ನಟಿ ಶ್ರೀದೇವಿ ನಿಧನಕ್ಕೂ ಮುನ್ನ ದುಬೈ ಹೊಟೆಲ್ ರೂಂ ನಲ್ಲಿ ನಡೆದದ್ದಾರೂ ಏನು?
ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟಿ ಶ್ರೀದೇವಿ ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದು, ಇದೀಗ ಅವರ ಸಾವಿಗೆ ಬಾಲಿವುಡ್ ಮಾತ್ರವಲ್ಲದೇ ದೇಶಾದ್ಯಂತ ಆಘಾತ ವ್ಯಕ್ತವಾಗುತ್ತಿದೆ.

Published On :
ದುಬೈ: ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟಿ ಶ್ರೀದೇವಿ ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾಗಿದ್ದು, ಇದೀಗ ಅವರ ಸಾವಿಗೆ ಬಾಲಿವುಡ್ ಮಾತ್ರವಲ್ಲದೇ ದೇಶಾದ್ಯಂತ ಆಘಾತ ವ್ಯಕ್ತವಾಗುತ್ತಿದೆ.
ಇಷ್ಟಕ್ಕೂ ನಟಿ ಶ್ರೀದೇವಿ ಸಾವಿನ ಕೊನೆಯ ಕ್ಷಣಗಳು ಹೇಗಿತ್ತು.. ಈ ಬಗ್ಗೆ ದುಬೈನ ಮಾಧ್ಯಮ ಖಲೀಜ್ ಟೈಮ್ಸ್ ವರದಿ ಮಾಡಿದ್ದು, ಪತಿಗಾಗಿ ಕಾಯುತ್ತಿದ್ದ ನಟಿ ಶವವಾಗಿದ್ದಳು ಎಂದು ವರದಿ ಮಾಡಿದೆ. ಸಂಬಂಧಿಯೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟಿ ಶ್ರೀದೇವಿ, ಪತಿ ಬೋನಿ ಕಪೂರ್ ರೊಂದಿಗೆ ವಿಶೇಷ ಔತಣಕೂಟದಲ್ಲಿ ಪಾಲ್ಗೊಳ್ಳಲು ದುಬೈ ಹೊಟೆಲ್ ರೂಂ ನಲ್ಲಿ ಸಿದ್ಧರಾಗುತ್ತಿದ್ದರು. ಇತ್ತ ಪತಿ ಬೋನಿ ಕಪೂರ್ ಕೂಡ ಮುಂಬೈನಿಂದ ಜುಮೆರಾಹ್ ಎಮಿರೇಟ್ಸ್ ವಿಮಾನದ ಮೂಲಕ ಶನಿವಾರ ಸಂಜೆ 5.30ಕ್ಕೆ ದುಬೈಗೆ ಹೊರಟಿದ್ದರು.
ಪ್ರೀತಿಯ ಮಡದಿಗೆ ಸರ್ ಪ್ರೈಸ್ ನೀಡುವ ಉದ್ದೇಶದಿಂದ ಬೋನಿ ಕಪೂರ್ ತಾವು ಈ ಮಾಹಿತಿ ನೀಡದೇ ನೇರವಾಗಿ ಹೊಟೆಲ್ ರೂಂಗೆ ತೆರಳಿದ್ದರು. ರೂಂನಲ್ಲಿ ಮಲಗಿದ್ದ ಶ್ರೀದೇವಿ ಅವರನ್ನು ಬೋನಿ ಕಪೂರ್ ಎಬ್ಬಿಸಿದ್ದು, ಈ ವೇಳೆ ಇಬ್ಬರೂ ಸುಮಾರು15 ನಿಮಿಷಗಳ ಮಾತುಕತೆ ನಡೆಸಿದ್ದರು. ಬಳಿಕ ಬೋನಿ ಕಪೂರ್ ವಿಶೇಷ ಔತಣಕೂಟಕ್ಕೆ ಶ್ರೀದೇವಿ ಅವರನ್ನು ಆಹ್ವಾನಿಸಿದ್ದು, ಇದಕ್ಕೆ ಒಪ್ಪಿದ ನಟಿ ಶ್ರೀದೇವಿ ಸ್ನಾನಕ್ಕಾಗಿ ಬಾತ್ ರೂಂಗೆ ತೆರಳಿದ್ದಾರೆ. ಸುಮಾರು 15 ನಿಮಿಷಗಳಾದರೂ ಶ್ರೀದೇವಿ ಹೊರಗೆ ಬರಲಿಲ್ಲ. ಬಳಿಕ ಪತಿ ಬೋನಿ ಕಪೂರ್ ಬಾತ್ ರೂಂನ ಬಾಗಿಲು ತಟ್ಟಿದ್ದು, ಈ ವೇಳೆ ನಟಿ ಶ್ರೀದೇವಿ ಅವರಿಂದ ಯಾವುದೇ ಉತ್ತರ ಬರಲಿಲ್ಲ.
ಅನುಮಾನಗೊಂಡ ಬೋನಿ ಕಪೂರ್ ಬಾಗಿಲನ್ನು ಒಡೆದು ತೆಗೆದಿದ್ದು, ಈ ವೇಳೆ ನಟಿ ಬಾತ್ ರೂಂನ ನೀರು ತುಂಬಿದ್ದ ಟಬ್ ನಲ್ಲಿ ಅಲುಗಾಡೇ ಮಲಗಿದ್ದರು. ಬೋನಿಕಪೂರ್ ಶ್ರೀದೇವಿ ಅವರನ್ನು ಎಬ್ಬಿಸಲು ಪ್ರಯತ್ನಿಸಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಗಾಬರಿಗೊಂಡ ಬೋನಿ ಕಪೂರ್ ಕೂಡಲೇ ತಮ್ಮ ಸ್ನೇಹಿತರಿಗೆ ಕರೆ ಮಾಡಿದ್ದು, ಬಳಿಕ ರಾತ್ರಿ 9 ಗಂಟೆ ಸುಮಾರಿನಲ್ಲಿ ದುಬೈ ಪೊಲೀಸರಿಗೆ ಕರೆ ಮಾಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ವೈದ್ಯರು ಶ್ರೀದೇವಿ ಅವರನ್ನು ಪರೀಕ್ಷೆ ಮಾಡಿದ್ದು, ನಟಿ ಅದಾಗಲೇ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದ್ದರಂತೆ.
ಬಳಿಕ ಆಕೆಯ ಪಾರ್ಥೀವ ಶರೀರವನ್ನು ದುಬೈನ ಆಸ್ಪತ್ರೆಗೆ ರವಾನೆ ಮಾಡಿ, ಮರಣೋತ್ತರ ಪರೀಕ್ಷೆ ಮಾಡಲಾಗಿದ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


