ದೇಶ

ಫಡ್ನವೀಸ್ ಸರ್ಕಾರದ ವಿರುದ್ಧ ಎನ್ ಸಿಪಿ ಹಲಾಬೊಲ್ ಪ್ರಚಾರ : ಫೆ.15ರಿಂದ ಮೂರನೇ ಹಂತ ಆರಂಭ

ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಉತ್ತರ ಮಹಾರಾಷ್ಟ್ರ ಭಾಗಗಳಲ್ಲಿ ಹಲಾಬೊಲ್ ಹೆಸರಿನಲ್ಲಿ 21 ಸಾರ್ವಜನಿಕ ಸಭೆಯನ್ನು ಆಯೋಜಿಸಿದೆ.

ಫಡ್ನವೀಸ್ ಸರ್ಕಾರದ ವಿರುದ್ಧ ಎನ್ ಸಿಪಿ ಹಲಾಬೊಲ್  ಪ್ರಚಾರ :  ಫೆ.15ರಿಂದ ಮೂರನೇ ಹಂತ ಆರಂಭ
ನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ (ಸಾಂದರ್ಭಿಕ ಚಿತ್ರ)
Published On :

ಮುಂಬೈ : ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಉತ್ತರ ಮಹಾರಾಷ್ಟ್ರ ಭಾಗಗಳಲ್ಲಿ  ಹಲಾಬೊಲ್ ಹೆಸರಿನಲ್ಲಿ 21 ಸಾರ್ವಜನಿಕ ಸಭೆಯನ್ನು ಆಯೋಜಿಸಿದೆ.

ಎಳು ದಿನಗಳ ಪ್ರಚಾರ ಕಾರ್ಯಕ್ರಮದಲ್ಲಿ ಈಗಾಗಲೇ ಎರಡು ಹಂತ ಪೂರ್ಣಗೊಂಡಿದ್ದು, ಇದೇ 15 ರಿಂದ ಮೂರನೇ ಹಂತ ಪ್ರಾರಂಭವಾಗಲಿದೆ.ಶ್ರಿಗೊಂಡಾದಿಂದ ಆರಂಭವಾಗುವ ಪ್ರಚಾರ  ಅಹಮದ್ ನಗರ್, ನಾಸಿಕ್, ಜಲ್ ಗೊಯಾನ್ ಮತ್ತು ದುಲೈ ಜಿಲ್ಲೆಗಳಲ್ಲಿ ಸಾಗಲಿದೆ ಎಂದು ಪಕ್ಷದ ವಕ್ತಾರ ನವಾಬ್ ಮಲ್ಲಿಕ್ ತಿಳಿಸಿದ್ದಾರೆ.

ನಾಸಿಕ್ ನಲ್ಲಿ ಮಾರ್ಚ್ 10 ರಂದು ನಡೆಯುವ ಅಂತಿಮ ಸಭೆಯನ್ನುದ್ದೇಶಿಸಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಭಾಷಣ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

ಸರ್ಕಾರದ ವೈಫಲ್ಯವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಈ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವಿದರ್ಭ ಹಾಗೂ ಮರಾಠವಾಡದಲ್ಲಿಯೂ ಪ್ರಚಾರ ನಡೆಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.