ದೇಶ

ತಮಿಳುನಾಡಿನ ಪ್ರಗತಿಗಾಗಿ ಅಬ್ದುಲ್ ಕಲಾಂ ಕನಸು ನನಸು ಮಾಡುವೇ: ಕಮಲ್ ಹಾಸನ್

ತಮಿಳುನಾಡಿನ ಪ್ರಗತಿಗಾಗಿ ದಿವಂಗತ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಹೊಂದಿದ್ದ ಕನಸನ್ನು ನನಸು ಮಾಡುವುದಾಗಿ ಕಾಲಿವುಡ್ ಹೆಸರಾಂತ ನಟ ಕಮಲ್ ಹಾಸನ್ ಹೇಳಿದ್ದಾರೆ.

ತಮಿಳುನಾಡಿನ ಪ್ರಗತಿಗಾಗಿ ಅಬ್ದುಲ್ ಕಲಾಂ ಕನಸು ನನಸು ಮಾಡುವೇ: ಕಮಲ್ ಹಾಸನ್
ಕಮಲ್ ಹಾಸನ್ ಸಾಂದರ್ಭಿಕ ಚಿತ್ರ
Published On :

 ಚೆನ್ನೈ: ತಮಿಳುನಾಡಿನ ಪ್ರಗತಿಗಾಗಿ ದಿವಂಗತ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ  ಅವರು ಹೊಂದಿದ್ದ ಕನಸನ್ನು ನನಸು ಮಾಡುವುದಾಗಿ ಕಾಲಿವುಡ್   ಹೆಸರಾಂತ ನಟ ಕಮಲ್ ಹಾಸನ್ ಹೇಳಿದ್ದಾರೆ.

ಬರುವ ತಿಂಗಳ 21ರಿಂದ ರಾಮನಾಥಪುರಂನ ಎಪಿಜೆ ಅಬ್ದುಲ್ ಕಲಾಂ ಅವರ ನಿವಾಸದಿಂದ  ರಾಜಕೀಯ  ಪ್ರವಾಸ ಆರಂಭಿಸಲಿದ್ದು, ಗುರಿ ಸಾಧನೆಗಾಗಿ ಮುನ್ನುಗ್ಗುವುದಾಗಿ  ತಮಿಳಿನ ವಾರಪತ್ರಿಕೆಯೊಂದಕ್ಕೆ ಅಂಕಣ ಬರೆದಿದ್ದಾರೆ.

ಕೆಲ ವರ್ಷಗಳ ಹಿಂದೆ ವಿಮಾನದಲ್ಲಿ ಅಬ್ದುಲ್ ಕಲಾಂ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ಕಮಲ್ ಹಾಸನ್ ನೆನಪು ಮಾಡಿಕೊಂಡಿದ್ದು, ಅವರ ಉತ್ತಮ ಗುಣಗಳನ್ನು ಕೊಂಡಾದಿದ್ದಾರೆ.  ರಾಮನಾಥಪುರಂ ತಮ್ಮ ಹುಟ್ಟೂರು ಆಗಿದ್ದು, ಅವಕಾಶಕ್ಕಾಗಿ ಕಲಾಂ ಅವರ ನಿವಾಸದಿಂದಲೇ ಪ್ರವಾಸ ಆರಂಭಿಸುವುದಾಗಿ ತಿಳಿಸಿದ್ದಾರೆ.

ಅಬ್ದುಲ್ ಕಲಾಂ ತಮಿಳುನಾಡಿಗಾಗಿ ಪ್ರಗತಿಗಾಗಿ ಹೊಂದಿದ್ದ ಹಲವು ಕನಸುಗಳನ್ನು ಬಿಟ್ಟು ಹೋಗಿದ್ದಾರೆ. ತಾವೂ ಕೂಡಾ ಕೆಲವೊಂದು ಚಿಂತನೆ ಹೊಂದಿದ್ದು,  ಅದನ್ನು  ಸಾಕಾರ ಮಾಡಲು ಪೂರ್ಣಾವಧಿ ಕೆಲಸ ಮಾಡುತ್ತೇನೆ. ಜನ ಕಲ್ಯಾಣವೇ ತಮ್ಮ ಗುರಿ ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.