ಭಾರತದ ಇಂಟರ್ ನೆಟ್ ಗುರು ವಿಜಯ್ ಮುಖಿ ನಿಧನ
ಭಾರತ ಇಂಟರ್ ನೆಟ್ ಗುರು ಎಂದೇ ಖ್ಯಾತರಾಗಿದ್ದ ವಿಜಯ್ ಮುಖಿ ಅವರು ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

Published On :
ಮುಂಬೈ: ಭಾರತ ಇಂಟರ್ ನೆಟ್ ಗುರು ಎಂದೇ ಖ್ಯಾತರಾಗಿದ್ದ ವಿಜಯ್ ಮುಖಿ ಅವರು ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ಕಳೆದ ರಾತ್ರಿ ಹೃದಯಾಘಾತಕ್ಕೊಳಗಾಗಿದ್ದ ವಿಜಯ್ ಮುಖಿ ಅವರು ಮನೆಯಲ್ಲೇ ನಿಧನರಾಗಿದ್ದು, ಅವರ ಅಂತಿಮ ವಿಧಿವಿಧಾನ ಇಂದು ಮುಂಬೈನ ದಾದರ್ ನಲ್ಲಿರುವ ಶಿವಾಜಿ ಪಾರ್ಕ್ ಸ್ಮಶಾನದಲ್ಲಿ ನೆರವೇರಲಿದೆ. ವೀರಮಾತ ಜೀಜಾಬಾಯಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದ ವಿಜಯ್ ಮುಖಿ ಇಂಟರ್ ನೆಟ್ ಕ್ಷೇತ್ರದ ಆರಂಭಿಕ ದಿನಗಳಲ್ಲೇ ಮುಂಬೈನಲ್ಲಿ 1989ರಲ್ಲಿ ದೇಶದ ಪ್ರಪ್ರಥಮ ಕಂಪ್ಯೂಟರ್ ತರಬೇತಿ ಕೇಂದ್ರ ಆರಂಭಿಸಿದ್ದರು. ಇದೇ ಕಾರಣಕ್ಕೆ ಇವರನ್ನು ಇಂಟರ್ ನೆಟ್ ಗುರು ಎಂದು ಪ್ರೀತಿಯಿಂದ ಕರೆಯಲಾಗುತ್ತಿತ್ತು.
ವಿಜಯ್ ಮುಖಿ ಅವರು ಈ ವರೆಗೂ ಒಟ್ಟು 80 ಪುಸ್ತಕಗಳನ್ನು ಬರೆದಿದ್ದು, ದೇಶದ ಪ್ರಮುಖ ಕಂಪ್ಯೂಟರ್ ಭದ್ರತಾ ತಂತ್ರಾಂಶ ರಚನಾಕಾರರಲ್ಲಿ ಒಬ್ಬರಾಗಿದ್ದಾರೆ. ಮಾಹಿತಿ ಸುರಕ್ಷತೆ ಮತ್ತು ತಂತ್ರಜ್ಞಾನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿಯೂ ವಿಜಯ್ ಮುಖಿ ಅವರು ಸೇವೆ ಸಲ್ಲಿಸಿದ್ದರು. ಇನ್ನು ಮುಂಬೈ ಪೊಲೀಸ ಜೊತೆಗೂಡಿ ನಾಸ್ಕಮ್ ನೊಂದಿಗೆ ಸೈಬರ್ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂತೆಯೇ ಭಾರತೀಯ ಇಂಟರ್ ನೆಟ್ ಬಳಕೆದಾರರ ಸಮುದಾಯ ಸಹ ಸಂಸ್ಥಾಪಕರಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


