ ವಿಶಾಲ ವೇದಿಕೆ ನಿರ್ಮಾಣ ಮಾಡಲಾಗಿದೆ.

Published On :
ನವದೆಹಲಿ: ಇದೇ ಮೊದಲ ಬಾರಿಗೆ ಅಸಿಯಾನ್ ನಾಯಕರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿರುವ 69ನೇ ಗಣ ರಾಜ್ಯೋತ್ಸವ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ವಿದ್ಯುಕ್ತ ಕಾರ್ಯಕ್ರಮಕ್ಕೆ ಬರೊಬ್ಬರಿ 100 ಅಡಿ ಅಗಲದ ವಿಶಾಲ ವೇದಿಕೆ ನಿರ್ಮಾಣ ಮಾಡಲಾಗಿದೆ.
ಇನ್ನು ಭಾರತದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅಸಿಯಾನ್ ನಾಯಕರು ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಗಣರಾಜ್ಯೋತ್ಸವ ಪಥ ಸಂಚಲನಕ್ಕಾಗಿ ರಾಜಧಾನಿ ದೆಹಲಿಯ ರಾಜಪಥ್ ಮಾರ್ಗ ಸಂಪೂರ್ಣವಾಗಿ ಸಜ್ಜಾಗಿದೆ. ಅಸಿಯಾನ್ ಒಕ್ಕೂಟದ ಹತ್ತು ದೇಶಗಳ ಮುಖ್ಯಸ್ಥರು ಪ್ರಸಕ್ತ ಸಾಲಿನ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳತ್ತಿದ್ದು, ಥೈಲ್ಯಾಂಡ್, ವಿಯೆಟ್ನಾಂ, ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪ್ಪೀನ್ಸ್, ಸಿಂಗಾಪುರ, ಮಯನ್ಮಾರ್, ಕಾಂಬೋಡಿಯಾ, ಲಾವೋಸ್, ಬ್ರೂನೆ ದೇಶಗಳ ಪ್ರತಿನಿಧಿಗಳು ಭಾಗಿ ಭಾರತಕ್ಕೆ ಆಗಮಿಸಿದ್ದಾರೆ.
ಇದೇ ಕಾರಣಕ್ಕೆ ಈ ಬಾರಿ ಪಥ ಸಂಚಲನ ಮತ್ತು ಸ್ಥಬ್ದ ಚಿತ್ರಗಳ ಮೆರವಣಿಗೆ ಆಕರ್ಷಕವಾಗಿರಲಿದ್ದು, ಬಿಎಸ್ಎಫ್ ನ ಮಹಿಳಾ ಕಮಾಂಡೋಗಳ ಮೋಟಾರ್ ಬೈಕ್ ಸಾಹಸ ಪ್ರದರ್ಶನ ಸೇರಿದಂತೆ ನೌಕಾ ದಳದ ಏರ್ ಕ್ಯಾರಿಯರ್ ವಿಕ್ರಾಂತ್ ಮತ್ತು ಹೆಲಿಕ್ಯಾಪ್ಟರ್ ಕ್ಯಾರಿಯರ್ ರುದ್ರಾ ಸೇರಿದಂತೆ ಭಾರತೀಯ ಸೇನಾಪಡೆಯ ಹಲವಾರು ವಿಶೇಷ ಯುದ್ಧೋಪಕರಣಗಳು ವಾಹನಗಳು ಈ ಬಾರಿಯ ಪಥ ಸಂಚಲನದಲ್ಲಿ ಗಮನ ಸೆಳೆಯಲಿವೆ. ಆಸಿಯಾನ್ ರಾಷ್ಟ್ರಗಳಿಗೆ ಭಾರತದ ಎಂ-17 ವಿ5 ಹೆಲಿಕಾಪ್ಟರ್ ಆಗಸದಲ್ಲಿ ಧ್ವಜವಂದನೆ ಸಲ್ಲಿಕೆ ಮಾಡಲಿದ್ದು, ಏರ್ ಬಾರ್ನ್ ವಾರ್ನಿಂಗ್ ಕಂಟ್ರೋಲರ್ ‘ನೇತ್ರ’ ವಿಮಾನ ತನ್ನ ಪ್ರದರ್ಶನದ ಮೂಲಕ ಗಣ್ಯರ ಗಮನ ಸೆಳೆಯಲಿದೆ.
ಇದಲ್ಲದೆ 38 ವಿವಿಧ ಯುದ್ಧ ಹೆಲಿಕಾಫ್ಟರ್ಗಳಿಂದ ವೈಮಾನಿಕ ಪ್ರದರ್ಶನ, ಬಿಎಸ್ಎಫ್ ಯೋಧರಿಂದ ಒಂಟೆ ಮತ್ತು 51 ಕುದುರೆಗಳ ಪಥಸಂಚಲನ, ಸೀಮಾ ಭವಾನಿ ತಂಡದ 113 ಮಹಿಳಾ ಯೋಧರಿಂದ ಬೈಕ್ ಸಾಹಸ ಪ್ರದರ್ಶನ ಮಾಡಲಿದ್ದು, ಸರ್ಕಾರದ ವಿವಿಧ ಸಚಿವಾಲಯ ಮತ್ತು ವಿವಿಧ ರಾಜ್ಯಗಳ ಸ್ಥಬ್ಧ ಚಿತ್ರಗಳು ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿವೆ. ಪ್ರಮುಖವಾಗಿ ಮನ್ಕೀ ಬಾತ್, ಕರ್ನಾಟಕದ ವನ್ಯಜೀವಿ, ಐಟಿಬಿಪಿ ಸೇರಿ 23 ಟ್ಯಾಬ್ಲೋ ಪ್ರದರ್ಶನ, ನೋಟು ನಿಷೇಧದ ಬಳಿಕ ಕಪ್ಪು ಹಣದ ವಿರುದ್ಧ ಸಮರದ ಕುರಿತು ಮಾಹಿತಿ ನೀಡುವ ಟ್ಯಾಬ್ಲೋಗಳು ಕೂಡ ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew Delhiಗಣರಾಜ್ಯೋತ್ಸವ69th Republic DayASEAN leadersIndian Army Paradeಅಸಿಯಾನ್ ವಿಶ್ವ ನಾಯಕರುಭಾರತೀಯ ಸೇನಾ ಪರೇಡ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


