ದೇಶ

ಗಣಿಗಾರಿಕೆ ಹಗರಣದ ಕುರಿತು ಕುಮಾರಸ್ವಾಮಿ ಆರೋಪ ಅರ್ಧಸತ್ಯ: ಸಚಿವ ವಿನಯ್ ಕುಲಕರ್ಣಿ

5,450 ಕೋಟಿ ರೂಪಾಯಿ ಗಣಿಗಾರಿಕೆ ಹಗರಣದ ನಡೆದಿರುವುದರ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ವಿನಯ್ ಕುಲಕರ್ಣಿ, ಕುಮಾರಸ್ವಾಮಿ ಅವರ ಆರೋಪ ಅರ್ಧ ಸತ್ಯ ಎಂದು ಹೇಳಿದ್ದಾರೆ.

ಗಣಿಗಾರಿಕೆ ಹಗರಣದ ಕುರಿತು ಕುಮಾರಸ್ವಾಮಿ ಆರೋಪ ಅರ್ಧಸತ್ಯ: ಸಚಿವ ವಿನಯ್ ಕುಲಕರ್ಣಿ
ಹೆಚ್ ಡಿ ಕುಮಾರಸ್ವಾಮಿ
Published On :
ಬೆಂಗಳೂರು: 5,450 ಕೋಟಿ ರೂಪಾಯಿ ಗಣಿಗಾರಿಕೆ ಹಗರಣದ ನಡೆದಿರುವುದರ ಬಗ್ಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ವಿನಯ್ ಕುಲಕರ್ಣಿ, ಕುಮಾರಸ್ವಾಮಿ ಅವರ ಆರೋಪ ಅರ್ಧ ಸತ್ಯ ಎಂದು ಹೇಳಿದ್ದಾರೆ. 
ಸುದ್ದಿಗಾರರೊಂದಿಗೆ ಮಾತನಾಡಿರುವ ವಿನಯ್ ಕುಲಕರ್ಣಿ, ಕುಮಾರಸ್ವಾಮಿ ಅವರ ಆರೋಪಗಳನ್ನು ತಳ್ಳಿಹಾಕಿದ್ದು, ಕುಮಾರಸ್ವಾಮಿ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಗಣಿಗಾರಿಕೆ ನಡೆಸುತ್ತಿರುವ ಪ್ರದೇಶದಲ್ಲಿ ಇಟ್ಟಿರುವ ಪುಸ್ತಕಕ್ಕೂ ಹಾಗೂ ಸಂಸ್ಥೆಯ ಲೆಕ್ಕ ಪುಸ್ತಕದಲ್ಲಿನ ಅಂಕಿ-ಅಂಶಗಳಿಗೂ ಸಣ್ಣ ವ್ಯತ್ಯಾಸವಿದೆಯಷ್ಟೇ, ಈ ಬಗ್ಗೆ ಪ್ರಾಥಮಿಕ ವರದಿಗಳನ್ನಾಧರಿಸಿ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. 
ಕುಮಾರಸ್ವಾಮಿ ಅವರು ಆರೋಪಿಸಿರುವ ಅಕ್ರಮಗಳ ಪ್ರಮಾಣದ ಬಗ್ಗೆಯೂ ಮಾತನಾಡಿರುವ ವಿನಯ್ ಕುಲಕರ್ಣಿ, ಕುಮಾರಸ್ವಾಮಿ ಅವರ ಆರೋಪದಂತೆ ಹಗರಣ ನಡೆಯಬೇಕಾದರೆ ಸುಬ್ಬರಾಯನಹಳ್ಳಿ ಮತ್ತು ತಿಮ್ಮಪ್ಪನಗುಡಿ ಪ್ರದೇಶದಲ್ಲಿ ನಡೆದಿದ್ದ ಗಣಿಗಾರಿಕೆ ಪ್ರದೇಶದಿಂದ 2000 ಟ್ರಕ್ ನಷ್ಟು ಅದಿರನ್ನು ಸಾಗಿಸಬೇಕಾಗುತ್ತದೆ. ಆದರೆ ಕಡಿಮೆಯೆಂದರೂ ಪ್ರತಿ ದಿನ 800 ಟ್ರಕ್ ಲೋಡ್ ನಷ್ಟು ಅದಿರು ಮಾತ್ರ ಗಣಿಗಾರಿಕೆ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.