ದೇಶ

ದೆಹಲಿ ಕೈಗಾರಿಕಾ ಕಾರ್ಖಾನೆ ದುರಂತ: ಕಟ್ಟಡದ ಮಾಲೀಕ ಮನೋಜ್ ಜೈನ್ ಬಂಧನ

ದೆಹಲಿ ಕೈಗಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಕಟ್ಟಡದ ಮಾಲೀಕ ಮನೋಜ್ ಜೈನ್ ಅವರನ್ನು ದೆಹಲಿ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ...

ದೆಹಲಿ ಕೈಗಾರಿಕಾ ಕಾರ್ಖಾನೆ ದುರಂತ: ಕಟ್ಟಡದ ಮಾಲೀಕ ಮನೋಜ್ ಜೈನ್ ಬಂಧನ
ಕಟ್ಟಡದ ಮಾಲೀಕ ಮನೋಜ್ ಜೈನ್
Published On :
ನವದೆಹಲಿ: ದೆಹಲಿ ಕೈಗಾರಿಕಾ ಕಾರ್ಖಾನೆಯಲ್ಲಿ ಸಂಭವಿಸಿದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಕಟ್ಟಡದ ಮಾಲೀಕ ಮನೋಜ್ ಜೈನ್ ಅವರನ್ನು ದೆಹಲಿ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ. 
ಮನೋಜ್ ಜೈನ್ ಎಂಬುವವರು ಕಟ್ಟಡದ ಮಾಲೀಕರಾಗಿದ್ದು, ಇದೀಗ ಆತನನ್ನು ಬಂಧನಕ್ಕೊಳಪಡಿಸಿಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ರಜನೀಶ್ ಗುಪ್ತಾ ಅವರು ಹೇಳಿದ್ದಾರೆ. 
ಕಟ್ಟಡವನ್ನು ಬಾಡಿಗೆಗೆ ಪಡೆದುಕೊಂಡಿದ್ದು, ಕಾರ್ಖಾನೆಯನ್ನು ನಾನೊಬ್ಬನೇ ನಡೆಸುತ್ತಿದ್ದೆ ಎಂದು ಮನೋಜ್ ಜೈನ್ ವಿಚಾರಣೆ ವೇಳೆ ಹೇಳಿದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ. 
ಈ ಹಿಂದೆ ದುರಂತ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಪೊಲೀಸರು ಲಲಿತ್ ಗೋಯೆಲ್ ಎಂಬ ವ್ಯಕ್ತಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡು ಕಟ್ಟಡದ ಮಾಲೀಕ ಜೈನ್ ಕಾರ್ಖಾನೆ ನಡೆಸುತ್ತಿದ್ದ ಎಂದು ಹೇಳಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.