ಮದುರೈ: ಕೂದಲು ಉದುರುವ ಸಮಸ್ಯೆಯಿಂದ ಮನನೊಂದು ಟೆಕಿ ಆತ್ಮಹತ್ಯೆ
ಕೂದಲು ಉದುರುವ ಸಮಸ್ಯೆಯಿಂದ ಮನನೊಂದು ಬೆಂಗಳೂರು ಸಾಫ್ಟ್ ವೇರ್ ಇಂಜಿನಿಯರ್ ಒಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧುರೈನಲ್ಲಿ ನಡೆದಿದೆ...

Published On :
ಮದುರೈ: ಕೂದಲು ಉದುರುವ ಸಮಸ್ಯೆಯಿಂದ ಮನನೊಂದು ಸಾಫ್ಟ್ ವೇರ್ ಇಂಜಿನಿಯರ್ ಒಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಟೆಕಿಯನ್ನು 27 ವರ್ಷದ ಜೈಹಿಂದ್ ಪುರಂ ಮೂಲದ ಆರ್ ಮಿಥುನ್ ರಾಜ್ ಎಂದು ಗುರುತಿಸಲಾಗಿದ್ದು ಮಿಥುನ್ ಬೆಂಗಳೂರಿನ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.
ಮಿಥುನ್ ಗೆ ಚರ್ಮ ರೋಗದ ಸಮಸ್ಯೆಯಿಂದ ಬಳಲುತ್ತಿದ್ದರು ಹೀಗಾಗಿ ಅವರ ತಲೆಯಲ್ಲಿನ ಕೂದಲು ಉದುರುತ್ತಿತ್ತು. ಇದಕ್ಕಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಅನೇಕ ಔಷಧಿಗಳನ್ನು ಉಪಯೋಗಿಸಿದ್ದರು.ಕೂದಲು ಉದುರುವುದು ಮಾತ್ರ ಕಡಿಮೆ ಆಗರಲಿಲ್ಲ. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಚೆನ್ನೈನ ಇನ್ ಫೋಸಿಸ್ ನಿಂದ ಮಿಥುನ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಿದ್ದರು. ಹಲವು ವರ್ಷಗಳು ಇದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಿಥುನ್ ಕಳೆದ ವರ್ಷವಷ್ಟೇ ಬೆಂಗಳೂರಿನ ಐಟಿ ಕಂಪನಿಗೆ ಸೇರಿದ್ದರು. ಮಿಥುನ್ ತಂದೆ ಹಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದು ಆತನ ತಾಯಿ ವಸಂತಿ ಮಧುರೈನ ಜೈಹಿಂದ್ ಪುರಂ ವಾಸವಾಗಿದ್ದರು.
ಮಿಥುನ್ ಗೆ ಮದುವೆ ಮಾಡಲು ವಸಂತಿ ಅವರು ಹುಡುಗಿಯರನ್ನು ನೋಡುತ್ತಿದ್ದರು. ಆದರೆ ಯಾವುದೇ ಸಂಬಂಧ ಕೂಡಿ ಬಂದಿರಲಿಲ್ಲ. ಏತನ್ಮಧ್ಯೆ ಮಿಥುನ್ ಅವರ ಕೂದಲು ಉದುರುವಿಕೆಯ ಬಗ್ಗೆ ಚಿಂತಿಸತೊಡಗಿದ್ದರು.
ಹಲವು ವಾರಗಳಿಂದ ಖಿನ್ನತೆಗೆ ಒಳಗಾಗಿದ್ದ ಮಿಥುನ್ ರಜೆ ಪಡೆದು ಊರಿಗೆ ತೆರಳಿದ್ದ. ಭಾನುವಾರ ತಾಯಿ ವಸಂತಿ ಅವರು ದೇವಸ್ಥಾನಕ್ಕೆ ಹೋಗಿದ್ದಾಗ ಮಿಥುನ್ ಮನೆಯಲ್ಲಿನ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


