ದೇಶ

ಆಧಾರ್ ಮಾಹಿತಿ ಸೋರಿಕೆ ಬಗ್ಗೆ ಕಳವಳ: ಆರ್ ಬಿಐ ಅಧ್ಯಯನ ವರದಿ

ಆಧಾರ್ ಮಾಹಿತಿ ಸೋರಿಕೆಯಾಗಿದೆ ಎಂಬ ಪತ್ರಿಕೆಯೊಂದರ ವರದಿ ವ್ಯಾಪಕ ಚರ್ಚೆಗೀಡಾಗಿರುವಂತೆಯೇ ಆಧಾರ್ ಫಲಾನುಭವಿಗಳ ಮಾಹಿತಿ ಸ್ಪಷ್ಟವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಆಧಾರ್ ಮಾಹಿತಿ ಸೋರಿಕೆ ಬಗ್ಗೆ ಕಳವಳ: ಆರ್ ಬಿಐ ಅಧ್ಯಯನ ವರದಿ
ಸಂಗ್ರಹ ಚಿತ್ರ
Published On :
ನವದೆಹಲಿ: ಆಧಾರ್ ಮಾಹಿತಿ ಸೋರಿಕೆಯಾಗಿದೆ ಎಂಬ ಪತ್ರಿಕೆಯೊಂದರ ವರದಿ ವ್ಯಾಪಕ ಚರ್ಚೆಗೀಡಾಗಿರುವಂತೆಯೇ ಆಧಾರ್ ಫಲಾನುಭವಿಗಳ ಮಾಹಿತಿ ಸ್ಪಷ್ಟವಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
ಕಳೆದ ಅಕ್ಟೋಬರ್ ನಲ್ಲಿ ಆಧಾರ್ ಕುರಿತು ಆರ್ ಬಿಐ ನಡೆಸಿದ್ದ ಅಧ್ಯಯನದ ಅನ್ವಯ ಆಧಾರ್ ಫಲಾನುಭವಿಗಳ ಮಾಹಿತಿ ಸ್ಪಷ್ಟವಾಗಿಲ್ಲ. ಈ ವಿಭಾಗದಲ್ಲಿ ಮತ್ತಷ್ಟು ಅಧ್ಯಯನದ ಅವಶ್ಯಕತೆ ಇದೆ ಎಂದು ಆರ್ ಬಿಐ ಹೇಳಿದೆ. ಎಸ್  ಅನಂತ್ ಅವರ ಬಯೋ ಮೆಟ್ರಿಕ್ ಅಂಡ್ ಇಟ್ಸ್ ಇಂಪಾಕ್ಟ್ ಇನ್ ಇಂಡಿಯಾ (ಭಾರತದಲ್ಲಿ ಬಯೋಮೆಟ್ರಿಕ್ ಮತ್ತು ಅದರ ಪರಿಣಾಮ) ಎಂಬ ಅಧ್ಯಯನದಲ್ಲಿ ಇಂತಹ ಕಳವಳ ವ್ಯಕ್ತವಾಗಿದೆ.
ಅಂತೆಯೇ ಆಧಾರ್ ಕುರಿತು ಕಳವಳ ವ್ಯಕ್ತಪಡಿಸಿರುವ ಅನಂತ್ ಅವರು, ಬಯೋ ಮೆಟ್ರಿಕ್ ಸೇವೆ ಮೂಲಕ ಒಂದೇ ಗುರಿಯಲ್ಲಿ ಹಲವು ಬಗೆಯ ಮಾಹಿತಿಗಳು ವಿದೇಶಿ ಶತ್ರುಗಳಿಗೆ ಲಭ್ಯವಾಗುತ್ತಿದೆ. ಇದು ದೇಶದ ಇತಿಹಾಸದಲ್ಲೇ  ಮೊದಲ ಬಾರಿಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ. ಇದೇ ವೇಳೆ ಅವಿಭಜಿತ ಆಂಧ್ರ ಪ್ರದೇಶ ರಾಜ್ಯದ ಕುರಿತು ಉಲ್ಲೇಖಿಸಿರುವ ಅನಂತ್ ಅವರು, ರಾಜ್ಯ ವಿಭಜನೆಗೂ ಮುನ್ನ ಆಧಾರ್ ಮಾಡಿಸಿಕೊಂಡಿರುವವರು ರಾಜ್ಯ ವಿಭಜನೆ ಬಳಿಕ ಕೆವೈಸಿ (ನಿಮ್ಮ ಗ್ರಾಹಕರ ತಿಳಿಯಿರಿ) ಸೇವೆಗಾಗಿ ಪರದಾಡುವಂತಾಗಿದೆ ಎಂದು ಹೇಳಿದ್ದಾರೆ.
ಅಂತೆಯೇ ಯುಐಡಿಎಐ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅವರು, ಆಧಾರ್ ಸಂಸ್ಥೆ ಮಾಹಿತಿ ಹಂಚಿಕೆ ಸಂಬಂಧ ಖಾಸಗಿ ಸಂಸ್ಥೆಗಳಿಗೆ ಯಾವುದೇ ನಿಯಂತ್ರಣ ಹೇರಿಲ್ಲ. ಆಧಾರ್ ಭದ್ರತೆ ಕುರಿತಂತೆ ಯುಐಡಿಎಐ ಯಾವುದೇ ರೀತಿಯ ಭದ್ರತಾ ಭರವಸೆ ನೀಡಿಲ್ಲ. ವಿದೇಶಿ ಮೂಲದ ದತ್ತಾಂಶ ನಿರ್ವಹಣಾ ಸಂಸ್ಥೆಗಳು ಈ ಮಾಹಿತಿಗಳನ್ನು ಹೇಗೆ ನಿರ್ವಹಿಸುತ್ತವೆ ಎಂಬುದೇ ಇದೀಗ ದೊಡ್ಡ ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ದಿ ಟ್ರಿಬ್ಯೂನ್ ಪತ್ರಿಕೆಯ ವರದಿಗಾರ್ತಿ ರಚನಾ ಖೈರಾ ಅವರು ಕೇವಲ 500 ರುಗಳಿಗೆ ಆಧಾರ್ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಸ್ಫೋಟಕ ವರದಿ ಮಾಡಿದ್ದರು. ಅಲ್ಲದೆ ದೇಶದ ಸುಮಾರು 1 ಬಿಲಿಯನ್ ಆಧಾರ್ ಮಾಹಿತಿ ಸೋರಿಕೆಯಾಗಿದೆ ಎಂದು ಅವರು ವರದಿಯಲ್ಲಿ ಹೇಳಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತಿದ್ದ ಆಧಾರ್ ಸಂಸ್ಥೆ ವರದಿಗಾರ್ತಿ ವಿರುದ್ಧ ಎಫ್ ಐಆರ್ ಕೂಡ ದಾಖಲಿಸಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.