ದೇಶ

ಎಐಎಡಿಎಂಕೆ ಆಡಳಿತ ಕೆಟ್ಟದಾಗಿದೆ, ಅದಕ್ಕಾಗಿ ರಾಜಕೀಯ ಪ್ರವೇಶ: ಕಮಲ ಹಾಸನ್

ಎಐಎಡಿಎಂಕೆ ಆಡಳಿತ ಕೆಟ್ಟದ್ದಾಗಿರುವ ಕಾರಣ ನಾನು ರಾಜಕೀಯಕ್ಕೆ ಪ್ರವೇಶಿಸುತ್ತಿದ್ದೇನೆ ಎಂದು ನಟ ಕಮಲ ಹಾಸನ್ ಹೇಳಿದ್ದಾರೆ....

ಎಐಎಡಿಎಂಕೆ ಆಡಳಿತ ಕೆಟ್ಟದಾಗಿದೆ, ಅದಕ್ಕಾಗಿ ರಾಜಕೀಯ ಪ್ರವೇಶ: ಕಮಲ ಹಾಸನ್
ಕಮಲ ಹಾಸನ್
Published On :
ಚೆನ್ನೈ: ಎಐಎಡಿಎಂಕೆ ಆಡಳಿತ ಕೆಟ್ಟದ್ದಾಗಿರುವ ಕಾರಣ ನಾನು ರಾಜಕೀಯಕ್ಕೆ ಪ್ರವೇಶಿಸುತ್ತಿದ್ದೇನೆ ಎಂದು ನಟ ಕಮಲ ಹಾಸನ್ ಹೇಳಿದ್ದಾರೆ.
ಫೆಬ್ರವರಿ 21ರಂದು ತಮ್ಮ ಹೊಸ ಪಕ್ಷ ಉದ್ಘಾಟನೆಗೂ ಮುನ್ನ ನಾಮ್ ತಮಿಳರ್ ಕಟ್ಚಿ ಯ ಮುಖಂಡ ಸೀಮಾನ್ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ನಾಳೆ ತಮ್ಮ ಹೊಸ ಪಕ್ಷ ಉದ್ಘಾಟಿಸಲಿರುವ ಕಮಲ ಹಾಸನ್ ಮಧುರೈ ನಿಂದ ತಮಿಳು ನಾಡಿನಾದ್ಯಂತ ಪ್ರವಾಸ ಆರಂಭಿಸಲಿದ್ದಾರೆ. ಆಡಳಿತಾರೂಢ ಎಐಎಡಿಎಂಕೆ ತೀರಾ ಕಳಪೆಯಾಗಿದೆ, ಹೀಗಾಗಿ ನಾನು ಆ ಪಕ್ಷದ ಯಾರೋಬ್ಬರನ್ನು ಭೇಟಿ ಮಾಡಿಲ್ಲ ಎಂದು ತಿಳಿಸಿದರು. 
ಮಧುರೈ ನಲ್ಲಿ  ನಡೆಯುವ ಪಕ್ಷ ಉದ್ಘಾಟನೆ ಸಮಾರಂಭಕ್ಕೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಆಗಮಸಲಿದ್ದಾರೆ, ಕೇರಳ ಸಿಎಂ ಪಿಣರಾಯಿ ವಿಜಯನ್, ಬಿಹಾರ ಸಿಎಂ ನಿತೀಶ್ ಕುಮಾರ್ ಭಾಗವಹಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.