ಪ್ರಧಾನಿ ಕಾರ್ಯಾಲಯ ನಿದ್ದೆ ಮಾಡುತಿತ್ತಾ? ಪ್ರಧಾನಿ ಜೊತೆ ನೀರವ್ ಮೋದಿ ಪೊಟೋ ಕುರಿತು ಶತ್ರುಘ್ನ ಸಿನ್ಹಾ ಪ್ರಶ್ನೆ
ಪಂಜಾಬ್ ನ್ಯಾಷನಲ್ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಪ್ರಧಾನಮಂತ್ರಿ ಕಾರ್ಯಾಲಯದ ವಿರುದ್ಧ ಮತ್ತೆ ಗುಡುಗಿದ್ದಾರೆ.

ನವದೆಹಲಿ: ಪಂಜಾಬ್ ನ್ಯಾಷನಲ್ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ಪ್ರಧಾನಮಂತ್ರಿ ಕಾರ್ಯಾಲಯದ ವಿರುದ್ಧ ಮತ್ತೆ ಗುಡುಗಿದ್ದಾರೆ.
ದಾವೋಸ್ ನಲ್ಲಿ ಇತ್ತೀಚಿಗೆ ನಡೆದ ವಿಶ್ವ ಆರ್ಥಿಕ ಶೃಂಗಸಭೆ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಜೊತೆಯಲ್ಲಿಯೇ ನೀರವ್ ಮೋದಿ ಇರುವ ಪೊಟೋ ಹಾಕಿದ್ದ ಪ್ರಧಾನಮಂತ್ರಿ ಕಾರ್ಯಾಲಯವನ್ನು ಶತ್ರುಘ್ನ ಸಿನ್ಹಾ ಪ್ರಶ್ನಿಸಿದ್ದಾರೆ.
ಪಾಟ್ನಾ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭದಲ್ಲಿ ಯಶವಂತ ಸಿನ್ಹಾ ಸೇರಿದಂತೆ ತಮ್ಮನ್ನು ಪ್ರಧಾನಿ ನರೇಂದ್ರಮೋದಿ ಜೊತೆ ವೇದಿಕೆ ಹಂಚಿಕೊಳ್ಳಲು ಬಿಡಲಿಲ್ಲ. ಆದರೆ, ದಾವೋಸ್ ನಲ್ಲಿ ನೀರವ್ ಮೋದಿ ಹೇಗೆ ಪ್ರಧಾನಿ ಜೊತೆಗೆ ಕಾಣಿಸಿಕೊಳ್ಳುವಾಗ ಪ್ರಧಾನಿ ಕಾರ್ಯಾಲಯ ನಿದ್ದೆ ಮಾಡುತಿತ್ತಾ ಈ ಬಗ್ಗೆ
ದೇಶಕ್ಕೆ ತಿಳಿಸಬೇಕು ಎಂದು ಶತ್ರುಘ್ನ ಸಿನ್ಹಾ ಆಗ್ರಹಿಸಿದ್ದಾರೆ.
ದಾವೋಸ್ ನಲ್ಲಿ ಪ್ರಧಾನಿ ನರೇಂದ್ರಮೋದಿ ವಿವಿಧ ಕಂಪನಿಗಳ ಸಿಇಓ ನಿಯೋಗದೊಂದಿಗೆ ನಡೆಸಿದ ಸಂವಾದದಲ್ಲಿ ನೀರವ್ ಮೋದಿ ಇರುವ ಚಿತ್ರವನ್ನು ವಿದೇಶಾಂಗ ಸಚಿವಾಲಯ ಹಾಗೂ ಪ್ರಧಾನಮಂತ್ರಿ ಕಾರ್ಯಾಲಯ ಟ್ವೀಟರ್ ನಲ್ಲಿ ಪ್ರಕಟಿಸಿತ್ತು.
ಭವಿಷ್ಯದ ಭಾರತಕ್ಕಾಗಿ ವಿಶ್ವ ಆರ್ಥಿಕ ವೇದಿಕೆಯಲ್ಲಿ ಪ್ರಧಾನಿ ನರೇಂದ್ರಮೋದಿ ಹಾಗೂ ಭಾರತೀಯ ಕಂಪನಿಗಳ ಸಿಇಓ ಪರಸ್ಪರ ಕೈ ಜೋಡಿಸಲಿದ್ದಾರೆ ಎಂಬಂತಹ ಹೇಳಿಕೆ ಸಹ ನೀಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


