ದೇಶ

ದೆಹಲಿ ಕಾರ್ಖಾನೆ ಅಗ್ನಿ ದುರಂತ: ನಕಲಿ ವಿಡಿಯೋ ವೈರಲ್ ಆಗುತ್ತಿದೆ- ಮೇಯರ್ ಪ್ರೀತಿ ಅಗರ್'ವಾಲ್

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ನನ್ನ ಹೇಳಿಕೆ ಕುರಿತ ವಿಡಿಯೋ ನಕಲಿಯಾಗಿದ್ದು, ಸುಳ್ಳುಗಳನ್ನು ಹರಡುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು...

ದೆಹಲಿ ಕಾರ್ಖಾನೆ ಅಗ್ನಿ ದುರಂತ: ನಕಲಿ ವಿಡಿಯೋ ವೈರಲ್ ಆಗುತ್ತಿದೆ- ಮೇಯರ್ ಪ್ರೀತಿ ಅಗರ್'ವಾಲ್
ಉತ್ತರ ದೆಹಲಿಯ ಮೇಯರ್ ಪ್ರೀತಿ ಅಗರ್ವಾಲ್
Published On :
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ನನ್ನ ಹೇಳಿಕೆ ಕುರಿತ ವಿಡಿಯೋ ನಕಲಿಯಾಗಿದ್ದು, ಸುಳ್ಳುಗಳನ್ನು ಹರಡುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೂಡಲೇ ಕ್ಷಮೆಯಾಚಿಸಬೇಕೆಂದು ದೆಹಲಿಯ ಮೇಯರ್ ಪ್ರೀತಿ ಅಗರ್ವಾಲ್ ಭಾನುವಾರ ಹೇಳಿದ್ದಾರೆ. 
ಕಳೆದ ರಾತ್ರಿ ದೆಹಲಿಯ ಪಟಾಕಿ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡು 17 ಮಂದಿ ಸಜೀವ ದಹನಗೊಂಡಿದ್ದರು. ಅಲ್ಲದೆ, ಹಲವರು ಗಾಯಗೊಂಡಿದ್ದರು. ಸುದ್ದಿ ತಿಳಿದ ಕೂಡಲೇ ಉತ್ತರ ದೆಹಲಿಯ ಮೇಯರ್ ಪ್ರೀತಿ ಅಗರ್ವಾಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. 
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪ್ರೀತಿ ಅವರು, ಕಾರ್ಖಾನೆಯ ಪರವಾನಗಿ ನಮ್ಮ ಬಳಿಯಿದೆ. ಹೀಗಾಗಿ ಯಾರೂ ಕೂಡ ಕಾರ್ಖಾನೆಯ ವಿರುದ್ಧವಾಗಿ ಮಾತನಾಡಬಾರದು ಎಂದು ಅಧಿಕಾರಿಗಳಿಗೆ ಬಹಿರಂಗವಾಗಿ ತಾಕೀತು ಮಾಡಿದ್ದರು. ಮೇಯರ್ ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 
ಈ ಹಿನ್ನಲೆಯಲ್ಲಿ ವಿಡಿಯೋ ಕುರಿತಂತೆ ತೀವ್ರವಾಗಿ ಕಿಡಿಕಾರಿರುವ ಮೇಯರ್ ಪ್ರೀತಿ ಅವರು, ಅತ್ಯಂತ ದುಃಖಕರವಾದ ದುರ್ಘಟನೆಯ ಕುರಿತ ವಿಡಿಯೋವನ್ನು ನಕಲಿಯಾಗಿ ಮಾಡಿರುವುದು ನಿಜಕ್ಕೂ ಹೀನವಾದದ್ದು. ಸುಳ್ಳುಗಳನ್ನು ಹರಡುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ. 
ದುರ್ಘಟನೆ ಕುರಿತ ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆ. ಇಂತಹ ದುರಾದೃಷ್ಟಕರವಾದ ಘಟನೆಗಳು ನಡೆದಂತಹ ಸಂದರ್ಭದಲ್ಲಿ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಬಾರದು ಎಂಬ ಅರ್ಥದಲ್ಲಿ ನಾನು ಹೇಳಿಕೆಯನ್ನು ನೀಡಿದ್ದೆ. ಆದರೆ, ನನ್ನ ಹೇಳಿಕೆ ಕುರಿತ ವಿಡಿಯೋವನ್ನು ನಕಲಿ ಮಾಡಲಾಗಿದ್ದು, ಇದು ಸರಿಯಲ್ಲ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.