ಅಹಮದಾಬಾದ್‌ನಲ್ಲಿ ವ್ಯಾಲೆಂಟೈನ್ಸ್ ಡೇ ವಿರೋಧಿ ಪೋಸ್ಟರ್‍ಗಳು
ಫೆಬ್ರವರಿ 14ರಂದು ವ್ಯಾಲೆಂಟೈನ್ಸ್ ಡೇ ಆಚರಣೆ ಹಿನ್ನೆಲೆಯಲ್ಲಿ ಇದನ್ನು ವಿರೋಧಿಸಿ ಬಜರಂಗ ದಳದ ಕಾರ್ಯಕರ್ತರು ವ್ಯಾಲೆಂಟೈನ್ಸ್ ಡೇ ವಿರೋಧಿ ಪೋಸ್ಟರ್‍ಗಳು ಅಂಟಿಸಿದ್ದಾರೆ...

Published On :
ಅಹಮದಾಬಾದ್(ಗುಜರಾತ್): ಫೆಬ್ರವರಿ 14ರಂದು ವ್ಯಾಲೆಂಟೈನ್ಸ್ ಡೇ ಆಚರಣೆ ಹಿನ್ನೆಲೆಯಲ್ಲಿ ಇದನ್ನು ವಿರೋಧಿಸಿ ಬಜರಂಗ ದಳದ ಕಾರ್ಯಕರ್ತರು ವ್ಯಾಲೆಂಟೈನ್ಸ್ ಡೇ ವಿರೋಧಿ ಪೋಸ್ಟರ್‍ಗಳು ಅಂಟಿಸಿದ್ದಾರೆ.
ಪೋಸ್ಟರ್‍ಗಳಲ್ಲಿ ವ್ಯಾಲೆಂಟೈನ್ಸ್ ಡೇ ಆಚರಣೆ ಮತ್ತು ಲವ್ ಜಿಹಾದ್ ಬೇಡ; ಹಿಂದು ಯುವತಿಯರೇ ಹುಷಾರಾಗಿರಿ ಎಂದು ಬರೆಯಲಾಗಿದೆ.
ಇದೇ ಅಲ್ಲದೆ ಸಂಘಟನೆ ವ್ಯಾಲೆಂಟೈನ್ಸ್ ಡೇ ಹಿನ್ನಲೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿರುವ ಹೈದರಬಾದ್ ನ ಕೆಲ ಪಬ್ಸ್ ಮತ್ತು ಕ್ಲಬ್ಸ್ ಗಳಿಗೆ ಬೆದರಿಕೆ ಹಾಕಿದೆ.
ಇನ್ನು ವ್ಯಾಲೆಂಟೈನ್ಸ್ ಡೇ ದಿನ ಬಲಪಂಥೀಯರಿಂದ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಪ್ರತಿ ವರ್ಷ ವರದಿಯಾಗುತ್ತಲೇ ಇರುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


