2ಜಿ, ಬೋಫೋರ್ಸ್ ನಂತೆ ಪಿಎನ್ ಬಿ ವಂಚನೆ ಪ್ರಕರಣ ಕೂಡ ಕುಸಿಯಲಿದೆ: ನೀರವ್ ಮೋದಿ ಪರ ವಕೀಲ
2ಜಿ, ಬೋಫೋರ್ಸ್ ಹಗರಣಗಳಂತೆಯೇ ಪಿಎನ್ ಬಿ ವಂಚನೆ ಪ್ರಕರಣ ಕೂಡ ಬೀಳಲಿದ್ದು, ತನಿಖಾ ಸಂಸ್ಥೆಗಳು ಹೊರಿಸಿರುವ ಯಾವುದೇ ಆರೋಪಗಳನ್ನು ಸಾಬೀತು ಮಾಡಲು ಸಾಧ್ಯವಿಲ್ಲ ಎಂದು ನೀರವ್ ಮೋದಿ ಪರ ವಕೀಲ ವಿಜಯ್ ಅಗರ್ವಾಲ್ ಹೇಳಿದ್ದಾರೆ.

Published On :
ನವದೆಹಲಿ: 2ಜಿ, ಬೋಫೋರ್ಸ್ ಹಗರಣಗಳಂತೆಯೇ ಪಿಎನ್ ಬಿ ವಂಚನೆ ಪ್ರಕರಣ ಕೂಡ ಬೀಳಲಿದ್ದು, ತನಿಖಾ ಸಂಸ್ಥೆಗಳು ಹೊರಿಸಿರುವ ಯಾವುದೇ ಆರೋಪಗಳನ್ನು ಸಾಬೀತು ಮಾಡಲು ಸಾಧ್ಯವಿಲ್ಲ ಎಂದು ನೀರವ್ ಮೋದಿ ಪರ ವಕೀಲ ವಿಜಯ್ ಅಗರ್ವಾಲ್ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ನೀರವ್ ಮೋದಿ ವಿರುದ್ಧ ತನಿಖಾ ಸಂಸ್ಥೆಗಳು ಹೊರಿಸಿರುವ ಎಲ್ಲ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, 2ಜಿ, ಬೋಫೋರ್ಸ್ ಹಗರಣಗಳಂತೆಯೇ ಪಿಎನ್ ಬಿ ವಂಚನೆ ಪ್ರಕರಣವನ್ನು ಕೂಡ ಸಾಬೀತು ಮಾಡಲು ಸಾಧ್ಯವಿಲ್ಲ. ನನಗೆ ಭರವಸೆ ಇದ್ದು ನೀರವ್ ಮೋದಿ ವಿರುದ್ಧದ ಆರೋಪಗಳು ಸುಳ್ಳಾಗಲಿದ್ದು, ಅವರು ನಿರಪರಾಧಿ ಎಂದು ಸಾಬೀತಾಗುತ್ತದೆ ಎಂದು ಹೇಳಿದ್ದಾರೆ.
ನಕಲಿ ಪ್ರಮಾಣ ಪತ್ರ ಸಲ್ಲಿಕೆ ಮಾಡಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಸಾಲಪತ್ರದ ಮೂಲಕ ನೀರವ್ ಮೋದಿ ಇತರೆ ಬ್ಯಾಂಕ್ ಗಳಿಂದ ಸುಮಾರು 11, 300 ರೂಕೋಟಿ ರೂಗಳನ್ನು ಸಾಲಪಡೆದು ವಂಚಿಸಿದ್ದರು ಎಂಬ ಗಂಭೀರ ಆರೋಪ ಅವರ ಮೇಲಿದೆ. ಪ್ರಕರಣ ಸಂಬಂಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಇದೇ ಪ್ರಕರಣದಲ್ಲಿ ಗೀತಾಂಜಲಿ ಜೆಮ್ಸ್ ಸಂಸ್ಥೆಯ ನಿರ್ದೇಶಕ ಮೆಹುಲ್ ಚೋಕ್ಸಿ ಅವರನ್ನೂ ಕೂಡ ಪ್ರಮುಖ ಆರೋಪಿಯನ್ನಾಗಿಸಲಾಗಿದೆ.
ಈಗಾಗಲೇ ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಅವರಿಗೆ ಸಂಬಂಧಿಸಿದ ದೇಶದ ವಿವಿಧೆಡೆ ಇರುವ ಆಸ್ತಿ, ಕಚೇರಿ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಚೋಕ್ಸಿ, ನೀರವ್ ಮೋದಿ ಕುಟುಂಬಸ್ಥರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


