ದೇಶ

ಭಾರತಕ್ಕೆ ಆಗಮಿಸಿದ ಇರಾನ್ ಅಧ್ಯಕ್ಷರಿಗೆ 'ಗಾರ್ಡ್ ಆಫ್ ಹಾನರ್' ಗೌರವ

ಭಾರತ ಪ್ರವಾಸದಲ್ಲಿರುವ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರು ಶನಿವಾರ ದೆಹಲಿಗೆ ಆಗಮಿಸಿದ್ದು, ಭಾರತೀಯ ಸೇನೆಯ ಸೈನಿಕರಿಂದ ಗಾರ್ಡ್ ಆಫ್ ಹಾನರ್ ಗೌರವ ಸ್ವೀಕರಿಸಿದರು.

ಭಾರತಕ್ಕೆ ಆಗಮಿಸಿದ ಇರಾನ್ ಅಧ್ಯಕ್ಷರಿಗೆ 'ಗಾರ್ಡ್ ಆಫ್ ಹಾನರ್' ಗೌರವ
ರಾಷ್ಟ್ರಪತಿ ಭವನದಲ್ಲಿ ರೌಹಾನಿ ಅವರಿಗೆ ಗೌರವ ವಂದನೆ ಸಲ್ಲಿಸಿದ ಸೈನಿಕರು
Published On :
ನವದೆಹಲಿ: ಭಾರತ ಪ್ರವಾಸದಲ್ಲಿರುವ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರು ಶನಿವಾರ ದೆಹಲಿಗೆ ಆಗಮಿಸಿದ್ದು, ಭಾರತೀಯ ಸೇನೆಯ ಸೈನಿಕರಿಂದ ಗಾರ್ಡ್ ಆಫ್ ಹಾನರ್ ಗೌರವ ಸ್ವೀಕರಿಸಿದರು.
ಇಂದು ಬೆಳಗ್ಗೆ ದೆಹಲಿಗೆ ಆಗಮಿಸಿದ ರೌಹಾನಿ ಮೊದಲಿಗೆ ರಾಜ್ ಘಾಟ್ ಗೆ ತೆರಳಿ ಮಹಾತ್ಮಾ ಗಾಂಧಿ ಅವರ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು. ಬಳಿಕ ರಾಷ್ಟ್ರಪತಿ ಭವನಕ್ಕೆ ಆಗಮಿಸಿದ ರೌಹಾನಿ ಅವರಿಗೆ  ರಾಷ್ಟ್ರಪತಿ ಭವನದ ಆವರಣದಲ್ಲಿ ಸೈನಿಕರು ಗೌರವ ವಂದನೆ ಸಲ್ಲಿಕೆ ಮಾಡಿದರು. ಇಂದು ರೌಹಾನಿ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ಜು, ದ್ವಿಪಕ್ಷೀಯ  ಮಾತುಕತೆ ನಡೆಸಲಿದ್ದಾರೆ. ಅಂತೆಯೇ ಉಭಯ ದೇಶಗಳ ನಾಯಕರು ಹಲವು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. 
ನಿನ್ನೆ ಹೈದರಾಬಾದ್ ಗೆ ಆಗಮಿಸಿದ ಇರಾನ್ ಅಧ್ಯಕ್ಷ ಹಸನ್ ರೌಹಾನಿ ಅವರು ಐತಿಹಾಸಿ ಮೆಕ್ಕಾ ಮಸೀದಿಗೆ ಭೇಟಿ ನೀಡಿದರು. ಬಳಿಕ ಖುತುಬ್ ಶಾಹಿ ಆಡಳಿತ ನಡೆಸುತ್ತಿದ್ದ ಗೋಲ್ಕೊಂಡ ಕೋಟೆ ವೀಕ್ಷಿ,ಸಿದ ರೌಹಾನಿ ಬಳಿಕ  ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸಿಎಂಗಳಿಂದ ಆತಿಥ್ಯ ಸ್ವೀಕರಿಸಿದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.