ದೇಶ

ಗನ್ ಪಾಯಿಂಟ್‌ನಲ್ಲಿ ಬಲವಂತದ ಮದುವೆ; ಬಿಕ್ಕಿ ಬಿಕ್ಕಿ ಅತ್ತ ಮಧುಮಗ!

ಬಿಹಾರದ ಉಕ್ಕು ಕಾರ್ಖಾನೆಯಲ್ಲಿ ಜೂನಿಯರ್ ಎಂಜಿನಿಯರ್ ಆಗಿರುವ 29 ವರ್ಷದ ವಿನೋದ್ ಕುಮಾರ್ ಅವರನ್ನು ಅಪಹರಿಸಿ ಬಂದೂಕು ತೋರಿಸಿ ಯುವತಿಯೊಬ್ಬಳ...

ಗನ್ ಪಾಯಿಂಟ್‌ನಲ್ಲಿ ಬಲವಂತದ ಮದುವೆ; ಬಿಕ್ಕಿ ಬಿಕ್ಕಿ ಅತ್ತ ಮಧುಮಗ!
ಮದುವೆ ಚಿತ್ರ
Published On :
ಪಾಟ್ನಾ: ಬಿಹಾರದ ಉಕ್ಕು ಕಾರ್ಖಾನೆಯಲ್ಲಿ ಜೂನಿಯರ್ ಎಂಜಿನಿಯರ್ ಆಗಿರುವ 29 ವರ್ಷದ ವಿನೋದ್ ಕುಮಾರ್ ಅವರನ್ನು ಅಪಹರಿಸಿ ಬಂದೂಕು ತೋರಿಸಿ ಯುವತಿಯೊಬ್ಬಳ ಜತೆ ಬಲವಂತದ ಮದುವೆ ಮಾಡಿದ್ದು ಮದುವೆ ನಂತರ ಮಧುಮಗ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. 
ವಿನೋದ್ ಕುಮಾರ್ ಗೆ ಥಳಿಸಿ ವರನ ವೇಷ ಹಾಕಿಸಿ, ಬಲವಂತವಾಗಿ ವಿವಾಹ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ತನಗೆ ಮದುವೆ ಬೇಡ. ನನ್ನನ್ನು ಬಿಟ್ಟುಬಿಡುವಂತೆ ಯುವಕ ಗೋಗರೆಯುತ್ತಿದ್ದು, ವಧುವಿನ ಕಡೆಯ ಸಂಬಂಧಿ ಮಹಿಳೆಯರು ಆತನಿಗೆ ಸಮಾಧಾನಪಡಿಸುತ್ತಿರುವ ದೃಶ್ಯಗಳು ವಿಡಿಯೋದಲ್ಲಿವೆ. 
ಪಾಟ್ನಾ ಸಮೀಪ ಗೆಳೆಯನ ಮದುವೆಗೆಂದು ತೆರಳಿದ್ದಾಗ ಅಲ್ಲಿ ಬಂದಿದ್ದ ವಧುವಿನ ಸಹೋದರ ಸುರೇಂದ್ರ ಯಾದವ್ ಈತನಿಗೆ ಗನ್ ತೋರಿಸಿ ವಿವಾಹವಾಗುವಂತೆ ಬೆದರಿಸಿದ. ನಂತರ ನನ್ನನ್ನು ಅಲ್ಲಿಂದ ಅಪಹರಿಸಿ ಪಂಡಾರಕ್ ಗೆ ಕರೆದುಕೊಂಡು ಹೋದರು ಎಂದು ವಿನೋದ್ ಕುಮಾರ್ ವಿವರಿಸಿದ್ದಾನೆ. 
ಡಿಸೆಂಬರ್ 3ರಂದು ಹೇಳಿದ ಸಮಯಕ್ಕೆ ವಿನೋದ್ ಮನೆಗೆ ಬರದಿದ್ದಾಗ ಆತನ ಸಹೋದರ ಸಂಜಯ್ ತಮ್ಮ ಕಾಣೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದ. ನಂತರ ತನಿಖೆಗೆ ಪೊಲೀಸರು ಮುಂದಾದಾಗ ಸತ್ಯ ಬಯಲಿಗೆ ಬಂದಿದೆ. 
ಮದುವೆ ಬಳಿಕ ವಿನೋದ್ ಕುಮಾರ್ ನನ್ನು ಪಾಂಡಾಕರ್ ಹಳ್ಳಿಯಲ್ಲೇ ಕೂಡಿ ಹಾಕಿದ್ದು ಪೊಲೀಸರು ತೆರಳಿ ಆತನನ್ನು ರಕ್ಷಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.