ಕೆಟ್ಟ ದೃಷ್ಟಿಯಿಂದ ಬೆಳೆಯನ್ನು ರಕ್ಷಿಸಲು ಗದ್ದೆಯಲ್ಲಿ ಸನ್ನಿ ಲಿಯೋನ್ ಚಿತ್ರ! ಆಂಧ್ರ ರೈತನಿಂದ ವಿಚಿತ್ರ ಪ್ರಯೋಗ
ತಮ್ಮ ಬೆಳೆಗೆ ಏನೂ ಆಗದಿರಲಿ ಎಂದು ಹಳ್ಳಿಯ ರೈತರು ಬೆದರುಗೊಂಬೆ, ದೃಷ್ಟಿ ಗೊಂಬೆಗಳನ್ನು ತಮ್ಮ ಜಮೀನಿನಲ್ಲಿ ಇಟ್ಟಿರುವುದನ್ನು ನಾವು ಕಾಣುತ್ತೇವೆ.

Published On :
ನೆಲ್ಲೂರು(ಆಂಧ್ರ ಪ್ರದೇಶ): ತಮ್ಮ ಬೆಳೆಗೆ ಏನೂ ಆಗದಿರಲಿ ಎಂದು ಹಳ್ಳಿಯ ರೈತರು ಬೆದರುಗೊಂಬೆ, ದೃಷ್ಟಿ ಗೊಂಬೆಗಳನ್ನು ತಮ್ಮ ಜಮೀನಿನಲ್ಲಿ ಇಟ್ಟಿರುವುದನ್ನು ನಾವು ಕಾಣುತ್ತೇವೆ. ಆದರೆ ಆಂಧ್ರ ಪ್ರದೇಶದ ರೈತನೊಬ್ಬ ತನ್ನ ಬೆಳೆಯ ರಕ್ಷಣೆಗಾಗಿ ನಟಿ ಸನ್ನಿ ಲಿಯೋನ್ ಳ ದೊಡ್ಡ ಫ್ಲೆಕ್ಸ್ ಗಳನ್ನು ಗದ್ದೆಯ ಸುತ್ತಲೂ ಹಾಕಿದ್ದಾರೆ!
ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಬಂಡಕಿಂದಪಲ್ಲಿ ಗ್ರಾಮದ ಕೃಷಿಕ ಅಂಕಿನಪಲ್ಲಿ ಚೆಂಚು ರೆಡ್ಡಿ ಈ ವಿಚಿತ್ರ ಪ್ರಯೋಗ ನಡೆಸಿದ ರೈತ. ಚಿತ್ರದಲ್ಲಿ ಕೆಂಪು ಬಿಕಿನಿ ತೊಟ್ಟಿರುವ ಸನ್ನಿ ಲಿಯೋನ್ ಚಿತ್ರವನ್ನು ಗದ್ದೆಯಂಚಿನ ಉದ್ದಕ್ಕೂ ಹಾಕಿದ್ದು ಇದರಲ್ಲಿ ನಟಿ "ನನ್ನನ್ನು ಕಂಡು ಮರುಗಬೇಡ, ಅಳಬೇಡ" ಎಂದು ಹೇಳುತ್ತಿದ್ದಾಳೆ.
ರೈತ ಚೆಂಚು ರೆಡ್ಡಿ ತನ್ನ 10 ಎಕರೆ ಜಮೀನಿನಲ್ಲಿ ಎಲೆಕೋಸು, ಹೂಕೋಸು, ಓಕ್ರಾ, ಮತ್ತು ಮೆಣಸಿನಕಾಯಿ ಇದೇ ಮೊದಲಾದವನ್ನು ಬೆಳೆಯುತ್ತಿದ್ದರು. ರಸ್ತೆಯ ಪಕ್ಕದಲ್ಲೇ ಇದ್ದ ಜಮೀನಿನಲ್ಲಿ ಮೊದ ಮೊದಲು ಚೆನ್ನಾಗಿ ಬೆಳೆ ಬರುತ್ತಿತ್ತು. ಆದರೆ ಊರ ಜನರ ದೃಷ್ಟಿ ಬಿದ್ದ ಕಾರಣ ಕೆಲವು ವರ್ಷಗಳಿಂದ ಬೆಳೆಯೆಲ್ಲವೂ ಹಾಳಾಗುತ್ತಿತ್ತು. ವರ್ಷದಲ್ಲಿ ಹೂಡಿದ್ದ ಬಂಡವಾಳವನ್ನು ತೆಗೆಯುವುದೇ ಕಷ್ಟವಾಗುತ್ತಿತ್ತು. ಆಗ ಕೃಷಿಕ ಸ್ನೇಹಿತರ ಬಳಿ ಸಲಹೆ ಕೇಳಿದ್ದಾರೆ.
ರಸ್ತೆ ಬದಿ ಕೃಷಿ ಭೂಮಿ ಇದ್ದ ಕಾರಣ ರಸ್ತೆ ಮಾರ್ಗದಲ್ಲಿ ಬರುವವರೆಲ್ಲಾ ನಿನ್ನ ಬೆಳೆಯನ್ನು ಕಂಡು ಕರುಬುತ್ತಿದ್ದಾರೆ. ಅವರ ದೃಷ್ಟಿ ತಾಕಬಾರದ ಹಿನ್ನೆಲೆಯಲ್ಲಿ ನೀನಿ ನಟಿ ಸನ್ನಿ ಲಿಯೋನ್ ಅವರ ಬಿಕಿನಿ ಚಿತ್ರವನ್ನು ಸುತ್ತಲೂ ಅಂಟಿಸುವಂತೆ ಸಲಹೆ ನೀಡಿದ್ದಾರೆ. ಅದರಂತೆ ಕೃಷಿಕ ಚೆಂಚಿ ರೆಡ್ಡಿ ಜನವರಿ 13ರಂದು ಬಿಕಿನಿ ಚಿತ್ರವಿರುವ ಸನ್ನಿ ಫೋಟೋವನ್ನು ಜಮೀನಿನ ಸುತ್ತ ಅಳವಡಿಸಿದ್ದಾರೆ. ಇದರಿಂದ ನಮ್ಮ ಬೆಳೆಯ ಫಸಲು ಹೆಚ್ಚುತ್ತಿದೆ ಎಂದು ಅವರು ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಸಧ್ಯ ಈ ಪೊಸ್ಟರ್ ಸಾಮಾಜಿಕ ತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದಕ್ಕೂ ಹಿಂದೆ 2016ರಲ್ಲಿ ಕೇರಳದ ಕಾಲೇಜೊಂದರಲ್ಲಿ ಹೊಸ ಬ್ಯಾಚ್ ನ ವಿದ್ಯಾರ್ಥಿಗಳ ಸ್ವಾಗತಕ್ಕಾಗಿ ಸನ್ನಿ ಲಿಯೋನ್ ಹಾಗೂ ಮಿಯಾ ಕಲೀಫಾ ಪೋಸ್ಟರ್ ಹಾಕಿದ್ದನ್ನು ನಾವಿಲ್ಲಿ ಸ್ಮರಿಸಬಹುದು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


