ದೇಶ

ಒಂಟಿ ತೋಳ ದಾಳಿಗಾಗಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಗಳಿಂದ ಕಾಶ್ಮೀರಿಗಳಲ್ಲಿ ತೀವ್ರವಾದದ ಉತ್ತೇಜನ!

ಒಂಟಿ ತೋಳ ದಾಳಿಗಾಗಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಗಳು ಕಾಶ್ಮೀರಿಗಳಲ್ಲಿ ತೀವ್ರವಾದವನ್ನು ಉತ್ತೇಜಿಸುತ್ತಿದ್ದಾರೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

ಒಂಟಿ ತೋಳ ದಾಳಿಗಾಗಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಗಳಿಂದ ಕಾಶ್ಮೀರಿಗಳಲ್ಲಿ ತೀವ್ರವಾದದ ಉತ್ತೇಜನ!
ಇಸ್ಲಾಮಿಕ್ ಸ್ಟೇಟ್
Published On :
ನವದೆಹಲಿ: ಒಂಟಿ ತೋಳ ದಾಳಿಗಾಗಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಗಳು ಕಾಶ್ಮೀರಿಗಳಲ್ಲಿ ತೀವ್ರವಾದವನ್ನು ಉತ್ತೇಜಿಸುತ್ತಿದ್ದಾರೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. 
ಗೃಹ ಸಚಿವಾಲಯದ ಸೈಬರ್ ವಿಭಾಗ ಈ ಮಾಹಿತಿ ಹೊರಹಾಕಿದ್ದು, ತೀವ್ರವಾದವನ್ನು ಉತ್ತೇಜಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ಫೋಟೊಗಳು, ಲೇಖನಗಳು ಗೃಹ ಸಚಿವಾಲಯದ ಗಮನಕ್ಕೆ ಬಂದಿದೆ. ಇತ್ತೀಚೆಗಷ್ಟೇ ಜಮ್ಮು-ಕಾಶ್ಮೀರದಲ್ಲಿ ತೀವ್ರವಾದವನ್ನು ಉತ್ತೇಜಿಸುತ್ತಿರುವ ಟೆಲಿಗ್ರಾಮ್ ಜಾಲವನ್ನು ಸೈಬರ್ ವಿಭಾಗ ಪತ್ತೆ ಹಚ್ಚಿತ್ತು. 
ಟೆಲಿಗ್ರಾಮ್ ಜಾಲ 2017 ರ ಸೆ.23 ರಂದು ಸಕ್ರಿಯಗೊಳಿಸಲಾಗಿದ್ದು, ಅಕ್ಟೋಬರ್ 3 ರಂದು ಮರುನಾಮಕರಣ ಮಾಡಲಾಗಿದೆ. ಈ ಚಾನಲ್ ನಲ್ಲಿ 223 ಸದಸ್ಯರು ಅನುಯಾಯಿಗಳಿದ್ದಾರೆ, ಅಷ್ಟೇ ಅಲ್ಲದೇ ಚಾನೆಲ್ ನಲ್ಲಿ ಒಂಟಿ ತೋಳ ದಾಳಿ ನಡೆಸುವ ಬಗ್ಗೆ ಬರಹಗಳನ್ನು ಅಪ್ ಲೋಡ್ ಮಾಡಲಾಗಿತ್ತು ಎಂದು ಗೃಹ ಇಲಾಖೆ ಮೂಲಗಳು ತಿಳಿಸಿದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.