ದೇಶ

ಜಮ್ಮು ಕಾಶ್ಮೀರದಲ್ಲಿ ಆಕಸ್ಮಿಕ ಫೈರಿಂಗ್ : ವಿಶೇಷ ಪೊಲೀಸ್ ಅಧಿಕಾರಿಗೆ ಗಾಯ

ಸರ್ವೀಸ್ ರಿವಾಲ್ವರ್ ನಿಂದ ಆಕಸ್ಮಿಕವಾಗಿ ಗುಂಡು ಸಿಡಿದ ಪರಿಣಾಮ ವಿಶೇಷ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿರುವ ಘಟವೆ ಕಾಶ್ಮೀರದ ಸೋಫಿಯಾನ್ ನಲ್ಲಿ ನಡೆದಿದೆ...

ಜಮ್ಮು ಕಾಶ್ಮೀರದಲ್ಲಿ ಆಕಸ್ಮಿಕ ಫೈರಿಂಗ್ : ವಿಶೇಷ ಪೊಲೀಸ್ ಅಧಿಕಾರಿಗೆ ಗಾಯ
ಸಾಂದರ್ಭಿಕ ಚಿತ್ರ
Published On :
ಶ್ರೀನಗರ: ಸರ್ವೀಸ್ ರಿವಾಲ್ವರ್ ನಿಂದ ಆಕಸ್ಮಿಕವಾಗಿ ಗುಂಡು ಸಿಡಿದ ಪರಿಣಾಮ ವಿಶೇಷ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿರುವ ಘಟವೆ ಕಾಶ್ಮೀರದ ಸೋಫಿಯಾನ್ ನಲ್ಲಿ ನಡೆದಿದೆ.
ಝೈನಾಪುರ ಪೊಲೀಸ್ ಠಾಣೆ ಎಸ್ ಪಿಐ ಮಹಮದ್ ಅಮೀರ್ ಗಾಯಗೊಂಡಿದ್ದು, ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಹೋರಾಲು ಎಸ್ ಪಿಒ ಗಳನ್ನು ನಿಯೋಜಿಸಿ ತಿಂಗಳಿಗೆ ಇಷ್ಟು ಹಣ ಎಂದು ಪ್ಯಾಕೇಜ್ ರೂಪದಲ್ಲಿ ವೇತನ ನೀಡಲಾಗುತ್ತದೆ. 
ಉಗ್ರರ ವಿರುದ್ಧ ಹೋರಾಟಕ್ಕೆ ನೇಮಿಸುವ ಈ ವಿಶೇಷ ಪೊಲೀಸ್ ಅಧಿಕಾರಿಗಳಿಗೆ ಪೇದೆಗಳಿಗಿಂತಲೂ ಕಡಿಮೆ ಸಂಬಳ ನೀಡಲಾಗುತ್ತದೆ,
ಜೊತೆಗೆ ಇವರಿಗೆ ಶಸ್ತ್ರ ಬಳಸುವ ತರಬೇತು ನಿಡಿರುವುದಿಲ್ಲ, ಹೀಗಾಗಿ ಅವರಿಗೆ ನಿರ್ವಹಣ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.