ದೇಶ

ನರೇಂದ್ರ ಮೋದಿ 21ನೇ ಶತಮಾನದ ಶ್ರೇಷ್ಠ ನಟ: ಜಿಗ್ನೇಶ್ ಮೇವಾನಿ ವ್ಯಂಗ್ಯ

ಅತ್ತ ಭದ್ರತಾ ಕಾರಣವೊಡ್ಡಿ ತಮ್ಮ ಮುಂಬೈ ಕಾರ್ಯಕ್ರಮ ರದ್ದಾದ ಬೆನ್ನಲ್ಲೇ ಇತ್ತ ಟ್ವಿಟರ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿರುವ ದಲಿತ ಮುಖಂಡ ಹಾಗೂ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ, ಪ್ರಧಾನಿ ನರೇಂದ್ರ ಮೋದಿ 21ನೇ ಶತಮಾನದ ಶ್ರೇಷ್ಠ ನಟ ಎಂದು ವ್ಯಂಗ್ಯವಾಡಿದ್ದಾರೆ.

ನರೇಂದ್ರ ಮೋದಿ 21ನೇ ಶತಮಾನದ ಶ್ರೇಷ್ಠ ನಟ: ಜಿಗ್ನೇಶ್ ಮೇವಾನಿ ವ್ಯಂಗ್ಯ
ಪ್ರಧಾನಿ ಮೋದಿ ಮತ್ತು ಜಿಗ್ನೇಶ್ ಮೇವಾನಿ ಟ್ವೀಟ್
Published On :
ನವದೆಹಲಿ: ಅತ್ತ ಭದ್ರತಾ ಕಾರಣವೊಡ್ಡಿ ತಮ್ಮ ಮುಂಬೈ ಕಾರ್ಯಕ್ರಮ ರದ್ದಾದ ಬೆನ್ನಲ್ಲೇ ಇತ್ತ ಟ್ವಿಟರ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿರುವ ದಲಿತ ಮುಖಂಡ ಹಾಗೂ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ, ಪ್ರಧಾನಿ  ನರೇಂದ್ರ ಮೋದಿ 21ನೇ ಶತಮಾನದ ಶ್ರೇಷ್ಠ ನಟ ಎಂದು ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಜಿಗ್ನೇಶ್ ಮೇವಾನಿ, '21ನೇ ಶತಮಾನದಲ್ಲಿ ವಿಶ್ವದ ಶ್ರೇಷ್ಠ ನಟ ಭಾರತದಲ್ಲಿ ಉದಯಿಸುತ್ತಾರೆ ಎಂದು ನಾಸ್ಟ್ರಾಡಮಸ್ ಭವಿಷ್ಯ ನುಡಿದಿದ್ದ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಇತ್ತೀಚೆಗೆ  ದಲಿತರ ಉದ್ದೇಶಿಸಿ ಪ್ರಧಾನಿ ಮೋದಿ ಮಾಡಿದ್ದ ಭಾಷಣವೊಂದರ ವಿಡಿಯೋ ತುಣುಕನ್ನು ಕೂಡ ಮೇವಾನಿ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.  
'ಪ್ರಧಾನಿ ಮೋದಿ ಅವರು ದಲಿತರ ಮೇಲೆ ನಕಲಿ ಪ್ರೀತಿ ತೋರಿಸುತ್ತಿದ್ದಾರೆ. 21ನೇ ಶತಮಾನದಲ್ಲಿ ವಿಶ್ವ ಶ್ರೇಷ್ಠ ನಟ ಭಾರತದಲ್ಲಿ ಉದಯಿಸುತ್ತಾರೆಂದು ನಾಸ್ಟ್ರಾಡಮಸ್ ಭವಿಷ್ಯ ಈಗ ನಿಜವಾಗಿದೆ' ಎಂದು ಮೇವಾನಿ  ವ್ಯಂಗ್ಯವಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ದಲಿತ ಸಮುದಾಯದ ನಡೆಸಿದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮೇವಾನಿ ಈ ಟ್ವೀಟ್ ಮಾಡಿದ್ದು, ಮುಂಬೈನಲ್ಲಿ ಇಂದು ಆಯೋಜನೆಗೊಂಡಿದ್ದ ಮೇವಾನಿ ಕಾರ್ಯಕ್ರಮ ಭದ್ರತಾ  ಕಾರಣದಿಂದಾಗಿ ರದ್ದಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.