ದೇಶ

ನಟ ಸುಮಿತ್ ಪತ್ನಿ ಎದುರು ಹಸ್ತಮೈಥುನ: ಎರಡೇ ಗಂಟೆಗಳಲ್ಲಿ ಆರೋಪಿ ಬಂಧನ

ನಟ ಸುಮೀತ್‌ ರಾಘವನ್‌ ಅವರ ಪತ್ನಿ ಮುಂದೆ ಹಸ್ತ ಮೈಥುನ ಮಾಡಿದ ವ್ಯಕ್ತಿ ಪೊಲೀಸರ ಅತಿಥಿಯಾಗಿದ್ದಾನೆ....

ನಟ ಸುಮಿತ್ ಪತ್ನಿ ಎದುರು ಹಸ್ತಮೈಥುನ:  ಎರಡೇ ಗಂಟೆಗಳಲ್ಲಿ ಆರೋಪಿ ಬಂಧನ
ಪತ್ನಿ ಚಿನ್ಮಯಿ ಜೊತೆ ನಟ ಸುಮಿತ್
Published On :
ನವದೆಹಲಿ: ನಟ ಸುಮೀತ್‌ ರಾಘವನ್‌ ಅವರ ಪತ್ನಿ ಮುಂದೆ ಹಸ್ತ ಮೈಥುನ ಮಾಡಿದ ವ್ಯಕ್ತಿ ಪೊಲೀಸರ ಅತಿಥಿಯಾಗಿದ್ದಾನೆ.
ಮುಂಬಯಿ ಹೊರವಲಯದ ವಿಲೇ ಪಾರ್ಲೆಯಲ್ಲಿ ಯಾವುದೋ ಕೆಲಸಕ್ಕೆಂದು ಚಿನ್ಮಯೀ ಸುರ್‌ವೆ ಹೋಗಿದ್ದರು, ಈ ವೇಳೆ ಆಕೆಯ ಮುಂದೆ ಬಿಳಿ ಬಿಎಂಡಬ್ಲ್ಯು ಕಾರಿನ ವ್ಯಕ್ತಿಯೊಬ್ಬ ಹಸ್ತಮೈಥುನ ಮಾಡಿಕೊಂಡ. 
ಇದರಿಂದ ಆಕ್ರೋಶಗೊಂಡ ಆಕೆ, ಆ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಆತ ಕಾರು ಚಲಾಯಿಸಿಕೊಂಡು ಪರಾರಿಯಾದ; ಆದರೆ ಚಿನ್ಮಯೀ ಅವರು ಸಮಯ ಪ್ರಜ್ಞೆ ತೋರಿ ಆತನ ಕಾರಿನ ಕೊನೆಯ ನಾಲ್ಕು ನಂಬರ್‌ಗಳನ್ನು (1985)  ನೋಟ್‌ ಮಾಡಿಕೊಂಡು ಪೊಲೀಸರಿಗೆ ದೂರು ನೀಡಿ ಎಫ್ಐಆರ್‌ ದಾಖಲಿಸಿದರು. 
ಪೊಲೀಸರು ಒಡನೆಯೇ ಸಿಸಿಟಿವಿ ಚಿತ್ರಗಳನ್ನು ಪರಿಶೀಲಿಸಿ ಆರೋಪಿ ಕಾರಿನ ಚಾಲಕನನ್ನು ಎರಡೇ ತಾಸುಗಳಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈ ಪ್ರಹಸನವನ್ನು ಚಿನ್ಮಯೀ ಅವರ ಪತಿ, ನಟ ಸುಮೀತ್‌ ರಾಘವನ್‌ ಅವರು ಟ್ವಿಟರ್‌ ಮೂಲಕ ಬಹಿರಂಗಪಡಿಸಿ ಕ್ಷಿಪ್ರ ಕಾಯಾಚರಣೆ ನಡೆಸಿದ ಪೊಲೀಸರನ್ನು ಪ್ರಶಂಸಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.