ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ: ಫೈರ್ ಸ್ಟಾರ್ ಡೈಮಂಡ್ ನ ಅಧ್ಯಕ್ಷ ವಿಫುಲ್ ಅಂಬಾನಿ ಬಂಧನ
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈರ್ ಸ್ಟಾರ್ ಡೈಮಂಡ್ಸ್ ಅಧ್ಯಕ್ಷ ವಿಫುಲ್ ಅಂಬಾನಿಯನ್ನು ಸಿಬಿಐ ಬಂಧಿಸಿದ್ದು ಈ ಪ್ರಕರಣದ ಮೊದಲ ಹೈಪ್ರೊಫೈಲ್ ಬಂಧನ ಇದಾಗಿದೆ.

Published On :
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೈರ್ ಸ್ಟಾರ್ ಡೈಮಂಡ್ಸ್ ಅಧ್ಯಕ್ಷ ವಿಫುಲ್ ಅಂಬಾನಿಯನ್ನು ಸಿಬಿಐ ಬಂಧಿಸಿದ್ದು ಈ ಪ್ರಕರಣದ ಮೊದಲ ಹೈಪ್ರೊಫೈಲ್ ಬಂಧನ ಇದಾಗಿದೆ.
ವಿಫುಲ್ ಅಂಬಾನಿ ಅಂಬಾನಿ ಸಹೋದರರ ಸಂಬಂಧಿಯಾಗಿದ್ದು, ಈ ಪ್ರಕರಣದಲ್ಲಿ ವಿಫುಲ್ ಅಂಬಾನಿಯನ್ನು ಬಂಧಿಸಿರುವುದಕ್ಕೂ ಅಂಬಾನಿ ಸಹೋದರರು ಅಥವಾ ಅವರ ಸಂಸ್ಥೆಗಳು ಶಾಮೀಲಾಗಿರುವುದರ ಬಗ್ಗೆ ಸಿಬಿಐ ಈ ವರೆಗೂ ಮಾಹಿತಿ ನೀಡಿಲ್ಲ.
ವಿಫುಲ್ ಅಂಬಾನಿಯೊಂದಿಗೆ ಇನ್ನೂ 4 ಹಿರಿಯ ಅಧಿಕಾರಿಗಳನ್ನು ಬಂಧಿಸಲಾಗಿದ್ದು, ಫೈರ್ ಸ್ಟಾರ್ ಡೈಮಂಡ್ ನ ಹಿರಿಯ ಕಾರ್ಯನಿರ್ವಹಕರಾಗಿರುವ ಕವಿತಾ ಮಾಣಿಕ್ಕರ್, ಅರ್ಜುನ್ ಪಾಟೀಲ್ ನ್ನೂ ಬಂಧಿಸಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚನೆ ನಡೆದಿರುವ ಪ್ರಕರಣದಲ್ಲಿ ಎಲ್ಒಯು ಗಳನ್ನು ನೀಡಿರುವ ಅಪರಾಧಕ್ಕೆ ಸಂಬಂಧಿಸಿದಂತೆ ಸೋಲಾರ್ ಎಕ್ಸ್ಪೋರ್ಟ್ಸ್, ಡೈಮಂಡ್ ಆರ್ ಯುಎಸ್, ಸ್ಟೆಲ್ಲರ್ ಡೈಮಂಡ್ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಯಲ್ಲಿದ್ದ ಮಾಣಿಕ್ಕರ್ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
CBIಬಂಧನPunjab National Bank Fraud Caseಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣFire Star DiamondVipul Ambaniಫೈರ್ ಸ್ಟಾರ್ ಡೈಮಂಡ್ವಿಫುಲ್ ಅಂಬಾನಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


