ಸುಂಜವಾನ್ ದಾಳಿ: ಭಯೋತ್ಪಾದಕರನ್ನು ಗುರುತಿಸಿ ಹೀರೋ ಆದ ಸಿಆರ್ ಪಿಎಫ್ ಯೋಧ
ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರ ಗುಂಪು ಫೆಬ್ರವರಿ 10 ರಂದು ಮುಂಜಾನೆ ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್ ಫ್ಯಾಂಟ್ರಿಯ 36ನೇ ಬ್ರಿಗೇಡ್ ನ .........

Published On :
ನವದೆಹಲಿ: ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರ ಗುಂಪು ಫೆಬ್ರವರಿ 10 ರಂದು ಮುಂಜಾನೆ ಜಮ್ಮು ಮತ್ತು ಕಾಶ್ಮೀರ ಲೈಟ್ ಇನ್ ಫ್ಯಾಂಟ್ರಿಯ 36ನೇ ಬ್ರಿಗೇಡ್ ನ ಶ್ಬಿರದ ಮೇಲೆ ದಾಳಿ ನಡೆಸಿ ಐದು ಸೈನಿಕರು ಸೇರಿದಂತೆ ಆರು ಜನರನ್ನು ಹತ್ಯೆ ಮಾಡಿತ್ತು. ಘಟನೆಯಲ್ಲಿ ಇಬ್ಬರು ಅಧಿಕಾರಿಗಳು ಆರು ಮಹಿಳೆಯರು, ಮಕ್ಕಳು ಸೇರಿ ಹತ್ತು ಮಂದಿ ಗಾಯಗೊಂಡಿದ್ದರು.
ಶೌರ್ಯ ಹಾಗೂ ಸಮಯೋಚಿತ ಎಚ್ಚರಿಕೆಯಿಂದಾಗಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸಬಹುದಾಗಿದ್ದ ಸಾವನ್ನು ತಪ್ಪಿಸಲಾಗಿದೆ ಎಂಡು ಸಿಆರ್ ಪಿಎಫ್ ಕಾನ್ಸ್ಟೇಬಲ್ ರಘುನಾಥ್ ಘೈತ್ ಹೇಳಿದ್ದಾರೆ.
ಮುಂಜಾನೆ 4:30ರ ಸುಮಾರಿಗೆ 23 ಬಿಎನ್ ಕರಣ್ ನಗರ್ ಸಿಆರ್ ಪಿಎಫ್ ಸೈನಿಕರು ಬ್ಯಾಗ್ ಗಳು, ಎಕೆ -47 ರೈಫಲ್ಗಳೊಂದಿಗೆ ಶಸ್ತ್ರಸಜ್ಜಿತರಾಗಿದ್ದ ಇಬ್ಬರು ಭಯೋತ್ಪಾದಕರನ್ನು ವಶಕ್ಕೆ ಪಡೆದಿದ್ದರು. ಭಯೋತ್ಪಾದಕರು ಅತ್ಯಂತ ವೇಗದಲ್ಲಿ ಒಳದಾರಿಗಳಿಂದ ಪಲಾಯನ ಮಾಡುವುದರಿಂದ ನಾವು ಜಾಗರೂಕರಾಗಿದ್ದೆವು. ಅವರು ಗೋಲ್ ಮಾರ್ಕೆಟ್, ಕರಣ್ ನಗರ್ ನ ನಿರ್ಮಾಣ ಹಂತದ ಕಟ್ಟಡದಲ್ಲಿ ಆಶ್ರಯ ಪಡೆದಿದ್ದರು.
ನಮಗೆ ಅವರು ಭಯೋತ್ಪಾದಕರೆನ್ನುವುದು ತಿಳಿದು ಹೋಗಿತ್ತು. ನಾನು ಸಮೀಪ ಹೋಗುವ ವೇಳೆ ಬೆಳಗ್ಗೆ 4.30-5 ಆಗಿತ್ತು. ನಾವು ಭಯೋತ್ಪಾದಕರು ನಮ್ಮ ಶ್ಬಿರದ ಒಳ ನುಸುಳುವ ಮುನ್ನವೇ ಅವರನ್ನು ಬಂಧಿಸಿದ್ದೆವು, ಅವರು ಶಿಬಿರದೊಳಗೆ ನುಗ್ಗಿದ್ದರೆ ಇನ್ನಷ್ಟು ಅನಾಹುತಗಳಗುತ್ತಿದ್ದದ್ದರಲ್ಲಿ ಅನುಮಾನವಿಲ್ಲ. ಘೈತ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


