ಮದುವೆಗೆ ಸ್ನೇಹಿತನ ವಿಳಂಬ; ನೊಂದ ಯುವತಿ ಮತ್ತು ಕುಟುಂಬ ಸದಸ್ಯರು ಆತ್ಮಹತ್ಯೆಗೆ ಶರಣು
ಎರಡೂ ಕುಟುಂಬಗಳ ಒಪ್ಪಿಗೆಯಿದ್ದರೂ ಕೂಡ ತನ್ನ ಸ್ನೇಹಿತ ಮದುವೆಯಾಗಲು ವಿಳಂಬ ...

Published On :
ತಿರುನೆಲ್ವೇಲಿ: ಎರಡೂ ಕುಟುಂಬಗಳ ಒಪ್ಪಿಗೆಯಿದ್ದರೂ ಕೂಡ ತನ್ನ ಸ್ನೇಹಿತ ಮದುವೆಯಾಗಲು ವಿಳಂಬ ಮಾಡುತ್ತಿರುವುದಕ್ಕೆ 29 ವರ್ಷದ ಅಂಚೆಪೇದೆ ಯುವತಿ ಮತ್ತು ಆಕೆಯ ಕುಟುಂಬ ಸದಸ್ಯರು ತಮ್ಮ ಮನೆಯಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ವಾಸುದೇವನಲ್ಲೂರಿನ ಸಂಗುಪುರಾಮ್ ಹತ್ತಿರ ನಡೆದಿದೆ.
ಯುವತಿ ಸೋರ್ನಮ್ ಆಕೆಯ ತಾಯಿ ಸೀತಾ(55 ವರ್ಷ) ಮತ್ತು ಪದ್ಮ(20ವ) ತಮ್ಮ ಮನೆಯಲ್ಲಿ ಕೀಟನಾಶಕ ಸೇವಿಸಿ ಪ್ರಜ್ಞೆತಪ್ಪಿ ಬಿದ್ದಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಸೀತಾ ಅವರ ಪತಿ ಪಜ್ಹನಿ ಕೆಲ ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು. ಕುಟುಂಬ ಸದಸ್ಯರು ಅಂಬಸಮುದ್ರಮ್ ಹತ್ತಿರ ಅಖಿಲಾಂಡಪುರದಲ್ಲಿ ವಾಸಿಸುತ್ತಿದ್ದರು. ಕೆಲ ಸಮಯಗಳ ನಂತರ ಸೋರ್ನಮ್ ಸಂಗುಪುರಂ ಶಾಖೆಯಲ್ಲಿ ಅಂಚೆಪೇದೆಯಾಗಿ ಕೆಲಸಕ್ಕೆ ಸೇರಿಕೊಂಡ ನಂತರ ಅಲ್ಲಿಗೆ ಕುಟುಂಬದ ಎಲ್ಲಾ ಸದಸ್ಯರು ಮತ್ತೆ ಬಂದು ಅಲ್ಲಿ ವಾಸಿಸಲು ಆರಂಭಿಸಿದರು. 12ನೇ ತರಗತಿ ಓದಿದ್ದ ಪದ್ಮಾ ಖಾಸಗಿ ಸಂಸ್ಥೆಯಲ್ಲಿ ಶಾರ್ಟ್ ಹ್ಯಾಂಡ್ ಕಲಿಯುತ್ತಿದ್ದರು.
ಸೊರ್ನಮ್ ಮತ್ತು 31 ವರ್ಷದ ವೆಲ್ಸಮಿ 10 ವರ್ಷಗಳ ಹಿಂದೆ ಪ್ರೀತಿಯಲ್ಲಿ ಬಿದ್ದಿದ್ದರು. ಖಾಸಗಿ ಬಸ್ಸಿನ ನಿರ್ವಾಹಕರಾಗಿದ್ದ ವೆಲ್ಸಮಿ ಎರಡು ವರ್ಷಗಳ ಹಿಂದೆ ಮತ್ತೊಂದು ಉದ್ಯೋಗ ಸಿಕ್ಕಿದಾಗ ಚೆನ್ನೈಗೆ ಹೋಗಿದ್ದರು.
ಇಬ್ಬರೂ ಹಿಂದೂ ಸಮುದಾಯವಾದ್ದರಿಂದ ಎರಡೂ ಕುಟುಂಬಗಳಲ್ಲಿ ಮದುವೆಗೆ ಒಪ್ಪಿಗೆ ಸಿಕ್ಕಿತ್ತು. ಹುಡುಗಿಯ ಮನೆಯಲ್ಲಿ ಇತ್ತೀಚೆಗೆ ಮದುವೆಗೆ ಸಿದ್ಧತೆ ಮಾಡಿದ್ದರು ಕೂಡ. ಕಳೆದ ನವೆಂಬರ್ ನಲ್ಲಿ ನಡೆಯಬೇಕಿದ್ದ ಮದುವೆ ಈ ತಿಂಗಳಿಗೆ ಮುಂದೂಡಲಾಗಿತ್ತು. ಮುಂದೂಡುವಂತೆ ವೆಲ್ಸಮಿಯೇ ಒತ್ತಾಯಿಸಿದ್ದನು.
ಈ ಮಧ್ಯೆ ವೆಲ್ಸಮಿ ಕುಟುಂಬ ಸೊರ್ನಮ್ ಕುಟುಂಬಕ್ಕೆ 1 ಲಕ್ಷ ರೂಪಾಯಿ ಖರ್ಚಿಗೆಂದು ನೀಡಿತ್ತು. ಆದರೆ ಇದು ವೆಲ್ಸಮಿಗೆ ಗೊತ್ತಿರಲಿಲ್ಲ. ವಿಷಯ ಗೊತ್ತಾದ ನಂತರ ಹಣವನ್ನು ವಾಪಸ್ ಕೇಳಿ ಪಡೆದಿದ್ದಾನೆ. ಇದರಿಂದ ಎರಡೂ ಕುಟುಂಬಗಳ ನಡುವಿನ ಸಂಬಂಧ ಹದಗೆಟ್ಟಿತ್ತು. ಇದುವೇ ಹುಡುಗಿಯ ಕುಟುಂಬದವರು ಈ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಸೊರ್ನಮ್ ಡೆತ್ ನೋಟ್ ಬರೆದಿಟ್ಟು ಮೃತಪಟ್ಟಿದ್ದು ಅದರಲ್ಲಿ ವೆಲ್ಸಮಿಯೇ ತಮ್ಮ ಸಾವಿಗೆ ಕಾರಣ ಎಂದು ಆರೋಪಿಸಿದ್ದಳು. ಅದರ ಆಧಾರದ ಮೇಲೆ ಪೊಲೀಸರು ವೆಲ್ಸಮಿಯನ್ನು ಐಪಿಸಿ 306ರಡಿಯಲ್ಲಿ ಕೇಸು ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


