ದೇಶ

ಪಿಎನ್ ಬಿ ವಂಚನೆ ಕೇಸ್ : ಕಮೀಷನ್ ಆಸೆಗೆ ನಕಲಿ ಖಾತರಿ ಪತ್ರ ಒದಗಿಸಿದ್ದ ಸಿಬ್ಬಂದಿ - ಸಿಬಿಐ

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿನ 11.300 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಬ್ಯಾಂಕಿನ ಸಿಬ್ಬಂದಿಯಿಂದ ಮಹತ್ವದ ಮಾಹಿತಿಗಳನ್ನು ಸಿಬಿಐ ಕಲೆಹಾಕಿದೆ,

ಪಿಎನ್ ಬಿ ವಂಚನೆ ಕೇಸ್ : ಕಮೀಷನ್  ಆಸೆಗೆ ನಕಲಿ  ಖಾತರಿ ಪತ್ರ ಒದಗಿಸಿದ್ದ ಸಿಬ್ಬಂದಿ - ಸಿಬಿಐ
ಪಂಜಾಬ್ ನ್ಯಾಷನಲ್ ಬ್ಯಾಂಕಿನ (ಸಾಂದರ್ಭಿಕ ಚಿತ್ರ)
Published On :

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿನ 11.300 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಬ್ಯಾಂಕಿನ ಸಿಬ್ಬಂದಿಯಿಂದ ಮಹತ್ವದ ಮಾಹಿತಿಗಳನ್ನು ಸಿಬಿಐ ಕಲೆಹಾಕಿದೆ,

ಕಮಿಷನ್ ಆಸೆಯಿಂದ ನಕಲಿ ಖಾತರಿ ಪತ್ರ ಒದಗಿಸಿರುವುದು ವಿಚಾರಣೆಯಿಂದ ತಿಳಿದುಬಂದಿದೆ ಎಂದು ಸಿಬಿಐ ತಿಳಿಸಿದೆ.

ಮಂಜೂರು ಮಾಡಿರುವ ಸಾಲದ ಪ್ರಮಾಣಕನ್ನುಗುಣವಾಗಿ ಕಮಿಷನ್ ಒಪ್ಪಂದ ಮಾಡಿಕೊಂಡು ನಕಲಿ ಖಾತರಿ ಪತ್ರ  ಒದಗಿಸಿರುವುದಾಗಿ ಬಂಧಿಸಲ್ಟಟ್ಟಿರುವ ಬ್ಯಾಂಕ್ ಸಿಬ್ಬಂದಿ ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

ಪಂಜಾಬ್ ನ್ಯಾಷನಲ್ ಬ್ಯಾಂಕಿನ ಎಲ್ಲಾ ಸಿಬ್ಬಂದಿಗಳು ಇದರಲ್ಲಿ ಭಾಗಿಯಾಗಿದ್ದು, ದಾಖಲಾತಿಗಳಿಗೆ ಸಂಬಂಧಿಸಿದಂತೆ ಕಮೀಷನ್ ವಿನಿಮಯ ಎಲ್ಲರ ನಡುವೆ ನಡೆದಿದೆ ಎಂದು ಸಿಬಿಐ ಹೇಳಿದೆ.

 ಆರೋಪಿ ನೀರವ್ ಮೋದಿ, ಆತನ ಸಂಬಂಧಿಕರು ಸೇರಿದಂತೆ ಇನ್ನಿತರ ಹೊರಗಡೆಯ ವ್ಯಕ್ತಿಗಳು  ಹಾಗೂ ಬ್ಯಾಂಕಿನ ಅನೇಕ ಸಿಬ್ಬಂದಿಗಳು ಈ ಅವ್ಯವಹಾರ ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಸಿಬಿಐ ತಿಳಿಸಿದೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.