ಬ್ಯಾಂಕ್ ವಂಚನೆ ಹಗರಣ: 16 ಬ್ಯಾಂಕುಗಳಿಂದ ಸಾಲ ಪಡೆದಿದ್ದ ನೀರವ್ ಮೋದಿ,ಮೆಹುಲ್ ಚೋಕ್ಸಿ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಆಭರಣ ಉದ್ಯಮಿ ನೀರವ್ ಮೋದಿ ,ಮೆಹುಲ್ ಚೋಕ್ಸಿಯ ಮತ್ತಷ್ಟು ಹಗರಣಗಳನ್ನು ಪತ್ತೆ ಹಚ್ಚಿದೆ.

ದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಆಭರಣ ಉದ್ಯಮಿ ನೀರವ್ ಮೋದಿ ,ಮೆಹುಲ್ ಚೋಕ್ಸಿಯ ಮತ್ತಷ್ಟು ಹಗರಣಗಳನ್ನು ಪತ್ತೆ ಹಚ್ಚಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಾತ್ರವಲ್ಲದೇ ಇತರ 16 ಬ್ಯಾಂಕುಗಳಲ್ಲಿ ಇವರಿಬ್ಬರು ಸಾಲ ಪಡೆದಿದ್ದು, ಬ್ಯಾಂಕುಗಳಿಗೆ ಸುಮಾರು 20 ಸಾವಿರ ಕೋಟಿ ರೂ. ನಷ್ಟು ನಷ್ಟವಾಗಿದೆ ಎಂದು ಇಡಿ ಹೇಳಿದೆ.
ಈ ಸಂಬಂಧ ಇಡಿ ನಿರ್ದೇಶಕ ಕರ್ನಾಲ್ ಸಿಂಗ್ ಬ್ಯಾಂಕುಗಳಿಗೆ ಪತ್ರ ಬರೆದು ಮಾಹಿತಿ ಕೇಳಿದ್ದಾರೆ. ಸಾಲದ ಬಗ್ಗೆ ಮಾತ್ರ ಮಾಹಿತಿ
ಪಡೆಯಲಾಗುತ್ತಿದೆ ಆದರೆ, ದೂರು ಸಲ್ಲಿಸುವಂತೆ ಬ್ಯಾಂಕುಗಳಿಗೆ ತಿಳಿಸಿಲ್ಲ ಎಂದು ಅವರು ಹೇಳಿದ್ದಾರೆ.
16 ಬ್ಯಾಂಕುಗಳಲ್ಲಿ 5 ಸಾವಿರದಿಂದ 10 ಸಾವಿರ ಕೋಟಿ ರೂ. ನಷ್ಟು ನೀರವ್ ಮೋದಿ, ಮೆಹುಲ್ ಚೋಕ್ಸಿ ಸಾಲ ಪಡೆದಿರುವ ಸಾಧ್ಯತೆಯಿದ್ದು,
ಈ ನಿಟ್ಟಿನಲ್ಲಿ ಸಿಬಿಐ ಹಾಗೂ ಇಡಿ ತನಿಖೆ ಕೈಗೊಂಡಿವೆ.
ಬ್ಯಾಂಕುಗಳಿಂದ ತೆಗೆದುಕೊಂಡಿರುವ ಸಾಲವನ್ನು ಬೇಗನೆ ಹಿಂದಿರುಗಿಸುವಂತೆ ಆರೋಪಿಗಳಿಗೆ ಸರ್ಕಾರ ತಿಳಿಸಿದೆ. ಅಲ್ಲದೇ ನೀರವ್ ಮೋದಿ ಪಾಸ್ ಪೋರ್ಟ್ ನ್ನು ಅಮಾನತುಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


