ವಾಯು ಗಡಿ ಉಲ್ಲಂಘಿಸಿ ಎಲ್ಒಸಿಯಿಂದ 300 ಮೀಟರ್ ಒಳಪ್ರವೇಶಿಸಿದ ಪಾಕ್ ಹೆಲಿಕಾಪ್ಟರ್
ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ 300 ಮೀಟರ್ ಅಂತರದಲ್ಲಿ ಪಾಕ್ ಹೆಲಿಕಾಪ್ಟರ್ ಹಾರಾಟ ನಡೆಸುವ ಮೂಲಕ ವಾಯುಪ್ರದೇಶ ನೀತಿಯನ್ನು ಉಲ್ಲಂಘಿಸಿದೆ.

ಜಮ್ಮು-ಕಾಶ್ಮೀರ: ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಪದೇ ಪದೇ ಕದನ ವಿರಾಮ ಉಲ್ಲಂಘಿಸುವ ಮೂಲಕ ಭಾರತದ ವಿರುದ್ಧ ಕಾಲು ಕೆರೆದುಕೊಂಡು ತಂಟೆ ತೆಗೆಯುತ್ತಿರುವ ಪಾಕಿಸ್ತಾನ ಇಂದು ಮತ್ತೊಂದು ಖ್ಯಾತೆ ತೆಗೆದಿದೆ.
ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಪಾಕ್ ಹೆಲಿಕಾಪ್ಟರ್ ವೊಂದು ವಾಯುಪ್ರದೇಶ ಉಲ್ಲಂಘಿಸಿ 300 ಮೀಟರ್ ಒಳಪ್ರವೇಶಿಸಿದೆ.
ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಉಭಯ ದೇಶಗಳ ರೋಟರಿ ವಿಂಗ್ ವಿಮಾನಗಳು 10 ಕಿಲೋಮೀಟರ್ ಕೆಳಗೆ ಒಳಪ್ರವೇಶಿಸುವಂತಿಲ್ಲ ಎಂಬ ನಿಯಮವಿದೆ.
ಆದರೆ, ಪೊಂಚ್ ವಲಯದ ಗುಲ್ಪುರ್ ವಲಯದಲ್ಲಿ ಇಂದು ಬೆಳಿಗ್ಗೆ 9-45ರ ಸಮಯದಲ್ಲಿ ಎಂ ಐ-17 ಹೆಲಿಕಾಪ್ಟರ್ ನಿಂದ ನಿಯಮ ಉಲ್ಲಂಘಿಸಲಾಗಿದೆ . ಆದರೆ, ಗುಂಡಿನ ದಾಳಿಯಂತಹ ಪ್ರತಿಕೂಲ ಕಾರ್ಯಗಳು ಎರಡು ಕಡೆಯಿಂದಲೂ ನಡೆದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


