ನನ್ನ ಭಾಷಣದ ಒಂದೇ ಒಂದು ಪದವು ಪ್ರಚೋದನಾಕಾರಿಯಾಗಿಲ್ಲ: ಜಿಗ್ನೇಶ್ ಮೇವಾನಿ
ಮುಂಬೈನಲ್ಲಿ ರ್ಯಾಲಿ ನಡೆಸಲು ಅನುಮತಿ ನಿರಾಕರಿಸಿದ ಒಂದು ದಿನದ ಬಳಿಕ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಕೇಂದ್ರ ಸರ್ಕಾರ ನನ್ನ ಮೇಲೆ ವ್ಯಥಾ ಆರೋಪ ಮಾಡುತ್ತಿದೆ........

Published On :
ನವದೆಹಲಿ: ಮುಂಬೈನಲ್ಲಿ ರ್ಯಾಲಿ ನಡೆಸಲು ಅನುಮತಿ ನಿರಾಕರಿಸಿದ ಒಂದು ದಿನದ ಬಳಿಕ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಕೇಂದ್ರ ಸರ್ಕಾರ ನನ್ನ ಮೇಲೆ ವ್ಯಥಾ ಆರೋಪ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ. ಡಿಸೆಂಬರ್ 31 ರಂದು "ಪ್ರಚೋದನಕಾರಿ ಭಾಷಣ" ದಲ್ಲಿ "ಕೋಮು ಸೌಹಾರ್ದವನ್ನು ಕೆಡಿಸುವ ಅಂಶಗಳಿದೆ " ಎಂದು ಆರೋಪಿಸಿ ಪುಣೆ ಪೊಲೀಸರು ನನ್ನ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಆದರೆ ನನ್ನ ಯಾವ ಮಾತುಗಳಲ್ಲಿಯೂ ಪ್ರಚೋದನಾಕಾರಿ ಅಂಶಗಳಿರಲಿಲ್ಲ ಎಂದು ಮೇವಾನಿ ಹೇಳಿದ್ದಾರೆ.
"ಸಂಘ ಪರಿವಾರ ಮತ್ತು ಬಿಜೆಪಿ ಸದಸ್ಯರು ನನ್ನ ಹೆಸರನ್ನು ಹಾಳು ಮಾಡಲು ಮತ್ತು ಜನಪ್ರಿಯತೆಯನ್ನು ಕೆಡಿಸಲು ಬಾಲಿಶ ಪ್ರಯತ್ನವನ್ನು ಮಾಡುತ್ತಿದ್ದಾರೆ, ಅದು ಗುಜರಾತ್ ಫಲಿತಾಂಶದ ನಂತರದ ಹೆಚ್ಚಾಗಿದೆ. 2019ರ ಚುನಾವಣೆಗಳ ಬಗೆಗೆ ಅವರು ಭೀತಿಯನ್ನು ಹೊಂದಿದ್ದಾರೆ. ನನ್ನ ಮಾತಿನ ಒಂದೇ ಒಂದು ಪದವೂ ಪ್ರಚೋದನಾಕಾರಿಯಾಗಿರಲಿಲ್ಲ, ನನ್ನ ಮೇಲೆ ವ್ಯಥಾ ದಾಳಿಯಾಗುತ್ತಿದೆ." ನವದೆಹಲಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮೇವಾನಿ ಹೇಳಿದ್ದಾರೆ.
"ನಾನು ಚುನಾಯಿತ ಪ್ರತಿನಿಧಿಯಾಗಿದ್ದೇನೆ. ಬಿಜೆಪಿ ನನನ್ನು ಕಂಡು ಭಯಪಡುತ್ತಿದೆ. ನಮಗೆ ಜಾತ್ಯಾತೀತ ಭಾರತ ಬೇಕು. ದಲಿತರಿಗೆ ಪ್ರತಿಭಟನೆಯ ಹಕ್ಕಿದೆ, " ಅವರು ಭೀಮಾ ಕೋರೆಗಾಂವ್ ಹಿಂಸಾಚಾರವನ್ನು ನಾನು ಪ್ರಚೋದಿಸಿದ್ದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ನಾನಲ್ಲಿಗೆ ತೆರಳಲೇ ಇಲ್ಲ." ಮೇವಾನಿ ಹೇಳಿದರು.
ಭೀಮಾ ಕೋರೆಗಾಂವ್ ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ಮೋದಿಯವರ ನಿಲುವೇನು? ದಲಿತರ ಮೇಲಿನ ದಾಳಿಗಳು ಹೀಗೆಯೇ ಮುಂದುವರಿದರೆ 2019ರ ಲೋಕಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ದಲಿತರೇ ತಕ್ಕ ಪಾಠ ಕಲಿಸಲಿದ್ದಾರೆ. ಎಂದು ಮೇವಾನಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಪ್ರಚೋದನಕಾರಿ ಭಾಷಣProvocative speechJignesh Mevaniಜಿಗ್ನೇಶ್ ಮೇವಾನಿBhima Koregaon violenceಭೀಮಾ ಕೊರೆಗಾಂವ್ ಹಿಂಸಾಚಾರPune policeಪುಣೆ ಪೋಲಿಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


