ಪಿಎನ್ ಬಿ ವಂಚನೆ ಪ್ರಕರಣದ ಎಫೆಕ್ಟ್: ಪ್ರತೀ 3 ವರ್ಷಕ್ಕೊಮ್ಮೆ ಸಾರ್ವಜನಿಕ ಬ್ಯಾಂಕ್ ಗಳ ಅಧಿಕಾರಿಗಳ ವರ್ಗಾವಣೆ!
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಬ್ಯಾಂಕ್ ವೊಂದರಲ್ಲಿ ಮೂರು ವರ್ಷ ಪೂರೈಸಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಸಾರ್ವಜನಿಕ ಬ್ಯಾಂಕ್ ಗಳಿಗೆ ಸಲಹೆ ನೀಡಿದೆ.

Published On :
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, ಬ್ಯಾಂಕ್ ವೊಂದರಲ್ಲಿ ಮೂರು ವರ್ಷ ಪೂರೈಸಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಸಾರ್ವಜನಿಕ ಬ್ಯಾಂಕ್ ಗಳಿಗೆ ಸಲಹೆ ನೀಡಿದೆ.
ಈ ಬಗ್ಗೆ ಸೋಮವಾರ ಕೇಂದ್ರ ವಿಚಕ್ಷಣಾ ಆಯೋಗ ಸಾರ್ವಜನಿಕ ಬ್ಯಾಂಕ್ ಗಳಿಗೆ ಸಲಹೆ ನೀಡಿದ್ದು, ಬ್ಯಾಂಕ್ ವೊಂದರಲ್ಲಿ ಮೂರು ವರ್ಷ ಸೇವೆ ಪೂರೈಕೆ ಮಾಡಿರುವ ಅಧಿಕಾರಿಗಳನ್ನು ಮತ್ತೊಂದು ಶಾಖೆ ಅಥವಾ ಊರಿಗೆ ವರ್ಗಾವಣೆ ಮಾಡುವಂತೆ ಸಲಹೆ ನೀಡಿದೆ. ಕೇವಲ ಬ್ಯಾಂಕ್ ಅಧಿಕಾರಿಗಳು ಮಾತ್ರವಲ್ಲದೇ ಸಿಬ್ಬಂದಿಗಳಿಗೂ ಈ ನಿಯಮ ಅನ್ವಯವಾಗಬೇಕು ಎಂದು ಹೇಳಿರುವ ಸಿವಿಸಿ, ಐದು ವರ್ಷ ಪೂರೈಕೆ ಮಾಡಿರುವ ಬ್ಯಾಂಕ್ ಸಿಬ್ಬಂದಿಗಳನ್ನು ವರ್ಗಾವಣೆ ಮಾಡುವಂತೆ ಸಲಹೆ ನೀಡಿದೆ.
ಯಾವುದೇ ಕಾರಣಕ್ಕೂ 3 ವರ್ಷ ಪೂರೈಕೆ ಮಾಡಿರುವ ಬ್ಯಾಂಕ್ ನ ಹಿರಿಯ ಅಧಿಕಾರಿಗಳು ಹಾಗೂ 5 ವರ್ಷ ಪೂರೈಕೆ ಮಾಡಿರುವ ಸಿಬ್ಬಂದಿ ಯಾವುದೇ ಕಾರಣಕ್ಕೂ ಒಂದೇ ಶಾಖೆಯಲ್ಲಿರಬಾರದು ಎಂದು ಸಿವಿವಿ ತನ್ನ ಸಲಹೆಯಲ್ಲಿ ತಿಳಿಸಿದೆ ಎನ್ನಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ನಕಲಿ ಪ್ರಮಾಣ ಪತ್ರಗಳನ್ನು ಸೃಷ್ಟಿಸಿ ಅದರಿಂದ ಸಾವಿರಾರು ಕೋಟಿ ರೂಗಳನ್ನು ಅಕ್ರಮವಾಗಿ ಸಾಲ ಪಡೆದು ವಂಚನೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಈಗಾಗಲೇ ಉದ್ಯಮಿ ನೀರವ್ ಮೋದಿ ಮತ್ತು ಆತನ ಕುಟುಂಬಸ್ಥರು, ಹಾಗೂ ಉದ್ಯಮಿ ಮೆಹುಲ್ ಚೋಕ್ಸಿ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Businessವಾಣಿಜ್ಯನವದೆಹಲಿNew DelhiBank Fraud Caseಬ್ಯಾಂಕ್ ವಂಚನೆ ಪ್ರಕರಣNirav Modiನೀರವ್ ಮೋದಿಪಿಎನ್ ಬಿ ವಂಚನೆ ಪ್ರಕರಣpnb scam
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


