ದೇಶ

ಹೈದರಾಬಾದ್: ಹೆತ್ತ ಮಗಳ ಶಿರಚ್ಛೇದನ ಮಾಡಿ ದೇವರಿಗೆ ಬಲಿ ನೀಡಿದ್ದ ದಂಪತಿ ಬಂಧನ

ಗ್ರಹಣದ ದಿನ ನಿಮ್ಮ ಮಗಳನ್ನು ದೇವರಿಗೆ ಬಲಿ ನೀಡಿದರೆ ನಿಮ್ಮ ಭವಿಷ್ಯ ಉಜ್ವಲವಾಗಲಿದೆ ಎಂದು ಹೇಲಿದ್ದ ಮಂತ್ರವಾದಿಯೊಬ್ಬನ ಮಾತನ್ನು ನಂಬಿದ ದಂಪತಿಗಳು ಹೆತ್ತ ಮಗಳ ಕತ್ತು ಸೀಳಿ ಬಲಿ ಕೊಟ್ಟ .....

ಹೈದರಾಬಾದ್: ಹೆತ್ತ ಮಗಳ ಶಿರಚ್ಛೇದನ ಮಾಡಿ ದೇವರಿಗೆ ಬಲಿ ನೀಡಿದ್ದ ದಂಪತಿ ಬಂಧನ
ಹೈದರಾಬಾದ್: ಹೆತ್ತ ಮಗಳ ಶಿರಚ್ಛೇದನ ಮಾಡಿ ದೇವರಿಗೆ ಬಲಿ ನೀಡಿದ್ದದಂಪತಿ ಬಂಧನ
Published On :
ಹೈದರಾಬಾದ್: ಗ್ರಹಣದ ದಿನ ನಿಮ್ಮ ಮಗಳನ್ನು ದೇವರಿಗೆ ಬಲಿ ನೀಡಿದರೆ ನಿಮ್ಮ ಭವಿಷ್ಯ ಉಜ್ವಲವಾಗಲಿದೆ ಎಂದು ಹೇಲಿದ್ದ ಮಂತ್ರವಾದಿಯೊಬ್ಬನ ಮಾತನ್ನು ನಂಬಿದ ದಂಪತಿಗಳು ಹೆತ್ತ ಮಗಳ ಕತ್ತು ಸೀಳಿ ಬಲಿ ಕೊಟ್ಟ ದಾರುಣ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ಕ್ಯಾಬ್ ಚಾಲಕ ಆಗಿರುವ ಕೆರುಕೊಂಡ ರಾಜಶೇಖರ್ ಮತ್ತು ಪತ್ನಿ ಶ್ರೀಲತಾ ಮಂತ್ರವಾದಿಯ ಸಲಹೆಯಂತೆ ಇತ್ತೀಚೆಗೆ ನಡೆದ ಚಂದ್ರ ಗ್ರಹಣದ ದಿನ (ಜ.31) ತಮ್ಮ ಮಗಳನ್ನು ದೇವರಿಗೆ ಬಲಿ ನೀಡಿದ್ದಾರೆ. ಮಾಂತ್ರಿಕನ ಸಲಹೆಯಂತೆ ಅಂದು ಮಗುವನ್ನು ಕರೆದುಕೊಂಡು ನದಿ ತಟಕ್ಕೆ ತೆರಳಿದ್ದ ದಂಪತಿ ಅಲ್ಲಿ ಮಗುವಿನ ಕತ್ತು ಸೀಳಿ ಕೊಂದಿದ್ದಾರೆ. ಆ ಬಳಿಕ ಮಗುವಿನ ತಲೆಗೆ ಪೂಜೆ ನೆರವೇರಿಸಲಿಕ್ಕಾಗಿ ಮನೆಗೆ ತಂದಿದ್ದಾರೆ ಎಂಡು ಪೋಲೀಸರು ತಿಳಿಸಿದರು.
ಕ್ಯಾಬ್ ಚಾಲಕನ ಮನೆ ಮೇಲಿನ ಟೆರೇಸ್ ನಲ್ಲಿ ಸಿಕ್ಕ ಮಗುವಿನ ತಲೆಬುರುಡೆಯಿಂದಾಗಿ ಘಟನೆ ಬೆಳಕಿಗೆ ಬಂದಿದೆ. 
ಮನೆಗೆ ಬಂದ ದಂಪತಿಗಳು ಮಗುವಿನ ತಲೆಯನ್ನಿಟ್ಟು ಪೂಜೆ ನೆರವೇರಿಸಿದ್ದಲ್ಲದೆ ಮಾಂತ್ರಿಕನ ಮಾತಿನಂತೆ ಟೆರೇಸ್ ನ ಒಂದು ದಿಕ್ಕಿನಲ್ಲಿ ಆ ತಲೆಯನ್ನಿಟ್ಟಿದ್ದರು. ಟೆರೇಸ್ ನಲ್ಲಿ ಮಗುವಿನ ತಲೆ ಕಂಡ ನೆರೆ ಮನೆಯವರು ದಂಪತಿಯ ವಿರುದ್ಧ ಪೋಲೀಸರಿಗೆ ದೂರು ಸಲ್ಲಿಸಿದ್ದು ಇದೀಗ ಪೋಲೀಸರು ದಂಪತಿಗಳನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.