ರಜನಿ ಹೊಸ ಪಕ್ಷದ ಚಿನ್ಹೆ, ವೈಬ್ ಸೈಟ್ ಬಿಡುಗಡೆ, ನೋಂದಣಿಗೆ ಅಭಿಮಾನಿಗಳಿಗೆ ಕರೆ
ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಹೊಸ ವರ್ಷದಂದು ತಮ್ಮ ಅಭಿಮಾನಿಗಳಿಗೆ ಉಡುಗೊರೆಯಾಗಿ ಪಕ್ಷದ ಲೋಗೋ ಮತ್ತು ವೆಬ್ ಸೈಟ್ ಅನ್ನು ಬಿಡುಗಡೆ ಮಾಡಿದ್ದಾರೆ.

Published On :
ಚೆನ್ನೈ: ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಣೆ ಮಾಡಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಹೊಸ ವರ್ಷದಂದು ತಮ್ಮ ಅಭಿಮಾನಿಗಳಿಗೆ ಉಡುಗೊರೆಯಾಗಿ ಪಕ್ಷದ ಲೋಗೋ ಮತ್ತು ವೆಬ್ ಸೈಟ್ ಅನ್ನು ಬಿಡುಗಡೆ ಮಾಡಿದ್ದಾರೆ.
ಚೆನ್ನೈನಲ್ಲಿ ಈ ಬಗ್ಗೆ ಮಾತನಾಡಿರುವ ರಜನಿಕಾಂತ್, ರಜನಿ ಮಂಡ್ರಮ್ ಎಂಬ ಆ್ಯಪ್ ಬಿಡುಗಡೆ ಮಾಡಿದ್ದು, ಇದರೊಂದಿಗೆ ರಜನಿಮಂಡ್ರಮ್ ಡಾಟ್ ಒಆರ್ ಜಿ ಎಂಬ ವೆಬ್ ಸೈಟ್ ಅನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಪಕ್ಷದ ಚಿನ್ಹೆಯಾಗಿ ತಮ್ಮ ಬಾಬಾ ಚಿತ್ರದಲ್ಲಿನ ಮುದ್ರೆಯನ್ನೇ ರಜನಿ ಬಳಸಿಕೊಂಡಿದ್ದು, ಟ್ವಿಟರ್ ನಲ್ಲಿ ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ವೆಬ್ ಸೈಟ್ ಮತ್ತು ಆ್ಯಪ್ ಮೂಲಕ ತಮಿಳುನಾಡಿನ ಜನತೆ ಭ್ರಷ್ಟಾಚಾರ ಮುಕ್ತ ಹಾಗೂ ಪ್ರಜಾಪ್ರಭುತ್ವದ ಆಶಯಗಳನ್ನೊಂಡ ಶುದ್ಧ ರಾಜಕೀಯ ವ್ಯವಸ್ಥೆ ನಿರ್ಮಾಣಕ್ಕೆ ಹಾಗೂ ಹೊಸ ಬದಲಾವಣೆಗೆ ಕೈಜೋಡಿಸಬೇಕೆಂದು ಅಭಿಮಾನಿಗಳಲ್ಲಿ ಟ್ವಿಟರ್ ಮೂಲಕ ರಜನಿ ಮನವಿ ಮಾಡಿಕೊಂಡಿದ್ದಾರೆ. ''ನಾನು ಹೊಸದಾಗಿ ರಚಿಸುತ್ತಿರುವ ಪಕ್ಷ ದ ಪರವಾಗಿ ಮೊಬೈಲ್ ಆ್ಯಪ್ ಮತ್ತು ವೆಬ್‌ಸೈಟ್ ರಚಿಸಿದ್ದೇವೆ. ಈ ಎರಡೂ ಮಾಧ್ಯಮಗಳ ಮೂಲಕ ನಿಮ್ಮೆಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ಇದಾಗಿದ್ದು, ನಾನು ಒಬ್ಬನಿಂದ ಬದಲಾವಣೆ ತರಲು ಸಾಧ್ಯವಿಲ್ಲ. ಹಾಗಾಗಿ ಪ್ರತಿಯೊಬ್ಬ ಮತದಾರರು ಇಲ್ಲಿ ನೋಂದಣಿ ಮಾಡಿಕೊಳ್ಳಿ,'' ಎಂದು ವಿಡಿಯೊ ಸಂದೇಶದಲ್ಲಿ ರಜನಿ ಮನವಿ ಮಾಡಿಕೊಂಡಿದ್ದಾರೆ.
ಅಂತೆಯೇ ಪಕ್ಷದ ಸಂಕೇತವನ್ನು (ಲೋಗೊ) ಟ್ವೀಟ್ ಮಾಡಿರುವ ಅವರು ತಮ್ಮ ರಾಜಕೀಯ ಪ್ರವೇಶ ನಿರ್ಧಾರವನ್ನು ಭಾರಿ ಭರವಸೆಯೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಿದ ತಮಿಳುನಾಡು ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


