ದೇಶ

ಈಶಾನ್ಯ ರಾಜ್ಯಗಳ ಚುನಾವಣೆ: ನಾಗಾಲ್ಯಾಂಡ್ ನಲ್ಲಿ ಶೇ.75, ಮೇಘಾಲಯದಲ್ಲಿ ಶೇ.67 ಮತದಾನ

ನಾಗಾಲ್ಯ್ಂಡ್ ಹಾಗೂ ಮೇಘಾಲಯಗಳ ವಿಧಾನಸಭೆಗೆ ಇಂದು ಮತದಾನ ನಡೆದಿದ್ದು ನಾಗಾಲ್ಯಾಂಡಿನಲ್ಲಿ ಶೇ.75, ಮೇಘಾಲಯದಲ್ಲಿ ಶೇ.67ರಷ್ಟು ಮತದಾನವಾಗಿದೆ.

ಈಶಾನ್ಯ ರಾಜ್ಯಗಳ ಚುನಾವಣೆ: ನಾಗಾಲ್ಯಾಂಡ್ ನಲ್ಲಿ  ಶೇ.75, ಮೇಘಾಲಯದಲ್ಲಿ ಶೇ.67 ಮತದಾನ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ನಾಗಾಲ್ಯ್ಂಡ್ ಹಾಗೂ ಮೇಘಾಲಯಗಳ ವಿಧಾನಸಭೆಗೆ ಇಂದು ಮತದಾನ ನಡೆದಿದ್ದು ನಾಗಾಲ್ಯಾಂಡಿನಲ್ಲಿ ಶೇ.75, ಮೇಘಾಲಯದಲ್ಲಿ ಶೇ.67ರಷ್ಟು ಮತದಾನವಾಗಿದೆ. ಈಶಾನ್ಯ ರಾಜ್ಯಗಳಲ್ಲಿ  ಸಂಜೆ ನಾಲ್ಕರವರೆಗೆ ನಡೆದ ಮತದಾನದಲ್ಲಿ ಈ ಪ್ರಮಾಣದ ಮತಗಳು ಚಲಾವಣೆಯಾಗಿದ್ದು ಮತದಾನ ಸಂಪೂರ್ಣಗೊಂಡ ಬಳಿಕ ಮತಗಳ ಶೇಕಡಾವಾರು ಪ್ರಮಾಣದಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.
ಮೇಘಾಲಯ ಹಾಗೂ ನಾಗಾಲ್ಯಾಂಡ್ ಗಳಲ್ಲಿ ಕ್ರಮವಾಗಿ 60 ವಿಧಾನಸ್ಭೆ ಕ್ಷೇತ್ರಗಳಿದ್ದು ಇದರಲ್ಲಿ ತಲಾ 59 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾಗಾಲ್ಯಾಂಡ್ ಹಾಗೂ ಮೇಘಾಲಯಗಳಲ್ಲಿ ಕ್ರಮವಾಗಿ ಶೇ.90 ಹಾಗೂ ಶೇ.89ರಷ್ಟು ಮತದಾನ ನಡೆದಿತ್ತು.
ಕೆಲವು ಸಣ್ಣ ಪುಟ್ಟ ಘಟನೆ ಹೊರತಾಗಿ ಎರಡೂ ರಾಜ್ಯಗಳಲ್ಲಿ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುತ್ತಿದೆ. ಮಾರ್ಚ್ 3ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.