ದೇಶ

ಮಂಗಳೂರು: ಪ್ರಿಯಕರ ಸೇರಿ ಮೂವರಿಂದ ದಲಿತ ಮಹಿಳೆ ಗ್ಯಾಂಗ್ ರೇಪ್

ಪ್ರಿಯಕರ ಆತನ ಇಬ್ಬರು ಸ್ನೇಹಿತರ ಸೇರಿ ನನ್ನನ್ನು ಅತ್ಯಾಚಾರಿಸಿದ್ದಾರೆ ಎಂದು ದಲಿತ ಮಹಿಳೆ ದೂರು ನೀಡಿದ್ದಾಳೆ.

ಮಂಗಳೂರು: ಪ್ರಿಯಕರ ಸೇರಿ ಮೂವರಿಂದ ದಲಿತ ಮಹಿಳೆ ಗ್ಯಾಂಗ್ ರೇಪ್
ಅತ್ಯಾಚಾರ
Published On :
ಮಂಗಳೂರು: ಪ್ರಿಯಕರ ಆತನ ಇಬ್ಬರು ಸ್ನೇಹಿತರ ಜತೆ ಸೇರಿ ನನ್ನನ್ನು ಅತ್ಯಾಚರಿಸಿದ್ದಾರೆ ಎಂದು ದಲಿತ ಮಹಿಳೆ ದೂರು ನೀಡಿದ್ದಾಳೆ. 
ಕಳೆದ ನವೆಂಬರ್ ತಿಂಗಳಲ್ಲಿ ಮೂವರು ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ನನ್ನ ಪ್ರಿಯಕರ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡ ನಂತರ ಆತನ ಇಬ್ಬರು ಸ್ನೇಹಿತರಿಗೆ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳುವಂತೆ ಪ್ರೋತ್ಸಾಹಿಸಿದನು ಎಂದು 24 ವರ್ಷದ ಸಂತ್ರಸ್ತ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಪುತ್ತೂರಿನ ಸರ್ವೆ ಗ್ರಾಮದ ಮಹಿಳೆ ನಾನು ದಿನೇಶ್ ಗೌಡ ಎಂಬಾತನನ್ನು ಪ್ರೀತಿಸುತ್ತಿದ್ದೆ. ನನ್ನನ್ನು ಮದುವೆಯಾಗುವುದಾಗಿ ನಂಬಿಸಿ ಕಳೆದ ಒಂದೂವರೆ ವರ್ಷದಿಂದ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಇದರ ಫಲವಾಗಿ ನಾನು ಗರ್ಭಿಣಿಯಾಗಿದ್ದೇನೆ ಎಂದು ಆರೋಪಿಸಿದಳು. 
ಕಳೆದ ನವೆಂಬರ್ ತಿಂಗಳಲ್ಲಿ ಗೌಡ ಮತ್ತು ಆತನ ಇಬ್ಬರು ಸ್ನೇಹಿತರಾದ ಸಂತೋಷ್ ಮತ್ತು ಸತೀಶ್ ರೂಂಗೆ ಬಂದು ನನ್ನನ್ನು ರೇಪ್ ಮಾಡುವಂತೆ ಸ್ನೇಹಿತರಿಗೆ ತಿಳಿಸಿದ್ದ. ಇದಾದ ನಂತರ ಆತ ಇದರ ಪ್ರಯೋಜನ ಪಡೆದು ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದು ಇದರ ಫಲವಾಗಿ ನಾನು ಇಂದು ಗರ್ಭಿಣಿಯಾಗಿದ್ದೇನೆ ಎಂದು ಆರೋಪಿಸಿದಳು. 
ಹಲವು ಬಾರಿ ಆತನ ಮನವೊಳಿಸಲು ಪ್ರಯತ್ನಿಸಿದ್ದು ನನ್ನ ಪ್ರಯತ್ನಗಳೆಲ್ಲಾ ವ್ಯರ್ಥವಾಯಿತು. ಈ ಹಿನ್ನೆಲೆಯಲ್ಲಿ ಮಹಿಳೆ ಪುತ್ತೂರ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.