ರಾಜ್ಯಸಭೆ: ಮನಮೋಹನ್ ಸಿಂಗ್ ಇದ್ದಲ್ಲಿಗೇ ತೆರಳಿ ಪ್ರಧಾನಿ ಮೋದಿ ಹಸ್ತಲಾಘವ
ಜ.5 ರ ರಾಜ್ಯಸಭಾ ಕಲಾಪ ವಿಶೇಷ ಘಟನೆಗೆ ಕಾರಣವಾಗಿದ್ದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿ ಪರಸ್ಪರ ಹಸ್ತಲಾಘವ ನೀಡಿದ್ದಾರೆ.

Published On :
ನವದೆಹಲಿ: ಜ.5 ರ ರಾಜ್ಯಸಭಾ ಕಲಾಪ ವಿಶೇಷ ಘಟನೆಗೆ ಕಾರಣವಾಗಿದ್ದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಹಾಲಿ ಪ್ರಧಾನಿ ನರೇಂದ್ರ ಮೋದಿ ಪರಸ್ಪರ ಹಸ್ತಲಾಘವ ನೀಡಿದ್ದಾರೆ.
ರಾಜ್ಯಸಭಾ ಕಲಾಪ ಮುಂದೂಡುತ್ತಿದ್ದಂತೆಯೇ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿದ್ದಲ್ಲಿಗೇ ತೆರಳಿದ ಪ್ರಧಾನಿ ಮೋದಿ, ಹಸ್ತಲಾಘವ ನೀಡಿದ್ದಾರೆ. ಗುಜರಾತ್ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇಬ್ಬರೂ ನಾಯಕರು ಪರಸ್ಪರ ವಾಗ್ದಾಳಿ ನಡೆಸಿದ್ದರು.
ವೆಂಕಯ್ಯ ನಾಯ್ಡು ಕಲಾಪವನ್ನು ಮುಂದೂಡಿ ವಂದೇ ಮಾತರಂ ಹೇಳಿದ ನಂತರ ವಿಪಕ್ಷ ನಾಯಕರು ಕುಳಿತಿದ್ದ ಸ್ಥಳಕ್ಕೆ ತೆರಳಿದ ಪ್ರಧಾನಿ ಮೋದಿ ಮಾಜಿ ಪ್ರಧಾನಿ ಸಿಂಗ್, ರಾಜ್ಯಸಭೆ ಉಪಾಧ್ಯಕ್ಷ ಕಿರಿಯನ್, ಕರಣ್ ಸಿಂಗ್ ಅವರಿಗೂ ಹಸ್ತಲಾಘವ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


