ಅರ್ನಿಯಾ ಸೆಕ್ಟರ್ ನಲ್ಲಿ ಒಳನುಸುಳುಕೋರನ ಹತ್ಯೆಗೈದ ಸೇನೆ, ಸ್ಥಳದಲ್ಲಿ ತೀವ್ರ ಶೋಧ
ಅತ್ತ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಪಾಕಿಸ್ತಾನಿ ಸೈನಿಕರ ಕದನ ವಿರಾಮ ಉಲ್ಲಂಘನೆ ಪ್ರಕರಣ ಮುಂದುವರೆದಿರುವಂತೆಯೇ ಇತ್ತ ಅದೇ ಪಾಕಿಸ್ತಾನಿ ಮೂಲದ ಉಗ್ರರು ಭಾರತದ ಗಡಿಯೊಳಗೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದಾರೆ.

Published On :
ಶ್ರೀನಗರ: ಅತ್ತ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಪಾಕಿಸ್ತಾನಿ ಸೈನಿಕರ ಕದನ ವಿರಾಮ ಉಲ್ಲಂಘನೆ ಪ್ರಕರಣ ಮುಂದುವರೆದಿರುವಂತೆಯೇ ಇತ್ತ ಅದೇ ಪಾಕಿಸ್ತಾನಿ ಮೂಲದ ಉಗ್ರರು ಭಾರತದ ಗಡಿಯೊಳಗೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದಾರೆ.
ಇಂತಹುದೇ ಪ್ರಕರಣ ಗುರುವಾರ ಬೆಳಗ್ಗೆ ಕಾಶ್ಮೀರದ ಆರ್ ಎಸ್ ಪುರ ಸೆಕ್ಟರ್ ಬಳಿಯ ಅರ್ನಿಯಾ ಬಳಿ ನಡೆದಿದ್ದು, ಭಾರತದ ಗಡಿಯೊಳಗೆ ಒಳ ನುಸುಳುತ್ತಿದ್ದ ಆಂತಕವಾದಿಯೋರ್ವನನ್ನು ಗಡಿ ಭದ್ರತಾ ಪಡೆಯ ಸೈನಿಕರು ಹೊಡೆದುರುಳಿಸಿದ್ದಾರೆ. ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ಒಳ ನುಸುಳುಕೋರನ ಸಂಶಯಾಸ್ಪದ ನಡೆಯನ್ನು ಗುರುತಿಸಿದ ಬಿಎಸ್ ಎಫ್ ಸೈನಿಕರು ಆತನನ್ನು ಗುಂಡಿಕ್ಕಿ ಕೊಂದಿದ್ದಾರೆ. ಇನ್ನು ಘಟನಾ ಪ್ರದೇಶದಲ್ಲಿ ಮತ್ತಷ್ಟು ಆತಂಕವಾದಿಗಳು ಒಳನುಸುಳಿರುವ ಶಂಕೆ ಇದ್ದು, ಸ್ಥಳದಲ್ಲಿ ಯೋಧರು ಶೋಧ ಕಾರ್ಯ ಆರಂಭಿಸಿದ್ದಾರೆ.
ಇತ್ತೀಚೆಗಷ್ಟೇ ಕಾಶ್ಮೀರದ ಪುಲ್ವಾಮದಲ್ಲಿನ ಸೇನಾ ತರಬೇತಿ ಕೇಂದ್ರದ ಮೇಲೆ ದಾಳಿ ನಡೆಸಿದ್ದ ಉಗ್ರರು ಮೂವರು ಸೈನಿಕರನ್ನು ಬಲಿ ಪಡೆದಿದ್ದರು. ಇದರ ಬೆನ್ನಲ್ಲೇ ನಡೆದ ಪಾಕಿಸ್ತಾನಿ ಸೈನಿಕರ ಕದನ ವಿರಾಮ ಉಲ್ಲಂಘನೆಗೆ ಭಾರತದ ಓರ್ವ ಯೋಧ ಹುತಾತ್ಮನಾಗಿದ್ದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


