ಭಾರತೀಯ ಸೇನೆಗಾಗಿ ಮೆಗಾ ಶಸ್ತ್ರಾಸ್ತ್ರ ಖರೀದಿಗೆ ರಕ್ಷಣಾ ಇಲಾಖೆ ಅನುಮೋದನೆ!
ಬಜೆಟ್ ಮಂಡಣೆ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಖರೀದಿಗೆ ಅನುಮೋದನೆ ನೀಡಿದ್ದು, ಭಾರತೀಯ ಸೇನೆಯ ಮೂರೂ ವಿಭಾಗಗಳಿಗಾಗಿ ಸುಮಾರು 15,935 ಕೋಟಿ ರೂ.ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಮುಂದಾಗಿದೆ.

Published On :
ನವದೆಹಲಿ: ಬಜೆಟ್ ಮಂಡಣೆ ಬಳಿಕ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಭಾರತೀಯ ಸೇನೆಗೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಖರೀದಿಗೆ ಅನುಮೋದನೆ ನೀಡಿದ್ದು, ಭಾರತೀಯ ಸೇನೆಯ ಮೂರೂ ವಿಭಾಗಗಳಿಗಾಗಿ ಸುಮಾರು 15,935 ಕೋಟಿ ರೂ.ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಮುಂದಾಗಿದೆ.
ಭಾರತದ ನೌಕಾ ದಳ, ವಾಯುದಳ ಮತ್ತು ಭೂ ದಳಗಳ ಸೈನಿಕರಿಗಾಗಿ ಒಟ್ಟು 7.40 ಲಕ್ಷ ಅಸಾಲ್ಟ್ ರೈಫಲ್ ಗಳು,1,819 ಕೋಟಿ ರೂ. ಮೌಲ್ಯದ ಲೈಟ್ ಮಶೀನ್ ಗನ್ ಗಳು ಮತ್ತು 982 ಕೋಟಿ ರೂ.ಮೌಲ್ಯದ 5,719 ಸ್ನೈಪರ್ ರೈಫಲ್ ಗಳ ಖರೀದಿಗೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಸೇನೆಯ ಪ್ರಸ್ತಾವನೆಗೆ ಕೇಂದ್ರ ರಕ್ಷಣಾ ಇಲಾಖೆ ಅನುಮೋದನೆ ಕೂಡ ನೀಡಿದ್ದು, ಇದಲ್ಲದೆ ಕೇಂದ್ರ ಸರ್ಕಾರ 2018ರ ಜನವರಿಯಲ್ಲಿ ಡಿಫೆನ್ಸ್ ಅಕ್ವಿಸಿಶನ್ ಕೌನ್ಸಿಲ್ 72,400 ಅಸಾಲ್ಟ್ ರೈಫಲ್‌ಗಳು ಮತ್ತು 3,547 ಕೋಟಿ ರೂ. ಮೌಲ್ಯದ 93,895 ಕಾರ್ಬೈನ್‌ಗಳನ್ನು ಖರೀದಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಿತ್ತು.
ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿ ಭಾರತಕ್ಕೆ ಎದುರಾಗಿರುವ ಬೆದರಿಕೆಗಳನ್ನು ಹಿಮ್ಮೆಟ್ಟಿಸುವ ಸಲುವಾಗಿ ಆದಷ್ಟು ಬೇಗ ಶಸ್ತ್ರಾಸ್ತ್ರಗಳನ್ನು ಖರೀದೀಸಬೇಕೆಂದು ಭಾರತೀಯ ಸೇನಾ ಪಡೆ ಸರ್ಕಾರದ ಮೇಲೆ ಒತ್ತಡ ಹೇರಿತ್ತು. ಅಲ್ಲದೆ ಭಾರತೀಯ ಸೇನೆಯ ಬಳಿ ಸಾಕಷ್ಟು ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳಿಲ್ಲ ಎಂದು ಸೇನಾಧಿಕಾರಿಗಳು ಕೇಂದ್ರಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.
ಮೇಕ್ ಇನ್ ಇಂಡಿಯಾಗೆ ಒತ್ತು
1988ರಿಂದಲೂ ಎಕೆ–47 ಮತ್ತು ದೇಶೀಯವಾಗಿ ತಯಾರಿಸಿದ ಚಿಕ್ಕ ‘ಇನ್ಸಾಸ್’ ರೈಫಲ್‌ಗಳನ್ನು ಯೋಧರು ಬಳಸುತ್ತಿದ್ದಾರೆ. ಪ್ರಸ್ತುತ ಕೇಂದ್ರ ಸರ್ಕಾರ ಮೆಗಾ ಶಸ್ತ್ರಾಸ್ತ್ರ ಖರೀದಿಗೆ ಮುಂದಾಗಿದೆಯಾದರೂ, ಈ ಶಸ್ತ್ರಾಸ್ತ್ರಗಳನ್ನು ಭಾರತದಲ್ಲೇ ತಯಾರಿಸುವ ಯೋಜನೆ ಕೂಡ ಸರ್ಕಾರದ ಮುಂದಿದೆ. ವಿದೇಶದಿಂದ ಹೊಸದಾಗಿ ಖರೀದಿಸಲು ಉದ್ದೇಶಿಸಿರುವ ಅಸಾಲ್ಟ್ ರೈಫಲ್‌ಗಳ ಮೂಲ ವಿನ್ಯಾಸ ಉಳಿಸಿಕೊಂಡು ಭಾರತದಲ್ಲಿಯೇ ತಯಾರಿಸಲು ಸರ್ಕಾರ ಉದ್ದೇಶಿಸಿದೆ. ಪ್ರಸ್ತುತ ನೈಪರ್ ರೈಫಲ್ ಮೈಲುಗಟ್ಟಲೇ ದೂರದ ಗುರಿಯನ್ನು ನಿಖರವಾಗಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದ್ದು, ಭೂಸೇನೆ ಹೆಚ್ಚಾಗಿ ಈ ಆಯುಧಗಳನ್ನು ಬಳಸುತ್ತದೆ. ಯುದ್ಧ ಹಡಗು ಮತ್ತು ಜಲಾಂತ ರ್ಗಾಮಿಗಳ ಮೇಲೆ ದಾಳಿ ನಡೆಸುವ ಕ್ಷಿಪಣಿಗಳನ್ನು ಹೊಡೆದುರುಳಿಸುವ ಕ್ಷಿಪಣಿ ನಿರೋಧಕ ವ್ಯವಸ್ಥೆ ‘ಮರೀಚ್’ ಖರೀದಿಸಲು ನೌಕಾಪಡೆಗೆ ಅನುಮೋದನೆ ನೀಡಲಾಗಿದೆ.
ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ (ಡಿಆರ್‌ಡಿಒ) ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾವನ್ನು ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಸಂಸ್ಥೆಯಿಂದ ರೂ.850 ಕೋಟಿ ವೆಚ್ಚದಲ್ಲಿ ಖರೀದಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew DelhiIndian Armyಕೇಂದ್ರ ಸರ್ಕಾರDefenceಭಾರತೀಯ ಸೇನೆunion Governmentdefence purchaseರಕ್ಷಣಾ ಖರೀದಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


