ರಾಜ್ಯದ ಡಿಂಕು ಇಂದುಶ್ರೀ ಸೇರಿ 112 ಮಹಿಳಾ ಸಾಧಕಿಯರಿಗೆ ರಾಷ್ಟ್ರಪತಿಗಳಿಂದ ಸನ್ಮಾನ
ಮಾತನಾಡುವ ಗೊಂಬೆ ಖ್ಯಾತಿಯ ಡಿಂಕು ಇಂದುಶ್ರೀ ಸೇರಿದಂತೆ ವಿಧ ಕ್ಷೇತ್ರಗಳಲ್ಲಿ ಪ್ರಥಮಗಳ ಸಾಧನೆ ಮಾಡಿದ 112 ಮಹಿಳೆಯರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸನ್ಮಾನಿಸಿದ್ದಾರೆ.

Published On :
ನವದೆಹಲಿ: ಮಾತನಾಡುವ ಗೊಂಬೆ ಖ್ಯಾತಿಯ ಡಿಂಕು ಇಂದುಶ್ರೀ ಸೇರಿದಂತೆ ವಿಧ ಕ್ಷೇತ್ರಗಳಲ್ಲಿ ಪ್ರಥಮಗಳ ಸಾಧನೆ ಮಾಡಿದ 112 ಮಹಿಳೆಯರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸನ್ಮಾನಿಸಿದ್ದಾರೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವಾಲಯ ವತಿಯಿಂದ ರಾಷ್ಟ್ರಪತಿ ಭವನದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ರಾಷ್ಟ್ರಪತಿ ಕೋವಿಂದ್ ಈ ಗೌರವ ಸಮರ್ಪಣೆ ಮಾಡಿದರು.
ನಿನ್ನೆ (ಶನಿವಾರ) ಸಂಜೆ ರಾಷ್ಟ್ರಪತಿ ಭವನದಲ್ಲಿ ಈ ಸನ್ಮಾನ ಸಮಾರಂಭ ನಡೆದಿದ್ದು ಡಿಂಕು ಇಂದುಶ್ರೀಯೊಡನೆ ಚೆನ್ನೈನ ಮೊದಲ ಅಂಧ ಐಎಫ್‍ಎಸ್ ಅಧಿಕಾರಿ ಬೆನೊ ಝೆಫೈನ್, ಅಂಧ ಲೆಕ್ಕಪರಿಶೋಧಕಿ ರಜನಿ ಗೋಪಾಲಕೃಷ್ಣನ್ ಪಿಟಿ ಉಷಾ, ಪಿವಿ ಸಿಂಧು, ಸಾನಿಯಾ ಮಿರ್ಜಾ, ಐಶ್ವರ್ಯಾ ರೈ, ಕಿರಣ್ ಮಜುಮ್ದಾರ್ ಷಾ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಗಿದೆ.
ಡಿಂಕು ಇಂದುಶ್ರೀ ಎಂದೇ ಖ್ಯಾತರಾಗಿರುವ ಇಂದುಶ್ರೀ ಇಂದು ವಿವಿಧ ದೇಶಗಳಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ನೀಡುವ ಮೂಲಕ ವಿಶ್ವ ಖ್ಯಾತಿ ಗಳಿಸಿದ್ದಾರೆ. ಇವರು ಇತ್ತೀಚೆಗೆ ಸಿಎನ್‍ಎನ್ ಚಾನೆಲ್ ನಲ್ಲಿ ಒಂದು ಕಾರ್ಯಕ್ರಮ ನೀಡುವ ಮೂಲಕ ಗಮನ ಸೇಳೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
President Ram Nath Kovindರಾಷ್ಟ್ರಪತಿ ರಾಮ್ ನಾಥ್ ಕೋವಿಂದ್Dinku InushreeP T UshaKiran Mazumdar Shaw. Aishwarya Raiಡಿಂಕು ಇಂದುಶ್ರೀಪಿ.ಟಿ. ಉಷಾಕಿರಣ್ ಮಜುಂದಾರ್ ಷಾ. ಐಶ್ವರ್ಯ ರೈ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


