ದೇಶ

ಗುರುಗಾಂವ್: ಶಿಕ್ಷಕಿಗೇ ಅತ್ಯಾಚಾರ ಬೆದರಿಕೆ ಹಾಕಿದ ವಿದ್ಯಾರ್ಥಿ, ಶಿಕ್ಷಕಿಗೆ ಸೆಕ್ಸ್ ಆಫರ್ ಮಾಡಿದ ಮತ್ತೋರ್ವ ವಿದ್ಯಾರ್ಥಿ!

ಅಘಾತಕಾರಿ ಬೆಳವಣಿಗೆಯೊಂದರಲ್ಲಿ 13 ವರ್ಷದ 7 ನೇ ತರಗತಿ ವಿದ್ಯಾರ್ಥಿಯೋರ್ವ ಶಿಕ್ಷಕಿ ಹಾಗೂ ಆಕೆಯ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಿರುವ

ಗುರುಗಾಂವ್: ಶಿಕ್ಷಕಿಗೇ ಅತ್ಯಾಚಾರ ಬೆದರಿಕೆ ಹಾಕಿದ ವಿದ್ಯಾರ್ಥಿ, ಶಿಕ್ಷಕಿಗೆ ಸೆಕ್ಸ್ ಆಫರ್ ಮಾಡಿದ ಮತ್ತೋರ್ವ ವಿದ್ಯಾರ್ಥಿ!
ಗುರುಗಾಂವ್: ಶಿಕ್ಷಕಿಗೇ ಅತ್ಯಾಚಾರ ಬೆದರಿಕೆ ಹಾಕಿದ ವಿದ್ಯಾರ್ಥಿ, ಶಿಕ್ಷಕಿಗೆ ಸೆಕ್ಸ್ ಆಫರ್ ಮಾಡಿದ ಮತ್ತೋರ್ವ ವಿದ್ಯಾರ್ಥಿ!
Published On :
ಗುರುಗಾಂವ್: ಅಘಾತಕಾರಿ ಬೆಳವಣಿಗೆಯೊಂದರಲ್ಲಿ 13 ವರ್ಷದ 7 ನೇ ತರಗತಿ ವಿದ್ಯಾರ್ಥಿಯೋರ್ವ ಶಿಕ್ಷಕಿ ಹಾಗೂ ಆಕೆಯ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ ಹಾಕಿರುವ ಘಟನೆ ಗುರುಗಾಂವ್ ನಲ್ಲಿ ನಡೆದಿದೆ. 
ಇಷ್ಟೇ ಸಾಲದೆಂಬಂತೆ ಮತ್ತೋರ್ವ ವಿದ್ಯಾರ್ಥಿ ಶಿಕ್ಷಕಿಗೆ ಇ-ಮೇಲ್ ಮೂಲಕ ಜಾಲಿ ರೈಡ್, ಕ್ಯಾಂಡಲ್ ಲೈಟ್ ಡೇಟ್ ಹಾಗೂ ಸೆಕ್ಸ್ ಆಫರ್ ಮಾಡಿದ್ದಾನೆ. ಎರಡೂ ಘಟನೆಗಳು ಗುರುಗಾಂವ್ ನ ಪ್ರತಿಷ್ಠಿತ ಶಾಲೆಯಲ್ಲಿ ನಡೆದಿದ್ದು, ಶಾಲಾ ಆಡಳಿತ ಮಂಡಳಿ ತಲೆ ತಗ್ಗಿಸುವಂತಾಗಿದೆ. ಎರಡೂ ಘಟನೆಗಳು ಕಳೆದ ವಾರ ನಡೆದಿದೆ. 
ಫೇಸ್ ಬುಕ್ ನಲ್ಲಿ ಶಿಕ್ಷಕಿ ಹಾಗೂ ಆಕೆಯ ಅಪ್ರಾಪ್ತ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕಿರುವುದು ಶಿಕ್ಷಕಿಯ ಕುಟುಂಬ ಸದಸ್ಯರಿಗೆ ಅಘಾತ ಉಂಟು ಮಾಡಿದ್ದು, ಮಾನಸಿಕ ಅಘಾತ ಎದುರಿಸುತ್ತಿದ್ದು ಶಿಕ್ಷಕಿಯ ಪುತ್ರಿ ಬೆದರಿಕೆ ಹಾಕಿರುವ ವಿದ್ಯಾರ್ಥಿಯ ಸಹಪಾಠಿಯಾಗಿದ್ದು ಶಾಲೆಗೆ ಆಗಮಿಸುವುದನ್ನು ನಿಲ್ಲಿಸಿದ್ದಾರೆ. 
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಶಾಲೆಗೆ ನೋಟಿಸ್ ಕಳಿಸಲು ನಿರ್ಧರಿಸಿದ್ದು, ಶಾಲೆಯ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳಿಗೆ ಸಲಹಾ ವಿಭಾಗಗಳನ್ನು ಪ್ರಾರಂಭಿಂಭಿಸಲು ನಿರ್ಧರಿಸಿದೆ. ಘಟನೆಗಳನ್ನು ಗಂಭೀರವಾಗಿ ಶಾಲೆಯ ಅಧಿಕಾರಿಗಳು ಪರಿಗಣಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.