ದೇಶ

ಕೋಲ್ಕತಾ ಮಾರುಕಟ್ಟೆಯಲ್ಲಿ 200 ಅಂಗಡಿಗಳು ಬೆಂಕಿಗಾಹುತಿ, ಇಬ್ಬರು ಸಾವು

ಕೋಲ್ಕತಾದ ಗೋರಾ ಬಜಾರ್ ಮಾರುಕಟ್ಟೆಯಲ್ಲಿ ಸುಮಾರು 200 ಅಂಗಡಿಗಳು ಬೆಂಕಿಗಾಹುತಿಯಾಗಿಯಾಗಿದ್ದು, ಅಗ್ನಿ ಅವಘಡದಲ್ಲಿ...

ಕೋಲ್ಕತಾ ಮಾರುಕಟ್ಟೆಯಲ್ಲಿ 200 ಅಂಗಡಿಗಳು ಬೆಂಕಿಗಾಹುತಿ, ಇಬ್ಬರು ಸಾವು
ಸಾಂದರ್ಭಿಕ ಚಿತ್ರ
Published On :
ಕೋಲ್ಕತಾ: ಕೋಲ್ಕತಾದ ಗೋರಾ ಬಜಾರ್ ಮಾರುಕಟ್ಟೆಯಲ್ಲಿ ಸುಮಾರು 200 ಅಂಗಡಿಗಳು ಬೆಂಕಿಗಾಹುತಿಯಾಗಿಯಾಗಿದ್ದು, ಅಗ್ನಿ ಅವಘಡದಲ್ಲಿ ಇಬ್ಬರು ಮೃತಪಟ್ಟಿರುವ ದಾರುಣ ಘಟನೆ ಸೋಮವಾರ ನಡೆದಿದೆ.
ಅಗ್ನಿ ಆಕಸ್ಮಿಕದಲ್ಲಿ ಸಜೀವ ದಹನವಾದ ಇಬ್ಬರು ವ್ಯಕ್ತಿಗಳನ್ನು ಸುನಿಲ್ ಸಾಹು ಮತ್ತು ವಿಕ್ಕಿ ಸಾಹು ಎಂದು ಗುರುತಿಸಲಾಗಿದ್ದು, ಅಂಗಡಿಯಿಂದ ಮೃತದೇಹಗಳನ್ನು ಹೊರ ತೆಗೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸುನಿಲ್ ಸಾಹು ಕಚೋರಿ ಮಾರಾಟಗಾರರಾಗಿದ್ದು, ವಿಕ್ಕಿ ಸಾಹು ಆತನ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಬೆಳಗ್ಗೆ ಸರಸ್ವತಿ ಪೂಜಾ ಉತ್ಸವವಿದ್ದ ಕಾರಣ ಇಬ್ಬರು ನಿನ್ನೆ ರಾತ್ರಿ ತಮ್ಮ ಅಂಗಡಿಯಲ್ಲೇ ಮಲಗಿದ್ದರು. ಬೆಳಗಿನ ಜಾವ 1.45ರ ಸುಮಾರಿಗೆ ಅಗ್ನಿ ಅವಘಡ ಸಂಭವಿಸಿದ್ದು, ಉಸಿರುಕಟ್ಟಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೆಂಕಿ ಮಾರುಕಟ್ಟೆಯಲ್ಲಿರುವ ಸುಮಾರು 200 ಅಂಗಡಿಗಳಿಗೆ ವ್ಯಾಪಿಸಿದ್ದು, 22 ಅಗ್ನಿ ಶಾಮಕ ವಾಹನಗಳು ಬೆಂಕಿ ನಿಯಂತ್ರಿಸಲು ಸುಮಾರು 8 ಗಂಟೆಗಳ ಕಾಲ ಹರಸಾಹಸಪಟ್ಟಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಅಗ್ನಿ ಆಕಸ್ಮಿಕಕ್ಕೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಆದರೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.