ಪಾನ್ ಮಸಾಲಾ ಜಾಹಿರಾತು: ಹಾಲಿವುಡ್ ನಟ ಪಿಯರ್ಸ್ ಬ್ರಾಸ್ನನ್ ಗೆ ದೆಹಲಿ ಸರ್ಕಾರದಿಂದ ಶೋಕಾಸ್ ನೋಟಿಸ್
ಪಾನ್ ಮಸಾಲಾ ಜಾಹಿರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಹಾಲಿವುಡ್ ನಟ ಪಿಯರ್ಸ್ ಬ್ರಾಸ್ನನ್ ಗೆ ದೆಹಲಿ ಸರ್ಕಾರ ಶೋಕಾಸ್ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

Published On :
ನವದೆಹಲಿ: ಪಾನ್ ಮಸಾಲಾ ಜಾಹಿರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಹಾಲಿವುಡ್ ನಟ ಪಿಯರ್ಸ್ ಬ್ರಾಸ್ನನ್ ಗೆ ದೆಹಲಿ ಸರ್ಕಾರ ಶೋಕಾಸ್ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
'ರೆಮಿಂಗ್‌ಟನ್ ಸ್ಟೀಲ್' ಮತ್ತು 'ಎಂ16 ಏಜೆಂಟ್ ಜೇಮ್ಸ್ ಬಾಂಡ್' ಚಿತ್ರಗಳಲ್ಲಿ ಪತ್ತೆದಾರನ ಪಾತ್ರಗಳ ಮೂಲಕ ಖ್ಯಾತಿ ಪಡೆದಿರುವ ಪಿಯರ್ಸ್ ಬ್ರಾಸ್ನನ್, ಭಾರತ ಮೂಲದ ತಂಬಾಕು ಉತ್ಪನ್ನವೊಂದರ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ. ನಟ ಈ ವಿವಾದಿತ ಜಾಹಿರಾತು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯಿದೆ-2003ರ ಉಲ್ಲಂಘನೆಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ನಟ ಪಿಯರ್ಸ್ ಬ್ರಾಸ್ನನ್ ಶೋಕಾಸ್ ಜಾರಿ ಮಾಡಿದೆ.
ದೆಹಲಿ ಆರೋಗ್ಯ ಇಲಾಖೆಯ ಉಪ ನಿರ್ದೇಶಕ ಎಸ್ ಕೆ ಆರೋರಾ ಅವರು ಈ ಜಾಹಿರಾತಿಗೆ ಸಂಬಂಧಿಸಿದಂತೆ ನಟ ಪಿಯರ್ಸ್ ಬ್ರಾಸ್ನನ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಅರೋರಾ ಅವರು, ಸಂಸ್ಥೆಯ ಮೂಲಕ ನಟನಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಈ ಹಿಂದೆಯೂ ನೋಟಿಸ್ ನೀಡಲಾಗಿತ್ತು. ಆದರೆ ಇದಕ್ಕೆ ಯಾವುದೇ ಪ್ರತಿಕ್ರಿಯ ಬಂದಿರಲಿಲ್ಲ. ಹೀಗಾಗಿ ಮತ್ತೆ ನೋಟಿಸ್ ಜಾರಿ ಮಾಡಿದ್ದೇವೆ ಎಂದು ಆರೋರಾ ಹೇಳಿದ್ದಾರೆ. ಅಲ್ಲದೆ ಮುಂದಿನ 10 ದಿನಗಳೊಳಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಬೇಕು ಎಂದು ಗಡವು ಕೂಡ ನೀಡಲಾಗಿದೆ ಎನ್ನಲಾಗಿದೆ.
ಇನ್ನು ಪ್ರಸ್ತುತ ನಟ ಪಿಯರ್ಸ್ ಬ್ರಾಸ್ನನ್ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಅವರಿಗೆ ಶಿಕ್ಷೆಯಾದರೆ, ಅವರಿಗೆ 5 ಸಾವಿರ ದಂಡ ಮತ್ತು 2 ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
2016ರಲ್ಲೇ ಜಾಹಿರಾತು ಕುರಿತು ಸ್ಪಷ್ಟನೆ ನೀಡಿದ್ದ ನಟ
ಭಾರತದಲ್ಲಿ ಪ್ರಕಟವಾಗಿರುವ 'ಪಾನ್ ಬಹಾರ್' ಜಾಹೀರಾತಿಗೆ ತಮ್ಮ ಚಿತ್ರವನ್ನು ಅನಧಿಕೃತವಾಗಿ ಬಳಸಿಕೊಳ್ಳಲಾಗಿದೆ ಎಂದು ಜೇಮ್ಸ್ ಬಾಂಡ್ ಖ್ಯಾತಿಯ ಐರಿಷ್ ನಟ ಪಿಯರ್ಸ್ ಬ್ರಾನ್ಸನ್ 2016ರಲ್ಲೇ ಆರೋಪಿಸಿದ್ದರು. ಜಾಹೀರಾತನ್ನು ಕಂಡು ತಮಗೆ ಆಘಾತವಾಯಿತು ಎಂದು ಹೇಳಿದ್ದ ಬ್ರಾನ್ಸನ್, ''ಕ್ಯಾನ್ಸರ್‌ನಿಂದಾಗಿ ನನ್ನ ಮೊದಲ ಪತ್ನಿ, ಮಗಳು ಮತ್ತು ಅನೇಕ ಗೆಳೆಯರನ್ನು ಕಳೆದುಕೊಂಡಿದ್ದೇನೆ. ಈಗ ಕ್ಯಾನ್ಸರ್ ಗೆ ಕಾರಣವಾಗುವ ತಂಬಾಕು ಉತ್ಪನ್ನಗಳಿಗೆ ನಾನು ಮಾಡೆಲ್ ಆಗಲು ಹೇಗೆ ಸಾಧ್ಯ? ನನ್ನ ಚಿತ್ರ ಬಳಸಿ ವಂಚಿಸಲಾಗಿದ್ದು, ತೀವ್ರ ಆಘಾತ ಮತ್ತು ದುಃಖವಾಗಿದೆ. ದಶಕಗಳ ಕಾಲ ಮಹಿಳೆಯ ಆರೋಗ್ಯ, ಪರಿಸರ ರಕ್ಷಣೆ ಮತ್ತಿತರ ವಿಷಯಗಳ ಬಗ್ಗೆ ಆಂದೋಲನ ಮಾಡಿಕೊಂಡು ಬಂದವನು ನಾನು. ಪಾನ್ ಮಸಾಲಾ ಉತ್ಪನ್ನಕ್ಕೆ ನನ್ನ ಚಿತ್ರ ಬಳಸಿ ಚಾರಿತ್ಯಕ್ಕೆ ಧಕ್ಕೆ ತರಲಾಗಿದೆ. ತಾಜಾ ಉಸಿರು/ಹಲ್ಲಿನ ಬಿಳುಪಿನ ಉತ್ಪನ್ನದ ಜಾಹೀರಾತಿಗೆ ಸಹಿ ಹಾಕಿದ್ದೇನೆಯೇ ಹೊರತು, ಆರೋಗ್ಯಕ್ಕೆ ಮಾರಕವಾದ ಯಾವುದೇ ಉತ್ಪನ್ನದ ಜಾಹೀರಾತಿನ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ಬ್ರಾನ್ಸನ್ ಸ್ಪಷ್ಟೀಕರಣ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhiHollywoodDelhi governmentದೆಹಲಿ ಸರ್ಕಾರPan Masala AdPierce Bronsanಪಾನ್ ಮಸಾಲಾ ಜಾಹಿರಾತುಪಿಯರ್ಸ್ ಬ್ರಾಸ್ನನ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


