ದೇಶ

ಮೇವು ಹಗರಣ: ತಂದೆಗೆ ಜೈಲು, ಸಿಎಂ ನಿತೀಶ್ ಗೆ ಥ್ಯಾಂಕ್ಯೂ ಹೇಳಿದ ಲಾಲೂ ಪುತ್ರ ತೇಜಸ್ವಿ

ಇತ್ತ ತಮ್ಮ ತಂದೆ ಲಾಲೂ ಪ್ರಸಾದ್ ಯಾದವ್ ಅವರಿಗೆ ನ್ಯಾಯಾಲಯ 3.5 ವರ್ಷ ಜೈಲು ಶಿಕ್ಷೆ ವಿಧಿಸುತ್ತಿದ್ದಂತೆಯೇ ಅತ್ತ ಪಾಟ್ನಾದಲ್ಲಿ ಲಾಲೂ ಪುತ್ರ ತೇಜಸ್ವಿ ಯಾದವ್ ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿದೆ ಥ್ಯಾಂಕ್ಸ್ ಹೇಳುವ ಮೂಲಕ ವ್ಯಂಗ್ಯವಾಡಿದ್ದಾರೆ.

ಮೇವು ಹಗರಣ: ತಂದೆಗೆ ಜೈಲು, ಸಿಎಂ ನಿತೀಶ್ ಗೆ ಥ್ಯಾಂಕ್ಯೂ ಹೇಳಿದ ಲಾಲೂ ಪುತ್ರ ತೇಜಸ್ವಿ
ಸಂಗ್ರಹ ಚಿತ್ರ
Published On :
ಪಾಟ್ನಾ: ಇತ್ತ ತಮ್ಮ ತಂದೆ ಲಾಲೂ ಪ್ರಸಾದ್ ಯಾದವ್ ಅವರಿಗೆ ನ್ಯಾಯಾಲಯ 3.5 ವರ್ಷ ಜೈಲು ಶಿಕ್ಷೆ ವಿಧಿಸುತ್ತಿದ್ದಂತೆಯೇ ಅತ್ತ ಪಾಟ್ನಾದಲ್ಲಿ ಲಾಲೂ ಪುತ್ರ ತೇಜಸ್ವಿ ಯಾದವ್ ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿದೆ  ಥ್ಯಾಂಕ್ಸ್ ಹೇಳುವ ಮೂಲಕ ವ್ಯಂಗ್ಯವಾಡಿದ್ದಾರೆ.
ಅತ್ತ ರಾಂಚಿ ವಿಶೇಷ ನ್ಯಾಯಾಲಯದ ತೀರ್ಪು ಹೊರ ಬೀಳುತ್ತಿದ್ದಂತೆಯೇ ಇತ್ತ ಟ್ವಿಟರ್ ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿರುವ ತೇಜಸ್ವಿ ಯಾದವ್, ಥ್ಯಾಂಕ್ಯೂ ವೆರಿ ಮಚ್ ನಿತೀಶ್ ಕುಮಾರ್ ಎಂದು ಟ್ವೀಟ್ ಮಾಡಿದ್ದಾರೆ. 
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ತೇಜಸ್ವಿ ಯಾದವ್, 'ಬಿಜೆಪಿಯ ಸರಳ ನಿಯಮ ‘ನಮ್ಮನ್ನು ಅನುಸರಿಸಿ ಇಲ್ಲದಿದ್ದರೆ, ನಾವು ನಿಮಗೆ ಶಾಸ್ತಿ ಮಾಡುತ್ತೇವೆ’ ಎಂಬುದನ್ನು ಆಚರಿಸುವ ಬದಲು ನಾನು ಸಾಮಾಜಿಕ  ನ್ಯಾಯ, ಸೌಹಾರ್ದ ಹಾಗೂ ಸಮಾನತೆಗೆ ಸಾಯಲು ಸಿದ್ಧ ಎಂದು ಲಾಲು ಪ್ರಸಾದ್ ಹೇಳಿದ್ದಾರೆ. ಒಂದು ವೇಳೆ ಲಾಲು ಬಿಜೆಪಿಯೊಂದಿಗೆ ರಾಜಿ ಮಾಡಿಕೊಂಡರೆ, ಅವರು ರಾಜಾ ಹರಿಶ್ಚಂದ್ರನಂತೆ ಅತಿ ಹೆಚ್ಚು ನಂಬಿಕೆಯ  ವ್ಯಕ್ತಿಯಾಗುತ್ತಾರೆ. ಲಾಲು ಅವರು ಜೈಲಿನಲ್ಲಿ ಇದ್ದರೂ ಬಿಜೆಪಿ ಹಾಗೂ ಆರೆಸ್ಸೆಸ್ ಹೆದರುತ್ತಿರುವುದು ಸ್ಪಷ್ಟ. ಲಾಲು ಅವರ ಧ್ವನಿ ನಿಗ್ರಹಿಸಲು ಅವರು ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಮೈತ್ರಿ ಸರ್ಕಾರ ರಚನೆ ಮಾಡಿದ್ದ ಆರ್ ಜೆಡಿ ಮತ್ತು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಲಾಲೂ ಪುತ್ರರ ಮೇಲಿನ ಭ್ರಷ್ಟಾಚಾರ ಪ್ರಕರಣದಿಂದಾಗಿ ಪರಸ್ಪರ ಬೇರೆಯಾಗಿತ್ತು. ಅಲ್ಲದೆ ಸಿಎ ನಿತೀಶ್ ಕುಮಾರ್ ತಮ್ಮ  ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿ ಜೊತೆ ಕೈ ಜೋಡಿಸಿ ಕೇವಲ 48 ಗಂಟೆಗಳಲ್ಲೇ ಮತ್ತೆ ಸಿಎಂ ಆಗಿದ್ದರು. 
ಬಿಜೆಪಿಗೆ ತಲೆ ಬಾಗುವುದಕ್ಕಿಂತ ಸಾಮಾಜಿಕ ನ್ಯಾಯಕ್ಕಾಗಿ ಸಾಯಲು ಸಿದ್ಧ: ಲಾಲು ಪ್ರಸಾದ್ ಯಾದವ್
ಮೇವು ಹಗರಣಕ್ಕೆ ಸಂಬಂಧಿಸಿ 3.5 ವರ್ಷ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್, ತಾನು ಬಿಜೆಪಿಗೆ ಯಾವುದೇ ಕಾರಣಕ್ಕೂ ತಲೆಬಾಗುವುದಿಲ್ಲ. ಬಿಜೆಪಿಗೆ ತಲೆ ಬಾಗುವುದಕ್ಕಿಂತ ಸಾಮಾಜಿಕ  ನ್ಯಾಯಕ್ಕಾಗಿ ಸಾಯಲು ಸಿದ್ದ ಎಂದಿದ್ದಾರೆ. 
21 ವರ್ಷಗಳ ಹಿಂದೆ ದಿಯೋಘಢ್ ಖಜಾನೆಯಿಂದ 89.27 ಲಕ್ಷ ರೂಪಾಯಿ ತೆಗೆದ ವಂಚನೆಗೆ ಸಂಬಂಧಿಸಿದ ಮೇವು ಹಗರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಲಾಲು ಪ್ರಸಾದ್‌ ಗೆ ಶನಿವಾರ 3.5 ವರ್ಷ ಜೈಲು ಶಿಕ್ಷೆ ವಿಧಿಸಿ  ತೀರ್ಪು ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.