ಬೀಫ್ ತಿನ್ನಬಹುದು, ಆದರೆ ಅದನ್ನೇ ಹೇಳಿಕೊಂಡು ಸಂಭ್ರಮಿಸುವ ಅಗತ್ಯವಿಲ್ಲ: ವೆಂಕಯ್ಯ ನಾಯ್ಡು
ಬೀಫ್ ತಿನ್ನುವುದರ ಬಗ್ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಾತನಾಡಿದ್ದು, ಇಷ್ಟವಿರುವವರು ತಿನ್ನಬಹುದು, ಆದರೆ ಬೀಫ್ ತಿಂದೆ ಎಂದು ಹೇಳಿಕೊಂಡು ಸಂಭ್ರಮಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Published On :
ಮುಂಬೈ: ಬೀಫ್ ತಿನ್ನುವುದರ ಬಗ್ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಾತನಾಡಿದ್ದು, ಇಷ್ಟವಿರುವವರು ತಿನ್ನಬಹುದು, ಆದರೆ ಬೀಫ್ ತಿಂದೆ ಎಂದು ಹೇಳಿಕೊಂಡು ಸಂಭ್ರಮಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಬೀಫ್ ತಿನ್ನುವುದಾದರೆ ತಿನ್ನಿ, ಆದರೆ ಅದನ್ನೇ ಸಂಭ್ರಮಿಸುವುದು ಏಕೆ? ಹಾಗೆಯೇ ಚುಂಬಿಸಬೇಕು ಎಂದುಕೊಂಡರೆ ಚುಂಬಿಸಿ ಅದಕ್ಕಾಗಿ ಸಂಭ್ರಮಾಚರಣೆ ಮಾಡಿ, ಮತ್ತೊಬ್ಬರ ಅನುಮತಿ ಪಡೆಯುವುದೇಕೆ ಎಂದು ನಾಯ್ಡು ಪ್ರಶ್ನಿಸಿದ್ದಾರೆ.
ಆರ್ ಎ ಪೋಡಾರ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿರುವ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಸಂಸತ್ ಮೇಲೆ ದಾಳಿ ನಡೆಸಿದ್ದ ಭಯೋತ್ಪಾದಕ ಅಫ್ಜಲ್ ಗುರು ನನ್ನು ಆದರ್ಶ ಪುರುಷನನ್ನಾಗಿ ಸ್ಮರಿಸುವವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಅಪ್ಜಲ್ ಗುರು ಹೆಸರನ್ನು ಒಂದಷ್ಟು ಜನರು ಘೋಷಣೆಯಾಗಿ ಕೂಗುತ್ತಾರೆ, ಆತ ಸಂಸತ್ ನ್ನು ಉಡಾಯಿಸಲು ಯತ್ನಿಸಿದ್ದ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


